Breaking News

KSLU ವಲಯ ಮಟ್ಟದ ಯುವಜನೋತ್ಸವದಲ್ಲಿ ರಾಜಾ ಲಖಮಗೌಡ ವಿದ್ಯಾರ್ಥಿಗಳಿಗೆ ಬಹುಮಾನ

Spread the love

KSLU ವಲಯ ಮಟ್ಟದ ಯುವಜನೋತ್ಸವದಲ್ಲಿ ರಾಜಾ ಲಖಮಗೌಡ ವಿದ್ಯಾರ್ಥಿಗಳಿಗೆ ಬಹುಮಾನ

ಯುವ ಭಾರತ ಸುದ್ದಿ ಬೆಳಗಾವಿ :
ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಕಾಲೇಜು ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮತ್ತು ಜಮಖಂಡಿಯ ಬಿಎಲ್ ಇಡಿ ಕಾನೂನು ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ಹುಬ್ಬಳ್ಳಿ ವಲಯ ಮಟ್ಟದ ಯುವಜನೋತ್ಸವದಲ್ಲಿ ಬಹುಮಾನ ಪಡೆದರು.

ಲಘು ಗಾಯನದ ಏಕವ್ಯಕ್ತಿ ಗಾಯನದಲ್ಲಿ ನಿದಾ ಬಿಜಾಪುರ ಪ್ರಥಮ, ಪವನ್ ಶಿರೋಳ್ ಮತ್ತು ಮನೋಜ್ ಪಾಟೀಲ್ ಚರ್ಚೆಯಲ್ಲಿ ದ್ವಿತೀಯ, ಶ್ರದ್ಧಾ ಔರ್ವಾದಕರ್ ಸ್ಪಾಟ್ ಪೇಂಟಿಂಗ್‌ನಲ್ಲಿ ದ್ವಿತೀಯ ಬಹುಮಾನ ಪಡೆದರು. ಸ್ಕಿಟ್ ಸ್ಪರ್ಧೆಯಲ್ಲಿ ದೇವೇಂದ್ರ, ಆಕಾಶ್, ಓಂಕಾರ್, ಜಯಶ್ರೀ, ಕಾವ್ಯ ಮತ್ತು ದೀಪಾ ದ್ವಿತೀಯ ಬಹುಮಾನ ಪಡೆದರು.

ರಾಜಾ ಲಖಮಗೌಡ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್.ಕುಲಕರ್ಣಿ, ಆರ್.ಎಲ್.ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎ.ಎಚ್.ಹವಾಲ್ದಾರ್, ಚರ್ಚಾ ಒಕ್ಕೂಟದ ಸಮನ್ವಯಾಧಿಕಾರಿ ಎಂ.ಎಸ್.ಕುಲಕರ್ಣಿ,
ಸಾಂಸ್ಕೃತಿಕ ವಿಭಾಗದ ಸಮನ್ವಯಾಧಿಕಾರಿ ಶಿಲ್ಪಾ ರಾಯ್ಕರ್ ಅವರು ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

1 × two =