ಕರುನಾಡಿಗೆ ಮೋದಿ, ಯೋಗಿ, ಅಮಿತ್ ಶಾ !

ಯುವ ಭಾರತ ಸುದ್ದಿ ದೆಹಲಿ :
ವಿಧಾನಸಭಾ ಚುನಾವಣೆಗೆ ರಣತಂತ್ರ ನಡೆಯುತ್ತಿರುವ ಬಿಜೆಪಿ ಇದೀಗ ಕರ್ನಾಟಕ ಪ್ರವಾಸಕ್ಕೆ ತನ್ನ ಘಟಾನುಘಟಿ ನಾಯಕರನ್ನು ಕರೆಸಿಕೊಳ್ಳುತ್ತಿದೆ. ಮೇಲಿಂದ ಮೇಲೆ ಈ ಪ್ರಭಾವಿ ನಾಯಕರನ್ನು ರಾಜ್ಯಕ್ಕೆ ಕರೆಸಿಕೊಳ್ಳುವ ಮೂಲಕ ಬಿರುಸಿನ ಪ್ರಚಾರಕ್ಕೆ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಜನವರಿ 12 ಕ್ಕೆ ಹುಬ್ಬಳ್ಳಿ ಹಾಗೂ 19 ಕ್ಕೆ ಕಲಬುರ್ಗಿಗೆ ಭೇಟಿ ನೀಡಲಿದ್ದಾರೆ. ಈ ತಿಂಗಳ ಮೂರನೇ ವಾರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದು , ರಾಜ್ಯ ನಾಯಕರ ಜೊತೆ ವಿಶೇಷ ಸಭೆ ನಡೆಸುವ ಬಗ್ಗೆ ವರದಿಯಾಗಿದೆ. ಕೊನೆಯ ವಾರ ಜ. 29 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಬೆಂಕಿ ಚೆಂಡು ಎಂದೇ ಖ್ಯಾತರಾಗಿರುವ ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಆಗಮಿಸಿ ಹಲವು ಉದ್ಘಾಟನಾ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ.
ಒಟ್ಟಾರೆ ಈ ಮೂವರು ನಾಯಕರಲ್ಲದೆ ಬಿಜೆಪಿಯ ಪ್ರಭಾವಿ ಕೇಂದ್ರ ನಾಯಕರು ಕರ್ನಾಟಕದ ಪ್ರವಾಸ ಕಾಲಕಾಲಕ್ಕೆ ಕೈಗೊಳ್ಳಲಿದ್ದಾರೆ.
YuvaBharataha Latest Kannada News