Breaking News

ಮಾಹಿತಿ ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿಗೆ ಕೈ ಜೋಡಿಸೋಣ : ಡಾ.ಚೇತನ ಸಿಂಗಾಯಿ

Spread the love

ಮಾಹಿತಿ ತಂತ್ರಜ್ಞಾನದಿಂದ ದೇಶದ ಅಭಿವೃದ್ಧಿಗೆ ಕೈ ಜೋಡಿಸೋಣ : ಡಾ.ಚೇತನ ಸಿಂಗಾಯಿ

ಯುವ ಭಾರತ ಸುದ್ದಿ ಬೆಳಗಾವಿ :                        ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ತೀವ್ರವಾಗಿರಬೇಕು. ಪ್ರತಿಯೊಂದನ್ನು ಅರಿಯುವ ಹಾಗೂ ಆಲೋಚಿಸುವ ಕ್ರಮವಿದ್ದರೆ ಶಿಕ್ಷಣದ ಹಲವಾರು ಸವಾಲುಗಳನ್ನು ಎದುರಿಸಲು ಹಾಗೂ ಪೂರ್ವಸಿದ್ಧತೆಗಳನ್ನು ಮಾಡಲು ಸಾಧ್ಯವೆಂದು ರಾಮಯ್ಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಹಾಗೂ ಭಾರತ ಸರ್ಕಾರದ ರಾಷ್ಟ್ರೀಯ ಪಠ್ಯಕ್ರಮದ ತಾಂತ್ರಿಕ ಸಲಹೆಗಾರ ಡಾ.ಚೇತನ ಸಿಂಗಾಯಿ ಹೇಳಿದರು.

ಲಿಂಗರಾಜ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಜರುಗಿದ ರಾಜ್ಯಶಾಸ್ತ್ರ ಲ್ಲಿನ ಚರ್ಚೆ, ವಿವಾದಾತ್ಮಕ ವಿಷಯಗಳು, ಪರಿಕಲ್ಪನೆಗಳು ಹಾಗೂ ದೃಷ್ಠಿಕೋನಗಳ ತಿಳಿವಳಿಕೆ ಕುರಿತ ಒಂದು ದಿನ ರಾಜ್ಯಮಟ್ಟದ ವಿದ್ಯಾರ್ಥಿಗಳ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಕಲ್ಪನೆಯಲ್ಲಿ ಅಮೂಲಾಗ್ರವಾಗಿ ಬದಲಾವಣೆಯಾಗುತ್ತಿದೆ. ಉನ್ನತ ಶಿಕ್ಷಣವನ್ನು ಪಡೆಯುವುದು ಒಂದೇ ಗುರಿಯಾಗದೆ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳುವುದು ಮುಖ್ಯವೆಂದರು.

ಇಂದು ಮಾಹಿತಿ ತಂತ್ರಜ್ಞಾನದ ಮೂಲಕ ಭಾರತದ ವಿಶ್ವದ ಪ್ರಬಲ ರಾಷ್ಟ್ರಗಳೊಂದಿಗೆ ಹೆಜ್ಜೆ ಇಟ್ಟಿದೆ. ಪ್ರತಿಯೊಬ್ಬರು ಮಾಹಿತಿ ತಂತ್ರಜ್ಞಾನವನ್ನು ಪಡೆಯುತ್ತಿದ್ದಾರೆ. ಅದನ್ನು ಮತ್ತಷ್ಟು ಸಾಧಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದು ಹೇಳಿದರು.

ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ತೇಜಸ್ವಿ ಮಾತನಾಡಿ, ರಾಜ್ಯಶಾಸ್ತ್ರದ ವಿಚಾರಸಂಕಿರಣ ವಿದ್ಯಾರ್ಥಿಗಳ ಸಂಶೋಧನಾತ್ಮಕ ವಿಚಾರಗಳಿಗೆ ವೇದಿಕೆಯಾಗಿದ್ದು ತನ್ಮೂಲಕ ರಾಜಕೀಯ ವಿದ್ವಾಂಸರು ಭವಿಷ್ಯದಲ್ಲಿ ಕೈಗೆತ್ತಿಕೊಳ್ಳುವ ಸಂಶೋಧನೆಗಳಿಗೆ ಉತ್ತೇಜನಕಾರಿ ಪರಿಕಲ್ಪನೆಗಳನ್ನು ಒದಗಿಸುತ್ತಿದೆ ಎಂದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಕಮಲಾಕ್ಷಿ ತಡಸದ ಅವರು ಆಗಮಿಸಿದ್ದರು. ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಜಿ.ಕುಲಕರ್ಣಿ, ಡಾ. ಎಸ್. ಎಚ್. ಪಾಟೀಲ, ಕುಮಟಾ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಕೃಷ್ಣಾ ನಾಯಕ ಅವರು ತಾಂತ್ರಿಕ ಗೋಷ್ಠಿಯ ವಿಷಯ ತಜ್ಞರಾಗಿ ಕಾರ್ಯನಿರ್ವಹಿಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ ಆಗಮಿಸಿದ 32 ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು.
ಸಮಾರೋಪ ಸಮಾರಂಭದಲ್ಲಿ ರಾ.ಚ.ವಿವಿಯ ಸಹಾಯಕ ಕುಲಸಚಿವ ಡಾ.ಪಿ.ಎಂ.ಗುರುಬಸವರಾಜ ಮಾತನಾಡಿ, ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ ವಿಪುಲವಾದ ಅವಕಾಶಗಳಿವೆ ಎಂದು ಹೇಳಿದರು.

ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ ಮಾಡಿದ ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡದ ಆಕಾಶ ಹಂಸನೂರು ಪ್ರಥಮ ನಗದು ಬಹುಮಾನವನ್ನು, ದ್ವಿತೀಯ ಬಹುಮಾನವನ್ನು ಲಿಂಗರಾಜ ಕಾಲೇಜಿನ ಕುಲ್ಸುಮ್ ದಖನಿ, ತೃತೀಯ ಬಹುಮಾನವನ್ನು ರಾಣಿ ಚನ್ನಮ ವಿವಿ ಸುಶ್ಮಿತಾ ಹಳಿಯಾಳ ಪಡೆದುಕೊಂಡರು. ಪ್ರೊ.ಸಿದ್ಧನಗೌಡ ಪಾಟೀಲ, ಕುಲ್ಸುಮ್ ದಖನಿ ನಿರೂಪಿಸಿ ವಂದಿಸಿದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

thirteen − 2 =