ಮಹಾಲಿಂಗ ಮಂಗಿ ಅವರ ಸಾಹಿತ್ಯ ಕೃತಿಗಳ ಲೋಕಾರ್ಪಣೆ ಭಾನುವಾರ
ಯುವ ಭಾರತ ಸುದ್ದಿ ಗೋಕಾಕ :
ಸಾಹಿತಿ, ರಂಗ-ಚಿತ್ರ ಕಲಾವಿದ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ, ಬಹುಮುಖ ಸಾಧನೆಯ ಮುಲಕ ಗುರುತಿಸಿಕೊಂಡಿರುವ ಮಹಾಲಿಂಗ ಮಂಗಿ ಅವರ ಮಹಾಪ್ರಸ್ಥಾನ, ಮುತ್ತಿನ ತೇರು, ಮುಸ್ಸಂಜೆಯ ಕಾವ್ಯ ದರ್ಶನ ಮತ್ತು 18 ಸಾಹಿತ್ಯ ಕೃತಿಗಳ ಭವ್ಯ ಲೋಕಾರ್ಪಣೆ ಸಮಾರಂಭ ಜನವರಿ 15 ರಂದು ಬೆಳಗ್ಗೆ 10 ಕ್ಕೆ ಗೋಕಾಕ ಕೆಎಲ್ ಇ ಸಂಸ್ಕೃತಿ ವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
ಕೆಎಂಎಫ್ ಅಧ್ಯಕ್ಷ ಹಾಗೂ ಆರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಗ್ರಂಥ ಲೋಕಾರ್ಪಣೆ ಮಾಡುವವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಕೆಎಲ್ ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ ಉದ್ಘಾಟಿಸುವರು. ರಾಜಕೀಯ ನಾಯಕ ಅಶೋಕ ಪೂಜಾರಿ ಆಶಯ ನುಡಿ ಹಾಡುವರು. ಚಂದ್ರಶೇಖರ ಅಕ್ಕಿ ಪ್ರಾಸ್ತಾವಿಕ ಮಾತನಾಡುವರು. ಅಶೋಕ ನರೋಡೆ, ಪ್ರೊ. ಸಂಗಮೇಶ ಗುಜಗೊಂಡ, ಆರ್.ಎಲ್.ಮಿರ್ಜಿ, ಎಂ.ವೈ.ಯಾಕೊಳ್ಳಿ, ರಾಜೇಂದ್ರ ಸಣ್ಣಕ್ಕಿ, ವಿದ್ಯಾವತಿ ಭಜಂತ್ರಿ,
ಜಿ.ಬಿ. ಬಳಗಾರ, ರಜನಿ ಜಿರಗ್ಯಾಳ, ಭಾರತಿ ಮದಬಾವಿ, ಸಲೀಂ ಧಾರವಾಡಕರ, ಅಶೋಕ ನೀಲಗಾರ, ಲಕ್ಷ್ಮೀಬಾಯಿ ಮಂಗಿ, ರಾಜೇಶ್ವರಿ ಒಡೆಯರ, ಮಹಾಲಿಂಗ ಮಂಗಿ ಉಪಸ್ಥಿತರಿರುವರು. ಆರ್.ಶ್ರೀನಿವಾಸ, ಕೆಂಚಪ್ಪ ಪೂಜಾರಿ, ಉದಯ ಕುಮಾರ್ ಒಡೆಯರ್, ವೈ.ಎಂ.ಭಜಮ್ಮನವರ ಅವರನ್ನು ಸನ್ಮಾನಿಸಲಾಗುವುದು.