ಇಂಡಿ : ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ!
ಯುವ ಭಾರತ ಸುದ್ದಿ ಇಂಡಿ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಾಗೂ ವಿಜಯಪುರದಲ್ಲಿ ಡಿ.೩೦ರಂದು ನಡೆಯಲಿರು ಕೃಷ್ಣಾ ಯೋಜನೆಯ ಸಮಾವೇಶದ ಪೂರ್ವಭಾವಿ ಸಭೆ ಬುಧವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ ಅಧ್ಯಕ್ಷತೆಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೊಮಿನ,ಯುವ ಘಟಕದ ಅಧ್ಯಕ್ಷ ಅವಿನಾಶ ಬಗಲಿ,ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸ ಇದೆ.ದೇಶದ ಸ್ವಾತಂತ್ರ್ಯ ಕ್ಕೆ ಹೋರಾಡಿದ ಹಾಗೂ ದೇಶಕ್ಕೆ ಅನೇಕ ಮಹಾನ್ ನಾಯಕರನ್ನು ಕೊಟ್ಟ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಇದೆ.ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ,ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರ ನೇತ್ರತ್ವದಲ್ಲಿ ಕಾಂಗ್ರೆಸ್ ದೇಶ ಹಾಗೂ ಜನರ ಹಿತಕ್ಕಾಗಿ ತನ್ನ ಕಾರ್ಯಗಳನ್ನು ಮುಂದುವರೆಸಿದೆ.
ಈ ದೇಶದ ಇತಿಹಾಸ ಕಂಡ ಪ್ರಮುಖ ರಾಜಕೀಯ ಪಕ್ಷ ಹಾಗೂ ಜನಪರತೆಯ ಆಧಾರದ ಮೇಲೆ ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಾ,ಸಮಾನ ಅವಕಾಶಗಳನ್ನು ಸೃಷ್ಠಿಸಿದ ಕಾಂಗ್ರೆಸ್ ಪಕ್ಷವಾಗಿದೆ.ಸ್ವಾತಂತ್ರ್ಯದ ನಂತರದಲ್ಲಿ ಅತ್ಯಂತ ಆರೋಗ್ಯಪೂರ್ಣವಾಗಿ ದೇಶವನ್ನು ಮುನ್ನಡೆಸಿದ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ದೇಶ ವಿಭಜನೆಯ ತಂತ್ರಗಳನ್ನು ಅನುಸರಿಸುತ್ತ ಸದಾ ದೇಶದೊಳಗೆ ಅಶಾಂತಿಯನ್ನೇ ಉಂಟು ಮಾಡಲು ಶ್ರಮಿಸುತ್ತಿರುವ ಪಕ್ಷಗಳನ್ನು ಬೆಂಬಲಿಸದೆ, ಸುದೀರ್ಘ ಕಾಲ ದೇಶದ ಅಧಿಕಾರ ಚುಕ್ಕಾಣಿ ಹಿಡಿದು ಸಂವಿಧಾನದ ನೆರವಿನಿಂದ ವ್ಯವಸ್ಥಿತವಾಗಿ ದೇಶದ ಮುನ್ನಡೆಗೆ ಕಾರಣವಾದ ಕಾಂಗ್ರೆಸ್ ಪಕ್ಷವು ನೂರೆಂಟು ಜನಪರ ಕಾಯ್ದೆ,ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಜನರ ಹಿತ ಕಾಯುವಂತ ಕೆಲಸ ಮಾಡಿದೆ ಎಂದು ಹೇಳಿದರು.೬೦ ವರ್ಷಗಳ ಅಧಿಕಾರವಧಿಯಲ್ಲಿ ಜನ ಸಮುದಾಯದ ಸಮಾನ ಏಳಿಗೆಗಾಗಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಕಾಯ್ದೆ,ಯೋಜನೆಗಳು ಅಪಾರವಾಗಿವೆ ಎಂದು ಹೇಳಿದರು.ಡಿ.೩೦ ರಂದು ವಿಜಯಪುರದಲ್ಲಿ ನಡೆಯುವ ಕೃಷ್ಣಾ ಸಮಾವೇಶಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಮಹಿಳಾ ಘಟಕದ ಬ್ಲಾಕ್ ಅಧ್ಯಕ್ಷೆ ನಿರ್ಮಲಾ ತಳಕೇರಿ ಮಾತನಾಡಿ,ದೇಶದ ಉಕ್ಕಿನ ಮಹಿಳೆ,ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ದೇಶದ ರಾಜಕಾರಣದ ಹೊಸ ದಿಕ್ಕನ್ನೆ ಬದಲಿಸಿ ಹೊಸ ಶಕೆ ಆರಂಭಿಸಿದ್ದಾರೆ.ಅವರ ಹಾಕಿದ ಹಾದಿಯಲ್ಲಿ ನಾವೆಲ್ಲ ಸಾಗಿ ಪಕ್ಷ ಸಂಘಟನೆಯಲ್ಲಿ ತೊಡಗೊಣ ಎಂದು ಹೇಳಿದರು.
ಪ್ರಶಾಂತ ಕಾಳೆ,ಭೀಮಾಶಂಕರ ಮೂರಮನ,ಇಲಿಯಾಸ ಬೊರಾಮಣಿ,ಜಹಾಂಗೀರ ಸೌದಾಗರ,ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ತಳಕೇರಿ,ಉಮೇಶ ದೇಗಿನಾಳ,ಸಂತೋಷ ಪರಸೆನವರ,ಶ್ರೀಮಂತ ಖಸ್ಕಿ,ಮಂಜು ಕಾಮಗೊಂಡ,ಹುಚ್ಚಪ್ಪ ತಳವಾರ,ಅಯೂಬ ಬಾಗವಾನ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.