ಗೋಕಾಕ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ನ್ಯಾಕ್ ಕಮಿಟಿ ಭೇಟಿ
ಯುವ ಭಾರತ ಸುದ್ದಿ ಗೋಕಾಕ :
ನಗರದ ಸರಕಾರಿ ಪ್ರಥಮದರ್ಜೆ ಕಾಲೇಜು ಸಿ.ಜಿ.ಪಿ.ಎ ೨.೩೧ ಅಂಕಗಳನ್ನು ಪಡೆಯುವ ಮೂಲಕ ನ್ಯಾಕ್ “ಬಿ” ಗ್ರೇಡ್ ಮಾನ್ಯತೆ ಪಡೆದಿದೆ ಎಂದು ಪ್ರಾಚಾರ್ಯ ಮಹೇಶ್ ಕಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನೇವರಿ ೩೦ ಮತ್ತು ೩೧ ರಂದು ನ್ಯಾಕ್ ಕಮಿಟಿ ಚೆರಮನ್ ಡಾ.ಪರಂಮ ಶಿವಮ್ ಮನಿಶಂಕರ , ಕೊ ಆರ್ಡಿನೇಟರ ಮೆಂಬರ ಡಾ.ಜಯಪ್ರಕಾಶ್ ತ್ರಿವಿಧಿ ಹಾಗೂ ಮೆಂಬರ ಡಾ.ವೈದೇಹಿ ದಫ್ತರದಾರ ಇವರು ಕಾಲೇಜಿಗೆ ಭೆಟ್ಟಿ ನೀಡಿ ಪರಿಶೀಲಿಸಿ ನೀಡಿದ ವರದಿಯನ್ನು ಆಧರಿಸಿ ಸಿ.ಜಿ.ಪಿ.ಎ ೨.೩೧ ಅಂಕಗಳೊಂದಿಗೆ “ಬಿ” ಗ್ರೇಡ್ ಮಾನ್ಯತೆಯನ್ನು ಯು.ಜಿ.ಸಿ.ನ್ಯಾಕ್ ನವರು ನೀಡಿದ್ದಾರೆ.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಾಸಕ ರಮೇಶ ಜಾರಕಿಹೊಳಿ ಹಾಗೂ ಸದಸ್ಯರ ಮಾರ್ಗದರ್ಶನ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ಕಾಲೇಜಿನ ಎಲ್ಲ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು , ಪಾಲಕರು , ಹಳೆ ವಿದ್ಯಾರ್ಥಿಗಳು ಇವರೆಲ್ಲ ಸಹಕಾರ ಪ್ರಮುಖವಾಗಿದ್ದು, ಅವರೆಲ್ಲಗೂ ಅಭಿನಂದನೆಗಳು ಸಲ್ಲಿಸಿದರು.