ಅಲೆಮಾರಿ ಅಭಿವೃದ್ಧಿ ನಿಗಮ :
ಸಂಜೀವಕುಮಾರ ದಶವಂತ ಸ್ವಾಗತ
ಯುವ ಭಾರತ ಸುದ್ದಿ ಇಂಡಿ :
ರಾಜ್ಯ ಸರ್ಕಾರ ಪಜಾ,ಪಪಂ.ದ ಅಲೆಮಾರಿಗಳ ಸಮಗ್ರ ಅಭಿವೃದ್ದಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿದಕ್ಕೆ ಇಲ್ಲಿನ ಅಲೆಮಾರಿ, ಅರೆ ಅಲೆಮಾರಿ ಚನ್ನದಾಸರ ಸಮುದಾಯದ ಜಿಲ್ಲಾಧ್ಯಕ್ಷ ಸಂಜೀವಕುಮಾರ ದಶವಂತ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಭಿನಂದಿಸಿದ್ದಾರೆ.
ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,ಅಲೆಮಾರಿಗಳ ನೋವು,ಸಂಕಷ್ಟ,ಆರ್ಥಿಕ ಹಿನ್ನಡೆಯನ್ನು ಅನುಸರಿಸುತ್ತಿದ್ದು,ಲಕ್ಷಾಂತರ ದಮನಿತ ಅಲೆಮಾರಿ ಜನರು ಇಂದಿಗೂ ಅತಂತ್ರವಾಗಿ ಸಾಮಾಜಿಕ ತ್ರಿಶಂಕು ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹಾಗೂ ಸಂಪುಟದ ಅನೇಕ ಸಚಿವರು ಹಾಗೂ ಐತಿಹಾಸಿಕ ನಿರ್ಣಯಕ್ಕೆ ಬೆಂಬಲ ಪಡೆದು ಈ ತೀರ್ಮಾಣ ಕೈಗೊಂಡು ನಿಗಮಕ್ಕೆ ಆದೇಶ ಪ್ರಕಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಅಲೆಮಾರಿ ಸಮುದಾಯದ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.
೭ ದಶಕಗಳಿಂದ ಹಾದಿ ಬೀದಿಯಲ್ಲಿ ಟೆಂಟು ಗುಡಿಸಲು ಗುಡಾರಗಳನ್ನು ಕಟ್ಟಿಕೊಮಡು ನಿಽðಷ್ಟ ದಿಕ್ಕು ಗುರಿಯೇ ಇಲ್ಲದ ಅತಂತ್ರಅಲೆಮಾರಿಗಳನ್ನು ಕಡೆಗಣಿಸಲ್ಪಟ್ಟಿದ ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ನಿರಂತರ ನಿರ್ಲಕ್ಷಕ್ಕೆ ಒಳಗಾಗಿ ಸಮಾಜದಿಂದ ಕಳಂಕಕ್ಕೆ ಒಳಗಾಗುತ್ತಾ ನಿತ್ಯವೂ ಸಂಕಟದೊಂದಿಗೆ ಇರುವುದರಲ್ಲಿಯೇ ಸಂತಸದ ಸ್ವಾವಲಂಭನೆಯ ಬದುಕು ಸಾಗಿಸುತ್ತಿದ್ದ ದಮನಿತ ಅಲೆಮಾರಿಗಳಿಗೆ ಧ್ವನಿ ಸಿಕ್ಕಂತಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಎಸ್ಸಿ ಅಲೆಮಾರಿಗಳ ಬದುಕಿನಲ್ಲಿ ಹೊಸ ಮನ್ವಂತರ ರಾಜ್ಯದಿಂದ ಆರಂಭವಾಗಿದ್ದು ಸಂತಸದ ಸಂಗತಿ.ರಾಜ್ಯ ಬಿಜೆಪಿ ಸರ್ಕಾರದ ಕಳಕಳಿಯ ಕಾರಣದಿಂದಷ್ಟೇ ಅಲ್ಪಅವಧಿಯಲ್ಲಿ ಎಸ್ಸಿ ಅಲೆಮಾರಿ ಸಮಗ್ರ ಅಭಿವೃದ್ದಿ ಹಲವು ಬದಲಾವಣೆಗಳನ್ನು ತರುವಂತ ಐತಿಹಾಸಿಕ ತೀರ್ಮಾಣವನ್ನು ಕೈಗೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ ಅವರು ರಾಜ್ಯ ಬಿಜೆಪಿ ಸರ್ಕಾರದ ಋಣ ನಮ್ಮ ಸಮುದಾಯದ ಮೇಲೆ ಇದೆ ಎಂದು ಹೇಳಿದರು.
ಹರಣಸಿಕಾರಿ ಸಮುದಾಯದ ತಾಲೂಕು ಅಧ್ಯಕ್ಷ ಶಂಕರ ಕೊಡೆ,ಬಾಳು ಚವ್ಹಾಣ,ಗೋಪಾಲ ಚವ್ಹಾಣ,ಅರ್ಜುನ ಪವಾರ,ಲಕ್ಷ್ಮಣ ಪವಾರ,ಚೆನ್ನದಾಸರ ಸಮುದಾಯದ ಮುಖಂಡರಾದ ನಾಗರಾಜ ದಶವಂತ,ರವಿ ಶಹಾಪೂರ,ಸಂಜೀವಕುಮಾರ ದಶವಂತ,ಶಿವಾಜಿ,ಮಾರುತಿ ದಶವಂತ,ವಿಠೋಬ ದಶವಂತ,ಅಮರೇಷ ಚಿನ್ನಪ್ಪ ,ವಿಠೋಬ,ಸೋಮಣ್ಣ ,ನಿತೇಶ,ಮಲ್ಲಪ್ಪ ಸಿದ್ದು,ಸಂತೋಷ,ಕಾಮಣ್ಣ ದಶವಂತ,ಶಾಂತಪ್ಪ ದಶವಂತ ಇತರರು ಈ ಸಂದರ್ಭದಲ್ಲಿ ಇದ್ದರು.