ನಾಭಿಕ ಸಮಾಜಕ್ಕೆ ಅಗತ್ಯ ನಗದು ನೀಡಿದ ಕಿರಣ ಜಾಧವ
ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿಯ ನಾಭಿಕ ಸಮಾಜ ಸುಧಾರಣಾ ಮಂಡಳದ ವತಿಯಿಂದ ಶ್ರೀ ಸಂತ ಸೇನಾ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಧುರೀಣ ಕಿರಣ ಜಾಧವ ಅವರು ಕೆಲ ಸಾಮಗ್ರಿಗಳನ್ನು ನೀಡುವುದಾಗಿ ತಿಳಿಸಿ ನಗದನ್ನು ಹಸ್ತಾಂತರಿಸಿದರು.
ಸರಕಾರದಿಂದ ಸಾಧ್ಯವಿರುವ ಅನುದಾನವನ್ನು ದೊರಕಿಸಿಕೊಡುವುದಾಗಿ ತಿಳಿಸಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಾಭಿಕ ಸಮಾಜದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.
ಗಣೇಶ್ ಯಾದವ್, ಚಂದ್ರಕಾಂತ್ ಪನ್ಹಾಲ್ಕರ್, ಮಹಾದೇವ ವಾಘಮಾರೆ, ಕೃಷ್ಣ ಪವಾರ್, ಸುನೀಲ್ ದೇವ್ಕರ್, ಅಶೋಕ್ ಗಂಗಾಧರ್ ಉಪಸ್ಥಿತರಿದ್ದರು.