Breaking News

14 ರಂದು ಕೆಎಲ್‌ಇ ಘಟಿಕೋತ್ಸವ

Spread the love

14 ರಂದು ಕೆಎಲ್‌ಇ ಘಟಿಕೋತ್ಸವ
ಬೆಳಗಾವಿ: ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್‌ (ಕೆಎಲ್‌ಇ ಸ್ವಾಯತ್ತ ) 10ನೇ ಘಟಿಕೋತ್ಸವ ಜು. 14ರಂದು ಬೆಳಗ್ಗೆ 11ಕ್ಕೆ ಜೆಎನ್‌ಎಂಸಿ ಆವರಣದಲ್ಲಿರುವ ಕೆಎಲ್‌ಇ ಸೆಂಟೇನರಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.
ಕರೊನಾ ಸೋಂಕು ನಿಯಂತ್ರಣಕ್ಕಾಗಿ ಕೆಲವೇ ಗಣ್ಯರಿಗೆ ದೈಹಿಕ ಅಂತರ ಕಾಪಾಡಿ ಕೊಂಡು ಘಟಿಕೋತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ವಿಸಲಾಗಿದೆ. ಇನ್ನುಳಿದವರಿಗೆ ವೀಕ್ಷಣೆಗೆ ಅನುಕೂಲವಾಗುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ನೇರ​‍ ಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ ಆನ್‌ಲೈನ್ ಮೂಲಕವೇ ಘಟಿಕೋತ್ಸವ ಭಾಷಣ ಮಾಡುವರು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ವಿ ವಿ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು ಎಂದು ಕುಲಸಚಿವ ಡಾ. ವಿ .ಎ. ಕೋಠಿವಾಲೆ ಪ್ರಕರಣೆಯಲ್ಲಿ ತಿಳಿಸಿದ್ದಾರೆ.
1,316 ಪದವಿ ಪ್ರಮಾಣಪತ್ರ ವಿತರಣೆ: ಘಟಿಕೋತ್ಸವದಲ್ಲಿ1,316 ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪದವಿ ಪ್ರಮಾಣಪತ್ರ ವಿತರಿಸಲಾಗುವುದು. ಈ ಪೈಕಿ 11 ಪಿಎಚ್‌.ಡಿ.9 ಡಿಎಂ / ಎಂ.ಎಚ್‌., 329ಸ್ನಾತಕೋತ್ತರ ಪದವಿ 51 ಪಿಜಿ ಡಿಪ್ಲೋಮಾ, 14 ಸರ್ಟಿಫಿಕೇಟ್ ಕೋರ್ಸ್‌, 10 ಶಿಷ್ಯವೇತನ ಹಾಗೂ 16 ಡಿಪ್ಲೋಮಾ ಪ್ರಮಾಣ ಪತ್ರಗಳು ಸೇರಿವೆ.


Spread the love

About Yuva Bharatha

Check Also

ಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಪ್ರಶಸ್ತಿ

Spread the loveಬೆಳಗಾವಿ ಆರ್ ಎಲ್ ಕಾನೂನು ಮಹಾವಿದ್ಯಾಲಯದ ಮೃಣಾಲ್ ಕಾಮತ್ ಗೆ ರಾಷ್ಟ್ರ ಮಟ್ಟದ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ …

Leave a Reply

Your email address will not be published. Required fields are marked *

2 × 1 =