Breaking News

ವಿಧಾನಸಭಾ ಚುನಾವಣೆ ಟಿಕೆಟ್ ಘೋಷಣೆ ; ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಫುಲ್ ಖುಷ್!

Spread the love

ವಿಧಾನಸಭಾ ಚುನಾವಣೆ ಟಿಕೆಟ್ ಘೋಷಣೆ ; ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ಫುಲ್ ಖುಷ್!

ಯುವ ಭಾರತ ಸುದ್ದಿ ಇಂಡಿ :
ಮುಂಬರುವ ೨೦೨೩ರ ವಿಧಾನಸಭೆ ಚುನಾವಣೆಗೆ ಇಂಡಿ ವಿಧಾನಸಭೆ ಮತಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿಯನ್ನಾಗಿ ಪ್ರಥಮ ಪಟ್ಟಿಯಲ್ಲಿಯೇ ಘೋಷಣೆ ಮಾಡಿರುವ ಮಾಜಿ ಪ್ರಧಾನಿ ದೇವೆಗೌಡ,ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರಿಗೆ ತಾಲೂಕಿನ ಪಕ್ಷದ ಕಾರ್ಯಕರ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜೆಡಿಎಸ್ ಮುಖಂಡ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಡಿ.ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

೨೦೧೮ರ ವಿಧಾನಸಭೆ ಚುನಾವಣೆಯಲ್ಲಿಯೂ ನನ್ನ ಮೇಲೆ ಪ್ರೀತಿ,ವಿಶ್ವಾಸ ಇಟ್ಟು ಜೆಡಿಎಸ್ ಪಕ್ಷದ ಹಿರಿಯ ನಾಯಕರು ನನಗೆ ಟಿಕೇಟ್ ನೀಡಿ ಆಶೀರ್ವಾದ ಮಾಡಿದ್ದರು,ಈ ಬಾರಿಯೂ ನನಗೆ ಟಿಕೆಟ್ ಘೋಷಣೆ ಮಾಡಿ ಆಶೀರ್ವಾದ ಮಾಡಿದ್ದಾರೆ.ನನ್ನ ಮೇಲೆ ಇಟ್ಟಿರುವ ಪ್ರೀತಿ,ವಿಶ್ವಾಸಕ್ಕೆ ಅವರಿಗೆ ನಾನು ಚಿರಋಣಿಯಾಗಿದ್ದೇನೆ. ಹೀಗಾಗಿ ಜೆಡಿಎಸ್ ಪಕ್ಷದ ರಾಷ್ಟ್ರೀಯ,ರಾಜ್ಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತ್ರತ್ವದಲ್ಲಿ ಹಮ್ಮಿಕೊಂಡ ಪಂಚರತ್ನ ಯಾತ್ರೆ ಜನವರಿ ತಿಂಗಳಲ್ಲಿ ಇಂಡಿ ತಾಲೂಕಿಗೆ ಆಗಮಿಸಲಿದೆ. ಹೀಗಾಗಿ ಪಂಚರತ್ನ ಯಾತ್ರೆಗೆ ಭವ್ಯಸ್ವಾಗತ ಮಾಡುವುದರ ಜೊತೆಗೆ ಐತಿಹಾಸಿಕ ಕಾರ್ಯಕ್ರಮ ಇಂಡಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಪಕ್ಷದ ಕಾರ್ಯಕರ್ತರು ಕಳೆದ ಬಾರಿ ೨೦೧೮ ಚುನಾವಣೆಯಲ್ಲಿ ನನಗೆ ಸಂಪೂರ್ಣ ಆಶೀರ್ವಾದ ಮಾಡಿದಂತೆ ಈ ಬಾರಿಯೂ ನನಗೆ ಆಶೀರ್ವಾದ ಮಾಡಬೇಕು.

ನಿಮ್ಮ ಮನೆಯ ಮಗನಂತೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.ಕಳೆ ಬಾರಿ ಚುನಾವಣೆಯಲ್ಲಿ ಸ್ವಲ್ಪೆ ಮತಗಳ ಅಂತರದಿಂದ ಸೋಲು ಅನುಭವಿಸಿದ್ದೇನೆ.ಈ ಬಾರಿ ನನಗೆ ಒಂದು ಬಾರಿ ಅವಕಾಶ ಕಲ್ಪಿಸಲು ಬಡ ರಾಜಕಾರಣಿಯ ಮೇಲೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡರಾದ ವಿಜಯಕುಮಾರ ಭೋಸಲೆ,ನಾಗೇಶ ತಳಕೇರಿ,ಅಯೂಬ ನಾಟೀಕಾರ,ಮರೆಪ್ಪ ಗಿರಣಿವಡ್ಡರ,ಶ್ರೀಶೈಲಗೌಡ ಪಾಟೀಲ,ಮಹಿಬೂಬ ಬೇನೂರ,ಸಿದ್ದು ಡಂಗಾ,ಗಂಗಾಧರಗೌಡ ಬಿರಾದಾರ,ಡಾ.ರಮೇಶ ರಾಠೋಡ,ಬಸವರಾಜ ಹಂಜಗಿ,ದುಂಡು ಬಿರಾದಾರ,ಇಸಾಕ ಸೌದಾಗರ,ಬಾಬು ಕಾಂಬಳೆ,ನಿಯಾಝ ಅಗರಖೇಡ,ತಾನಾಜಿ ಪವಾರ,ಇರ್ಫಾನ ಅಗರಖೇಡ,ಬಾಬು ಮೇತ್ರಿ,ಶಟ್ಟೆಪ್ಪ ಪಡನೂರ,ಮುತ್ತು ಹೊಸಮನಿ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.


Spread the love

About Yuva Bharatha

Check Also

ಮತ್ತೆ ಕಂಪಿಸಿದ ಭೂಮಿ

Spread the loveಮತ್ತೆ ಕಂಪಿಸಿದ ಭೂಮಿ ಯುವ ಭಾರತ ಸುದ್ದಿ ವಿಜಯಪುರ : ತಿಕೋಟಾ ಪಟ್ಟಣ ಸೇರಿ ಸುತ್ತಲಿನ ಪ್ರದೇಶಗಳಲ್ಲಿ …

Leave a Reply

Your email address will not be published. Required fields are marked *

8 + fifteen =