ಮೂಡಲಗಿ -ಇದೇ ದಿ. ೧೧ ರಂದು ನಡೆಯಲಿರುವ ಕನಕದಾಸ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯನ್ನು ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ನಡೆಸಲಾಗಿದ್ದು ತಾಲೂಕಾಡಳಿತವು ಮತ್ತೆ ಪತ್ರಕರ್ತರನ್ನು ದೂರವಿಟ್ಟು ಸಭೆ ನಡೆಸಿದೆ.
ತಾಲೂಕಾಡಳಿತದಿಂದ ಆಚರಿಸಲಾಗುವ ಸರಕಾರಿ ಕಾರ್ಯಕ್ರಮಗಳು, ಜಯಂತಿ ಉತ್ಸವಗಳ ಸಿದ್ಧತೆಗಾಗಿ ಪೂರ್ವಭಾವಿ ಸಭೆಗೆ ತಾಲೂಕಿನ ಪತ್ರಕರ್ತರಿಗೆ ಆಹ್ವಾನ ನೀಡುವುದು ಮೊದಲಿನಿಂದ ಬಂದ ಪದ್ಧತಿಯಾಗಿದ್ದರೂ ತಹಶೀಲ್ದಾರ ಡಿ ಜಿ ಮಹಾತ್ ಅವರು ಪತ್ರಕರ್ತರಿಗೆ ಆಹ್ವಾನ ನೀಡದೆ ಸಭೆ ನಡೆಸಿರುವುದು ಆಶ್ಚರ್ಯಕರವಾಗಿದೆ.
ಈ ಹಿಂದೆ ಕೂಡ ಕೆಲವು ಪತ್ರಕರ್ತರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೂ ಕ್ಯಾರೆ ಎನ್ನದ ತಹಶೀಲ್ದಾರರು ಮತ್ತೆ ಮತ್ತೆ ಪತ್ರಕರ್ತರಿಗೆ ಹೇಳದೆ ಸಭೆ ನಡೆಸಿ ಅವಮಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದರ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಲು ಹಲವು ಪತ್ರಕರ್ತರು ನಿರ್ಧರಿಸಿದ್ದಾರೆ
