ಇಟಗಿ : ಶ್ರೀ ಲಕ್ಷ್ಮೀ ಮಹಿಳಾ ಅರ್ಬನ್ ಕೋ ಆಫ್ ಸೊಸೈಟಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ
ಯುವ ಭಾರತ ಸುದ್ದಿ ಇಟಗಿ :ಮನೆಯಲ್ಲಿ ತಾಯಿಂದಿರು ಒಳ್ಳೆಯ ಸಂಸ್ಕಾರಗಳನ್ನು ಕಲಿಸಬೇಕು ಎಂದು ಶ್ರೀ ಲಕ್ಷ್ಮೀ ಮಹಿಳಾ ಅರ್ಬನ್ ಕೋ ಆಫ್ ಸೊಸೈಟಿ ಅಧ್ಯಕ್ಷೆ ಅಂಜನಾ ಹೊನ್ನಿದಿಬ್ಬ ಹೇಳಿದರು.
ಇಟಗಿ ಗ್ರಾಮದ ಶ್ರೀ ಲಕ್ಷ್ಮೀ ಮಹಿಳಾ ಅರ್ಬನ್ ಕೋ ಆಫ್ ಸೊಸೈಟಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಪ್ರತಿ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಛಾಪು ಮೂಡಿಸುತ್ತಿದ್ದಾಳೆ. ಹೆಣ್ಣು ಅಬಲೆಯಲ್ಲ ಸಬಲೆಯಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿದ್ದಾಳೆ ಎಂದರು.
ಉಪಾದ್ಯಕ್ಷೆ ಅನುಸೂಯಾ ಪೂಜಾರ ಮಾತನಾಡಿ, ಮಕ್ಕಳಿಗೆ ಮಹಾಪುರುಷರ ಆದರ್ಶ, ಸದ್ಗುಣಗಳನ್ನು ತಿಳಿಸಬೇಕು. ಅಂದಾಗ ಅವರಿಗೆ ಮಹನೀಯರಂತೆ ನಾವು ಸಾಸಬಹುದು ಎನ್ನುವುದನ್ನು ಆಲೋಚಿಸುತ್ತಾರೆ ಎಂದರು.
ನಿವೃತ್ತ ಚಿತ್ರಕಲಾ ಶಿಕ್ಷಕ ಎಸ್.ಎಸ್.ಹಿರೇಮಠ, ,ಡಾ ಉದಯ ಕುಲಕರ್ಣಿ, ನಿರ್ದೇಶಕರಾದ ಶಾಂತವ್ವ ಮಜಗಾವಿ, ಅನ್ನಪೂರ್ಣ ಸವದತ್ತಿ, ಲತಾ ನೆಲಗಳಿ, ವಿಜಯಲಕ್ಷ್ಮೀ ತುರಮರಿ, ಪ್ರಭಾವತಿ ಕಮ್ಮಾರ, ಗೌರವ್ವ ಕಬ್ಬೂರ, ಭಾಗೀರಥಿ ಕಮ್ಮಾರ, ಪಾರ್ವತಿ ಗೂರನವರ, ರುದ್ರವ್ವ ಮುತ್ನಾಳ, ಕಾರ್ಯದರ್ಶಿ ವಿಠ್ಠಲ ನಿಲಜಕರ, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.