Breaking News

ಸಂಸತ್ತಿನಲ್ಲೇ ಬೆಳಗಾವಿ ವಿವಾದ ಪರಿಹಾರಕ್ಕೆ ಸಲಹೆ ನೀಡಿದ ಮಹಾರಾಷ್ಟ್ರ ಸಂಸದ!

Spread the love

ಸಂಸತ್ತಿನಲ್ಲೇ ಬೆಳಗಾವಿ ವಿವಾದ ಪರಿಹಾರಕ್ಕೆ ಸಲಹೆ ನೀಡಿದ ಮಹಾರಾಷ್ಟ್ರ ಸಂಸದ!

ಯುವ ಭಾರತ ಸುದ್ದಿ ಮುಂಬೈ : ಗಡಿ ವಿವಾದ ಪರಿಹಾರ ನಿರ್ಣಯ ಸಂಸತ್ತೇ ಮಾಡುತ್ತದೆ ಹೊರತು ಸುಪ್ರೀಂ ಕೋರ್ಟಿ ಗೆ ಅದನ್ನು ನಿರ್ಣಯಿಸುವಲ್ಲಿ ಯಾವುದೇ
ಅಧಿಕಾರ ಇಲ್ಲ ಎನ್ನುವುದು ಕರ್ನಾಟಕ ಬಹು ಹಿಂದಿನಿಂದ ಪ್ರತಿಪಾದಿಸುತ್ತಾ ಬಂದ ನಿಲುವಾಗಿದೆ.

ಇದೀಗ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ನೀಡಿರುವ ಸಲಹೆ ಚರ್ಚೆಗೆ ಗ್ರಾಸವಾಗಿದೆ. ಸಾಮ್ನಾದಲ್ಲಿ ಲೇಖನ ಬರೆದಿರುವ ಅವರು, ಶಾಸಕಾಂಗ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಇರುವುದರಿಂದ ಉಭಯ ರಾಜ್ಯಗಳ ಗಡಿ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಸಂಸತ್ತಿಗೆ ನಿರ್ದೇಶನ ನೀಡುತ್ತದೆ ಎನ್ನುವುದರ ಬದಲು ಸಂಸತ್ತು ಈ ಬಗ್ಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಹಾನಿ ಏನಿದೆ ಎಂದು ಅವರು ತಿಳಿಸಿದ್ದಾರೆ.

ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಮರಾಠಿ ಭಾಷೆ ಮಾತನಾಡುವ ಜನರ ಇಚ್ಛೆಗೆ ವಿರುದ್ಧವಾಗಿ ಕರ್ನಾಟಕಕ್ಕೆ ಒತ್ತಾಯಪೂರ್ವಕವಾಗಿ ಸೇರಿಸಲಾಗಿದೆ. ಆದರೆ, ಅಲ್ಲಿರುವ ಮರಾಠಿಗರ ಹೋರಾಟವನ್ನು ಯಾರು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಬರಹ ಹಂಚಿಕೊಂಡಿರುವ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಲಕ್ಷ್ಯ ತೋರಿದ್ದಾರೆ. ಆದರೆ, ಯುಕ್ರೇನ್-ರಷ್ಯಾ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಅವರು ಮಧ್ಯಸ್ಥಿಕೆ ವಹಿಸುತ್ತಾರೆ. ಇದು ಉತ್ತಮ ರಾಜಕಾರಣಿಯ ಲಕ್ಷಣವಲ್ಲ ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

two × 4 =