Breaking News

ಸರ್ಕಾರ ಗಡಿಭಾಗದ ಹಿರಿಯ ಸಾಹಿತಿಗಳ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಲಿ : ಡಾ.ಪ್ರಭಾಕರ ಕೋರೆ

Spread the love

ಸರ್ಕಾರ ಗಡಿಭಾಗದ ಹಿರಿಯ ಸಾಹಿತಿಗಳ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಲಿ : ಡಾ.ಪ್ರಭಾಕರ ಕೋರೆ

ಯುವ ಭಾರತ ಸುದ್ದಿ ಬೆಳಗಾವಿ :
ಕನ್ನಡ ಸಾಹಿತ್ಯ ಸಂಸ್ಕೃತಿಗೆ ಅಗಾಧವಾದ ಕೊಡುಗೆಯನ್ನು ನೀಡಿದವರು ಬೆಳಗಾವಿ ಜಿಲ್ಲೆಯ ಸಾಹಿತಿಗಳು ಹಾಗು ಕಲಾವಿದರು. ಅವರ ಹೆಸರಿನಲ್ಲಿ ಇಂದಿಗೂ ಸರ್ಕಾರದ ಮಟ್ಟದಲ್ಲಿ ಯಾವುದೇ ಪ್ರತಿಷ್ಠಾನವಾಗಲಿ, ಸ್ಮಾರಕವಾಗಲಿ ನಿರ್ಮಾಣವಾಗದೆ ಇರುವುದು ಖೇದಕರ. ಸರ್ಕಾರ ಇದನ್ನು ತೀಕ್ಷ್ಣವಾಗಿ ಪರಿಗಣಿಸಿ ಅನುಕರಣೆಗೆ ತರುವಂತಾಗಲೆಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ನೆಹರು ನಗರದ ಕನ್ನಡ ಸಾಂಸ್ಕೃತಿಕ ಭವನದಲ್ಲಿ ಪ್ರಾ.ಬಿ.ಎಸ್.ಗವಿಮಠ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಏಣಗಿ ಬಾಳಪ್ಪನವರು, ಎಸ್.ಡಿ.ಇಂಚಲ, ಡಿ.ಎಸ್.ಕರ್ಕಿ ಮೊಲ್ಗೊಂಡು ಅನೇಕ ಹಿರಿಯ ಸಾಹಿತಿ ಕಲಾವಿದರು ನಮ್ಮ ನಾಡಿಗೆ ಬಹುಮೌಲಿಕವಾದ ಹಾಗು ಚಿರಸ್ಮರಣೀಯವಾದ ಕೊಡುಗೆಯನ್ನು ನೀಡಿದವರು ಅವರನ್ನು ನಿರ್ಲಕ್ಷಿಸುತ್ತಾ ಬಂದಿದೆ, ಹಾಗಾಗದಂತೆ ಪ್ರತಿಷ್ಠಾನಗಳ ಮೂಲಕ ಅವರ ಸೇವೆಯನ್ನು ಆಯಾ ಪ್ರದೇಶದಲ್ಲಿ ಜೀವಂತವಾಗಿಡುವ ಕೆಲಸ ತುರ್ತು ನಡೆಯಬೇಕಾಗಿದೆ. ಗವಿಮಠರ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ಪ್ರತಿಷ್ಠಾನ ಗಡಿಭಾಗದಲ್ಲಿ ನಿರಂತರವಾದ ಚಟುವಟಿಕೆಗಳನ್ನು ಕೈಗೊಳ್ಳಲೆಂದು ಶುಭಹಾರೈಸಿದರು.

ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಅಧ್ಯಕ್ಷ ಡಾ.ಸಿ.ಸೋಮಶೇಖರ ಮಾತನಾಡಿ, ಇಂದು ಗಡಿ ಅಭಿವೃದ್ಧಿ ಪ್ರಾಧಿಕಾರವು ಕರ್ನಾಟಕದ ಗಡಿಭಾಗಗಳಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕನ್ನಡ ಸಂಸ್ಕೃತಿಯನ್ನು ವಿಸ್ತರಿಸುವ ನೆಲೆಯಲ್ಲಿ ಸಾಕಷ್ಟು ಶ್ರಮಿಸುತ್ತಿದೆ ಎಂದರು. ಸಂಸ್ಕೃತಿ ಮತ್ತು ನಾಗರಿಕತೆಗಳ ನಡುವಿನ ವ್ಯತ್ಯಾಸ ತಿಳಿಸಿದ ಅವರು ಉತ್ತಮವಾದ ಜೀವನ ವಿಧಾನಕ್ಕೆ ನಾವು ಆದ್ಯತೆ ನೀಡಬೇಕಾಗಿದೆ ಎಂದರು.

ಬಿ.ಎಸ್.ಗವಿಮಠರು ಸಾಹಿತ್ಯ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಬಹುಮೌಲಿಕವಾದ ಕೊಡುಗೆಯನ್ನು ನೀಡಿದವರು. ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರತಿಷ್ಠಾನಕ್ಕೆ ನಾವು ಸಂಪೂರ್ಣವಾದ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದರು.
ಪ್ರತಿಷ್ಠಾನ ಆಶೋತ್ತರಗಳನ್ನು ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿಯವರು ಸರ್ಕಾರದ ಮಟ್ಟದಲ್ಲಿ 22 ಕ್ಕೂ ಹೆಚ್ಚು ಪ್ರತಿಷ್ಠಾಪನೆಗಳಿವೆ. ಅವುಗಳಿಗೆ 12 ಲಕ್ಷಕ್ಕೂ ಹೆಚ್ಚು ಅನುದಾನವನ್ನು ನೀಡಲಾಗುತ್ತಿದೆ. ಕೆಲವು ಹೆಸರಿಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಗಡಿಭಾಗದ ಶ್ರೇಷ್ಠ ಸಾಹಿತಿ ಹಾಗೂ ಕಲಾವಿದರನ್ನು ಸರ್ಕಾರ ನಿರ್ಲಕ್ಷಿಸಿರುವುದು ಖೇದಕರ. ಸರ್ಕಾರ ಇತ್ತ ಗಮನ ಹರಿಸುವಂತಾಗಬೇಕು. ಅಂತೆಯೆ ಇಂದು ಗವಿಮಠರ ಅಭಿಮಾನಿಗಳು ಒಂದಾಗಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಿ ಗಡಿಭಾಗದಲ್ಲಿ ಕನ್ನಡ ಡಿಂ ಡಿಂ ಮೊಳಗಿಸುವಂತೆ ಮಾಡಿದ್ದಾರೆ ಎಂದರು.

ಹಿರಿಯ ಸಾಹಿತಿ ಡಾ.ಗುರುಪಾದ ಮರಿಗುದ್ದಿ ಮಾತನಾಡಿದರು.
ನಿಡಸೋಸಿ ಶ್ರೀಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ಬೆಳಗಾವಿ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಡಾ.ದಯಾನಂದ ನೂಲಿ, ಡಾ.ರಾಮಕೃಷ್ಣ ಮರಾಠೆ, ಬಸವರಾಜ ಗಾರ್ಗಿ ಅವರನ್ನು ಸತ್ಕರಿಸಲಾಯಿತು. ಪ್ರತಿಷ್ಠಾನಕ್ಕೆ ಚಿಕ್ಕೋಡಿಯ ಡಾ.ದಯಾನಂದ ನೂಲಿ 1 ಲಕ್ಷ ರೂ.ಗಳನ್ನು, ಡಾ.ಎಂ.ವ್ಹಿ.ಜಾಲಿ 50 ಸಾವಿರ ರೂ.ಗಳನ್ನು, ನಿವೃತ್ತ ಪಿಡಬ್ಲೂ ಅಧಿಕಾರಿ ಬಿ.ಡಿ.ನಸಲಾಪುರೆ 25 ಸಾವಿರ ರೂ.ಗಳನ್ನು ಅರ್ಪಿಸಿದರು.
ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಪ್ರೊ.ಎಂ.ಎಸ್.ಇಂಚಲ, ಯ.ರು.ಪಾಟೀಲ, ಏಣಗಿ ಸುಭಾಷ, ಶಿವನಗೌಡ ಪಾಟೀಲ, ಡಾ.ಸರಜೂ ಕಾಟ್ಕರ್, ಡಾ.ಗುರುದೇವಿ ಹುಲೆಪ್ಪನವರಮಠ, ಡಾ.ಪಿ.ಜಿ.ಕೆಂಪಣ್ಣವರ, ಆರ್.ಎಂ.ಕರಡಿಗುದ್ದಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಲ್.ವ್ಹಿ.ಪಾಟೀಲ ಸ್ವಾಗತಿಸಿದರು. ಪ್ರೊ.ವಿಶ್ವನಾಥ ಚೌಗಲಾ, ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಕಾರ್ಯದರ್ಶಿ ಅಕಬರ ಸನದಿ ವಂದಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

2 × five =