ಮಮದಾಪುರ : 1998-99 ರ ಸಾಲಿನ ವಿದ್ಯಾರ್ಥಿಗಳ
ಅಪರೂಪದ ಗುರುವಂದನಾ ಕಾರ್ಯಕ್ರಮ
ಯುವ ಭಾರತ ಸುದ್ದಿ ಗೋಕಾಕ:
ತಾಲೂಕಿನ ಮಮದಾಪುರ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯಲ್ಲಿ 1998-99ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮವು ಜರುಗಿತು.
ಸಾಮಾನ್ಯವಾಗಿ ಗುರುವಂದನೆ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಬಳಗವನ್ನು ಕರೆಸಿ, ತಮ್ಮ ಅನುಭವಗಳನ್ನು ಹಂಚಿಕೊಂಡು ಜ್ಞಾನ ನೀಡಿದ ದೇವರು ಸಮಾನ ಗುರುವರ್ಯರನ್ನು ಕೊಂಡಾಡಿ, ತಮ್ಮ ಅಭಿಮಾನದ ದ್ಯೋತಕವಾಗಿ ಋಣಮುಕ್ತರಾಗಲು ಶಾಲು ಹೊದಿಸಿ ಸ್ಮರಣಿಕೆ ನೀಡಿ, ಶ್ರೀಫಲ ಪುಷ್ಪಹಾರದೊಂದಿಗೆ ಗೌರವಿಸುವ ಕಾರ್ಯಕ್ರಮ ಜರಗುತ್ತದೆ. ಮಮದಾಪೂರದಲ್ಲಿ ಇದು ವಿಭಿನ್ನ ಹಾಗೂ ವಿಶೇಷ. ಪಾಲ್ಗೊಂಡ ಹಳೆಯ ವಿದ್ಯಾರ್ಥಿಗಳಲ್ಲಿ ದೇಶ ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ರೇವಣಸಿದ್ದು ಸೊಂಡೂರ, ಮುತ್ತಪ್ಪ ದುರ್ಗನ್ನವರ, ಗುರುಸಿದ್ಧ ಮುರಿ, ನಾಗಪ್ಪ ಸುಣಧೋಳಿ, ಮಲ್ಲಿಕಾರ್ಜುನ ಗಾಣಗಿ, ಭಾವಿನ ಬೆನ್ನಾಡಿ, ರಮೇಶ ಕಮತ, ತೋಹಿದ ಮೋಮಿನ್, ಪುಂಡಲೀಕ ವಡೇರ, ಮಲ್ಲಮ್ಮ ಗಾಣಗಿ, ಜ್ಯೋತಿ ಕಡಗದರವರು ಸಧ್ಯ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಾಧನಾ ಮೆಟ್ಟಿಲುಗಳನ್ನೇರಲು ಪ್ರೇರಣಾತ್ಮಕವಾಗಿ ಮಾತನಾಡಿ ವಿದ್ಯಾರ್ಥಿಗಳ ಪ್ರಶೋತ್ತರಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಸಂತೋಷಗೊಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ರಾಂತ ಮುಖ್ಯೋಪಾಧ್ಯಾಯ ಎಲ್. ಪಿ. ಪಾಟೀಲ, ಎಂ. ಪಿ. ಕೊಣ್ಣೂರ, ಎಸ್. ಎಸ್. ಹಿರೇಮಠ ಗುರುಗಳು ಹಾಗೂ ಕಮತ ಅರುಣ, ರುದ್ರಪ್ಪ, ಮಹಾಂತೇಶ ಉಪಸ್ಥಿತರಿದ್ದರು. ರ. ವೀ. ದೇಮಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.