27 ರಂದು ಬೃಹತ್ ಪ್ರತಿಭಟನೆ
ಯುವ ಭಾರತ ಸುದ್ದಿ ಗೋಕಾಕ :
ಕಳೆದ ಒಂದು ವರ್ಷದಿಂದ
ಸಮಾಜಕ್ಕೆ ಮೀಸಲಾತಿಗಾಗಿ
ನಿರಂತರ ಹೋರಾಟ ಮಾಡುತ್ತ ಬಂದಿದ್ದು, ನಿರಂಜನಾನಂದ ಸ್ವಾಮಿಜಿ ನೇತ್ರತ್ವದಲ್ಲಿ
ರಾಜ್ಯ ವಿಭಾಗದಲ್ಲಿ ಸಮಾವೇಶ ನಡೆಸಿ ಪ್ರತಿಭಟಿಸಿದ್ದೇವೆ. ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ಮುಗಿದಿದ್ದು, ಕೂಡಲೇ ವರದಿ ತರಿಸಿ ಎಸ್.ಟಿ.ಗೆ ಸೇರ್ಪಡೆ ಮಾಡಬೇಕು.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡ ರಾಜೇಂದ್ರ ಸಣ್ಣಕ್ಕಿ ಮಾತನಾಡಿ,
ಡಿ.27 ರಂದು ಪ್ರತಿಭಟನೆಗೆ ಬೆಳಗಾವಿ ಸುವರ್ಣ ಸೌಧ ಬಳಿಯ ಕೊಂಡಸಕೊಪ್ಪ ಎ ಬ್ಲಾಕ್ ನಲ್ಲಿ ಕುರುಬ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು.
ಕರ್ನಾಟಕ ಪ್ರದೇಶ ಕುರುಬ ಸಂಘ
ಪ್ರತಿಭಟನೆ ಮೂಲಕ ಹಕ್ಕೊತ್ತಾಯ ಮಂಡಿಸಲಿದ್ದೇವೆ.
ಕಳೆದ 20 ವರ್ಷಗಳಿಂದ ಅನೇಕ ವಿಧಗಳಲ್ಲಿ ಹೋರಾಟ ಮಾಡುತ್ತ ಬಂದಿದೆ. ಗೊಂಡ ಮತ್ತು ಕುರುಬ ಪರ್ಯಾಯ ಪದ. ಎರಡು ವರ್ಷದಿಂದ ಶ್ರೀಗಳ ನೇತ್ರತ್ವದಲ್ಲಿ ಹೋರಾಟ ನಡೆಸಿದ್ದೆವೆ. ಕಾಗಿನೆಲೆಮಠದಿಂದ ಬೆಂಗಳೂರು ವರೆಗೆ ಪ್ರತಿಭಟನೆ ಮಾಡಿ ಮನವಿ ಮಾಡಲಾಗಿದೆ.
ಸಿಎಮ್ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು ಆದರೆ ಈವರೆಗೆ ಆಗಿಲ್ಲ. ಕರ್ನಾಟಕ ರಾಜ್ಯದ ಕುರುಬರಿಗೆ ಎಸ್.ಟಿ ಮೀಸಲಾತಿ ನೀಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು. ಮುಖ್ಯಮಂತ್ರಿ ಮನವಿ ಅರ್ಪಿಸಲಿದ್ದೇವೆ ಎಂದು ತಿಳಿಸಿದರು.
ಬಸವರಾಜ ಬಸಳಿಗುಂದಿ, ಅಶೋಕ ಮೆಟಗುಡ್ಡ, ವಿನಾಯಕ , ನಸಲಾಪೂರಿ, ಜಿ ಜಿ ಕಣವಿ, ಹಾಳಕರ, ವಿಠ್ಠಲ ಜಡಗನ್ನವರ ಇದ್ದರು.