Breaking News

ಕಲ್ಲೋಳಿ ಪಟ್ಟಣದಲ್ಲಿ ಜಿಎಲ್‌ಬಿಸಿ ಕಾಲುವೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ

Spread the love

ಮೂಡಲಗಿ: ಇಂದು ಬೆಳವಣಿಗೆ ಹೊಂದುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಕೃಷಿ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುವುದು ಅಗತ್ಯವಾಗಿದೆ. ನೇಗಿಲಯೋಗಿ ದೇಶದ ಬೆನ್ನಲುಬು, ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ನೀರಾವರಿ ಪಾತ್ರ ಮುಖ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಬೆಳಗಾವಿ ಕರ್ನಾಟಕ ನೀರಾವರಿ ನಿಗಮ ವಿಭಾಗದ ಸಹಯೋಗದ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ರವಿವಾರ ಆ.2ರಂದು ನಡೆದ ಜಿಎಲ್‍ಬಿಸಿ ಕಾಲುವೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ರೈತರ ಸಮಗ್ರ ಅಭಿವೃದ್ಧಿಗಾಗಿ ಕೃಷಿ ವಲಯಕ್ಕೆ ಒತ್ತು ನೀಡಿ ಬೆಳಗಾವಿ ಕರ್ನಾಟಕ ನೀರಾವರಿ ಇಲಾಖೆಯಿಂದ ಸುಮಾರು 50ಲಕ್ಷ ರೂ.ಗಳ ವಿಶೇಷ ಅನುದಾನದಡಿಯಲ್ಲಿ ಕಲ್ಲೋಳಿ ಪಟ್ಟಣದ ಸಿದ್ಧಾರೂಢ ಮಹಾದ್ವಾರದ ಪಕ್ಕದಲ್ಲಿರುವ ಘಟಪ್ರಭಾ ಎಡದಂಡೆ ಕಾಲುವೆ ಜಾಲದಡಿಯಲ್ಲಿ ಬರುವ ಕಾಲುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಭೀಮಶೆಪ್ಪ ಖಾನಾಪೂರ, ಬಸವರಾಜ ಬೆಳಕೂಡ, ವಸಂತ ತಹಸಿಲ್ದಾರ, ಬಸವರಾಜ ಜಗದಾಳಿ, ಮಹಾದೇವ ಖಾನಾಪೂರ, ಮಹಾದೇವ ಮದಭಾವಿ, ಸಂಗಪ್ಪ ತುಪ್ಪದ, ಅರ್ಜುನ ಚಿಕ್ಕೋಡಿ, ಗಿರಿಮಲ್ಲಪ್ಪ ಸವಸುದ್ಧಿ, ಗುತ್ತಿಗೆದಾರ ಈರಣ್ಣ ವಾಲಿ, ಈರಣ್ಣ ಮುನ್ನೋಳಿಮಠ ಸೇರಿದಂತೆ ರೈತರು, ಗ್ರಾಮಸ್ಥರು ಇದ್ದರು.


Spread the love

About Yuva Bharatha

Check Also

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ …

Leave a Reply

Your email address will not be published. Required fields are marked *

fifteen + ten =