Breaking News

ಗೋಕಾಕ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ವಿರುದ್ಧ ಕನಸಗೇರಿ ಗ್ರಾಮಸ್ಥರ ಆಕ್ರೋಷ.!

Spread the love

ಗೋಕಾಕ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ವಿರುದ್ಧ ಕನಸಗೇರಿ ಗ್ರಾಮಸ್ಥರ ಆಕ್ರೋಷ.!


ಗೋಕಾಕ: ತಾಲೂಕಿನ ಕನಸಗೇರಿ ಗ್ರಾಮದ ತೆರೆದ ಬಾಂವಿ ವಿಚಾರಕ್ಕೆ ಸಂಬ0ಧಿಸಿದ0ತೆ ಗೋಕಾಕ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ಸುಳ್ಳು ಆರೋಪ ಮಾಡುತ್ತಿರುವದಾಗಿ ಕನಸಗೇರಿ ಗ್ರಾಮಸ್ಥರು ಶುಕ್ರವಾರದಂದು ಆಕ್ರೋಷ ವ್ಯಕ್ತಪಡಿಸಿದರು.

ಶಾಸಕ ರಮೇಶ ಜಾರಕಿಹೊಳಿ ಅವರು ಕನಸಗೇರಿ ಗ್ರಾಮದ ತೆರೆದ ಭಾಂವಿಯನ್ನು ಕಾಂಗ್ರೇಸ್ ಅಭ್ಯರ್ಥಿಗಳಿಗೆ ಮತ ನೀಡಿದ ಹಿನ್ನಲೆ ಅರಣ್ಯ ಇಲಾಖೆಯ ಸಹಾಯದಿಂದ ಮುಚ್ಚಿಸುತ್ತಿದ್ದಾರೆ ಎಂದು ಡಾ.ಕಡಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಗ್ರಾಮಸ್ಥರು ಈ ತೆರೆದ ಬಾಂವಿಯನ್ನು ಕುಡಿಯುವ ನೀರು ಮತ್ತು ದಿನ ಬಳಕೆಗೆ ಬಳಸುತ್ತ ಬಂದಿದ್ದಾರೆ. ಶಾಸಕರ ನೇತ್ರತ್ವದಲ್ಲಿ ಬಾಂವಿಯನ್ನು ಇನ್ನಷ್ಟು ಆಳವಾಗಿ ಮತ್ತು ಅಗಲವಾಗಿ ಕೊರೆಸುವ ಕಾಮಗಾರಿಯನ್ನು ಗ್ರಾಪಂ ಅಡಿಯಲ್ಲಿ ಮಾಡಲಾಗುತ್ತಿದೆ. ಗ್ರಾಮಸ್ಥರಿಗೆ ಗ್ರಾಪಂನಿ0ದ ಮನೆ ಮನೆಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಆದರೆ ಡಾ.ಕಡಾಡಿ ಕ್ಷೇತ್ರದ ಜನರಲ್ಲಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ದ್ವೇಷ ವೈಷಮ್ಯ ಬೆಳೆಸುವಂತೆ ಅಪಪ್ರಚಾರ ಮಾಡುತ್ತಿದ್ದಾರೆ. ಡಾ.ಕಡಾಡಿಯವರು ತಮ್ಮ ಉದ್ಯೋಗವನ್ನು ನೋಡಿಕೊಳ್ಳುವದು ಒಳ್ಳೆಯದು ಅದನ್ನು ಬಿಟ್ಟು ಶಾಸಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಲ್ಲಿ ಕನಸಗೇರಿ ಗ್ರಾಮಸ್ಥರೆಲ್ಲರೂ ಸೇರಿ ಡಾ.ಕಡಾಡಿಯವರ ಆಸ್ಪತ್ರೆಗೆ ಮುತ್ತಿಗೆ ಹಾಕುತ್ತೇವೆ ಎಂದು ಪ್ರತಿಭಟಿಸಿದರು.


ಈಗಾಗಲೇ ಶಾಸಕ ರಮೇಶ ಜಾರಕಿಹೊಳಿ ಅವರು 1.ಕೋಟಿ ರೂಪಾಯಿಗಿಂತಲೂ ಹೆಚ್ಚು ಸರಕಾರದಿಂದ ಅನುದಾನ ತಂದು ಈಗಾಗಲೇ ಕಾಮಗಾರಿಯು ಪ್ರಗತಿಯಲ್ಲಿದೆ. ಅದನ್ನು ಗಮನಿಸದೇ ಡಾ.ಕಡಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿರುವದು ಸರಿಯಲ್ಲ. ಕನಸಗೇರಿ ಗ್ರಾಮಕ್ಕೆ ಡಾ.ಕಡಾಡಿ ಬಂದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಗ್ರಾಮಸ್ಥರು ಹರಿಹಾಯ್ದರು.

ಗ್ರಾಮಸ್ಥರಾದ ಮಂಜುನಾಥ ಶಿಂಧಿಗಾರ, ವಿಜಯ ಮಲಕನ್ನವರ, ಲಕ್ಷö್ಮಣ ನಂದಿ, ಲಕ್ಷö್ಮಣ ಕಳ್ಳಿಬುದಿ, ಸಿದ್ದಪ್ಪ ಚೂನಪ್ಪಗೋಳ, ಸತ್ತೆಪ್ಪ ಮಡ್ಡಿಮನಿ, ನಿಂಗಯ್ಯ ತುಕ್ಕಾರ, ಲಕ್ಷö್ಮಣ ಕುರಿಹುಲಿ, ಕೆಂಪಣ್ಣ ಕೊಳವಿ, ಅಶೋಕ ಚೂನಪ್ಪಗೋಳ, ವಿಠ್ಠಲ ಕುರಿಹುಲಿ, ರಂಗಪ್ಪ ಟಗರಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.!

Spread the loveಮಕ್ಕಳ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ತಂದೆ-ತಾಯಿಗಳಷ್ಟೇ ಶಿಕ್ಷಕರ ಪಾತ್ರವು ಮಹತ್ವದ್ದಾಗಿದೆ- ಗಜಾನನ ಮನ್ನಿಕೇರಿ.! ಗೋಕಾಕ: ಮಕ್ಕಳ ವ್ಯಕ್ತಿತ್ವ …

Leave a Reply

Your email address will not be published. Required fields are marked *

four × four =