ಅಥರ್ಗಾದಲ್ಲಿ ಅಜೈವನ್ ಬೆಳೆಗಳ ಉತ್ಪಾದನಾ ತಾಂತ್ರಿಕತೆ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಯುವ ಭಾರತ ಸುದ್ದಿ ಇಂಡಿ :
ಕೃಷಿ ವಿಜ್ಞಾನ ಕೇಂದ್ರ, ಇಂಡಿ ವತಿಯಿಂದ ಎಂ.ಐ.ಡಿ.ಹೆಚ್ ಯೋಜನೆ ಅಡಿಯಲ್ಲಿ ಅಜೈವನ್ ಮತ್ತು ಕಾಳು ಮಸಾಲೆ ಬೆಳೆಗಳ ಉತ್ಪಾದನಾ ತಾಂತ್ರಿಕತೆ ತರಬೇತಿ ಕಾರ್ಯಕಮವನ್ನು ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಆರ್.ಬಿ. ಬೆಳ್ಳಿ, ಸಹ ವಿಸ್ತರಣಾ ನಿರ್ದೇಶಕರು, ಕೃ.ವಿ.ಶಿ.ಕೇ. ವಿಜಯಪುರ,ಅಜೈವನ್ ಅಪಿಯಾಸಿ ಕುಟುಂಬ ವರ್ಗಕ್ಕೆ ಸೇರಿದ್ದು .ಇದು ಒಂದು ಪ್ರಮುಖ ಕಾಳು .ಮಸಾಲೆ ಬೆಳೆಯಾಗಿದೆ. ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ೨೦೨೦ ರಲ್ಲಿ ೨೮,೯೯೭ ಹೇ. ಪ್ರದೇಶದಿಂದ ೨೧,೮೪೧ ಟನ್ ನಷ್ಟು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ವಿಜಯಪುರದಲ್ಲಿ ಒಣ ಬೇಸಾಯದಲ್ಲಿ ಅಜವೈನ್ ಬೆಳೆ ಬೆಳೆಯಲು ರೈತರು ಆಸಕ್ತಿವಹಿಸುತ್ತಿದ್ದಾರೆ. ಕ್ರಮೇಣವಾಗಿ ಬೆಳೆ ವಿಸ್ತೀರ್ಣ ಹೆಚ್ಚಾಗುತ್ತಿದೆ. ಇಂಡಿ ಭಾಗದಲ್ಲಿ ಖೇಡಗಿ, ರೋಡಗಿ, ಲಾಲಸಂಗ, ನಾದ ಕೆ.ಡಿ. ಅಥರ್ಗಾ ಮತ್ತು ಸಾಲೋಟಗಿಯಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದೆ. ರೈತರು ಈ ಬೆಳೆಯ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ರೈತರಿಗೆ ಈ ಬೆಳೆಯ ಕುರಿತು ಮಾಹಿತಿ ಕೊರತೆಯಿದೆ. ಮುಖ್ಯವಾಗಿ ತಳಿ ಆಯ್ಕೆ, ಬೀಜ, ಬಿತ್ತನೆ ಕಾಲ, ಬಿತ್ತನೆ ಆಳ, ಅಂತರ, ಸಂಸ್ಕರಣೆ ಹಾಗೂ ಮಾರುಕಟ್ಟೆ ಕೊರತೆ ಇದೆ. ಹಾಗಾಗಿ ಇಂದು ತರಬೇತಿ ಆಯೋಜಸಿಲಾಗಿದೆ ಎಂದು ಹೇಳಿದರು.
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಪ್ರೇಮಾ ಬಿ. ಪಾಟೀಲ,ಡಾ. ಡಾ. ಎ.ಎಸ್. ಬಗಲಿ,ಡಾ. ಹೀನಾ ಎಂ.ಎಸ್,ಡಾ. ಸವಿತಾ ಬಿ , ಅರ್ಜುನ ಆರ್. ಎಸ್, ರೈತರಾದ ಸಿದ್ದಪ್ಪ ಶಿವಲಿಂಗಪ್ಪ ಭೂಸಗೊಂಡ, ಗ್ರಾಪಂ ಅಧ್ಯಕ್ಷ ಸುವರ್ಣ ಕುಲಪ್ಪ ಸೂಲಿ,ನಾಗರಾಜಗೌಡ ಪಾಟೀಲ್, ಅಶೋಕಗೌಡ ಬಿರಾದಾರ , ಎಸ್. ಕೆ. ಲೊಣಿ, ಎಸ್. ಟಿ. ಪಾಟೀಲ್ ಸೇರಿದಂತೆ ಕಾರ್ಯಕ್ರಮದಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ರೈತರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡರು. ಶಿಲ್ಪಾರಾಣಿ ವಂದಿಸಿದರು.