Breaking News

ಗ್ರಾಮ ಪಂಚಾಯತಿಗಳಿಗೆ ಸ್ವಚ್ಛವಾಹಿನಿ ಘನ ತ್ಯಾಜ್ಯ ವಿಲೇವಾರಿ ವಾಹನ ಹಸ್ತಾಂತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಗ್ರಾಮ ಪಂಚಾಯತಿಗಳಿಗೆ ಸ್ವಚ್ಛವಾಹಿನಿ ಘನ ತ್ಯಾಜ್ಯ ವಿಲೇವಾರಿ ವಾಹನ ಹಸ್ತಾಂತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಯುವ ಭಾರತ ಸುದ್ದಿ ಗೋಕಾಕ : ಜನರ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡುವ ಮೂಲಕ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜೊತೆಗೆ ಗ್ರಾಮಗಳನ್ನು ಸ್ವಚ್ಛವಾಗಿಡಿಸುವ ಮೂಲಕ ಸೌಂದರ್ಯಿಕರಣಕ್ಕೆ ಆದ್ಯತೆ ನೀಡಿ ಗ್ರಾಮಗಳ ವಿಕಾಸಕ್ಕೆ ಸ್ಥಾನಿಕಮಟ್ಟದ ಅಧಿಕಾರಿಗಳು ಸ್ಪಂದಿಸುವ ಕಾರ್ಯ ಮಾಡುವಂತೆ ಅರಭಾವಿ ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು.

ಇಲ್ಲಿನ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಗ್ರಾಮ ಪಂಚಾಯತಿ 15ನೇ ಹಣಕಾಸು ಯೋಜನೆಯಡಿ ಅರಭಾವಿ ಕ್ಷೇತ್ರದ 26 ಗ್ರಾಮ ಪಂಚಾಯತಿಗಳಿಗೆ “ಸ್ವಚ್ಛವಾಹಿನಿ” ಘನ ತಾಜ್ಯ ವಿಲೇವಾರಿ ವಾಹನಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಆಯಾ ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪಂಚಾಯತಿಯ ಸಮಿತಿಗಳಿಗೆ ಸೂಚಿಸಿದರು.

ಗೋಕಾಕ ತಾಲೂಕಿಗೆ 10 ಮತ್ತು ಮೂಡಲಗಿ ತಾಲೂಕಿಗೆ 16 ವಾಹನಗಳು ಸೇರಿದಂತೆ ಒಟ್ಟು ಅರಭಾವಿ ಮತಕ್ಷೇತ್ರದ 26 ಗ್ರಾಮಗಳಿಗೆ ಸ್ವಚ್ಛವಾಹಿನಿ ವಾಹನಗಳನ್ನು ವಿತರಿಸಲಾಗಿದೆ. ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಘನತಾಜ್ಯ ವಸ್ತುಗಳನ್ನು ಗ್ರಾಮದಲ್ಲಿನ ಪ್ರತಿ ಬೀದಿ ಬೀದಿಗಳಿಗೆ ತೆರಳಿ ಕಸ ಸಂಗ್ರಹಣೆ ಮಾಡಿ ನಿರ್ದಿಷ್ಠ ಪಡಿಸಿದ ಸ್ಥಳದಲ್ಲಿ ವಿಲೇವಾರಿ ಮಾಡಿ ಸ್ವಚ್ಛ ಗ್ರಾಮಗಳನ್ನಾಗಿ ಪರಿವರ್ತಿಸಲು ಶ್ರಮಿಸಬೇಕೆಂದು ಸಲಹೆ ನೀಡಿದರು.

ಗ್ರಾಮ ಪಂಚಾಯತಿಗಳ ಅಭಿವೃದ್ದಿಗಾಗಿ ಸರಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಆದರೂ ಕೆಲ ಗ್ರಾಮ ಪಂಚಾಯತಿಗಳು ಜನರ ಮೂಲ ಸೌಕರ್ಯಗಳಿಗೆ ಒತ್ತು ನೀಡುತ್ತಿಲ್ಲ. ಕುಡಿಯುವ ನೀರಿನ ಜಲ ಕುಂಭಗಳು ಇನ್ನೂ ದುರಸ್ತಿ ಹಂತದಲ್ಲಿವೆ. ಶೌಚಾಲಯಗಳು ಅವ್ಯವಸ್ಥೆಯಿಂದ ಕೂಡಿವೆ. ಬಸ್ ನಿಲ್ದಾಣಗಳಲ್ಲಿಯೂ ಸಹ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ ಈ ಕಾರಣಗಳಿಂದ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಇನ್ನಾದರೂ ಜನರ ಸಮಸ್ಯೆಗಳನ್ನು ನೀಗಿಸಲು ಪ್ರಯತ್ನಿಸಿ ಎಂದು ಪಂಚಾಯತ ಪಿಡಿಓಗಳಿಗೆ ನೀತಿಪಾಠ ಹೇಳಿದ ಅವರು, ನಿಮ್ಮಿಂದ ಆಗದ ಕೆಲಸಗಳನ್ನು ನಮ್ಮ ಎನ್‍ಎಸ್‍ಎಫ್ ತಂಡ ಮಾಡುತ್ತಿದೆ. ಫೆಬ್ರುವರಿ-20 ರೊಳಗೆ ಕ್ಷೇತ್ರದಲ್ಲಿರುವ ಎಲ್ಲ ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಜನಸ್ಪಂದನ ತಂಡಕ್ಕೆ ಪಟ್ಟಿ ಮಾಡಲು ಸೂಚಿಸಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಗೋಕಾಕ ಇಓ ಮುರಳಿಧರ ದೇಶಪಾಂಡೆ, ಮೂಡಲಗಿ ಇಓ ಎಫ್.ಜಿ.ಚಿನ್ನನವರ, ಆಯಾ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಹಾಗೂ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

12 − four =