Breaking News

ಬೃಹತ್ ಜನಜಾಗೃತಿ ಸಮಾವೇಶ

ಬೃಹತ್ ಜನಜಾಗೃತಿ ಸಮಾವೇಶ   ಯುವ ಭಾರತ ಸುದ್ದಿ ಬೆಳಗಾವಿ :  ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ತಂಗಡಗಿಯ ಶ್ರೀ ಹಡಪದ ಅಪ್ಪಣ್ಣ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಫೆ. 1ರಂದು ಸಮುದಾಯ ಭವನ ಉದ್ಘಾಟನೆ, ನೂತನ ಕಟ್ಟಡದ ಅಡಿಗಲ್ಲು ಹಾಗೂ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ ತಿಳಿಸಿದರು. ಬುಧವಾರ ಬೆಳಗಾವಿಯ …

Read More »

ದೆಹಲಿ ಗಣರಾಜ್ಯೋತ್ಸವಕ್ಕೆ ಪಂಗಣ್ಣವರ ಅವರಿಗೆ ಅಹ್ವಾನ

ದೆಹಲಿ ಗಣರಾಜ್ಯೋತ್ಸವಕ್ಕೆ ಪಂಗಣ್ಣವರ ಅವರಿಗೆ ಅಹ್ವಾನ ಯುವ ಭಾರತ ಸುದ್ದಿ ಗೋಕಾಕ : ಇಲ್ಲಿಯ ನಿವೃತ್ತ ಪ್ರೊ. ಡಾ. ಎ.ವೈ.ಪಂಗಣ್ಣವರ ಅವರನ್ನು ಈ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರದಿಂದ ಆಮಂತ್ರಿಸಲಾಗಿದೆ. ಬುಡಕಟ್ಟು ಜನಾಂಗದ ಸಂಶೋದನಾ ಸಂಸ್ಥೆ ಶಿಫಾರಸ್ಸಿನ ಮೇರೆಗೆ ಈ ಆಯ್ಕೆ ಮಾಡಲಾಗಿದ್ದು, ಬುಡಕಟ್ಟು ಜನಾಂಗದ ಸಂಶೋದನೆಯಲ್ಲಿ ಡಾ.ಪಂಗಣ್ಣವರ ಅವರು ಸಲ್ಲಿಸಿದ ಸೇವೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಪರಿಗಣಿಸಿ ಆಯ್ಕೆಯನ್ನು ಮಾಡಲಾಗಿದೆ. ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ …

Read More »

ಗೋಕಾಕ : ರಾಷ್ಟ್ರೀಯ ಮತದಾರರ ದಿನ ಉದ್ಘಾಟನೆ

ಗೋಕಾಕ : ರಾಷ್ಟ್ರೀಯ ಮತದಾರರ ದಿನ ಉದ್ಘಾಟನೆ ಯುವ ಭಾರತ ಸುದ್ದಿ ಗೋಕಾಕ : ನಮ್ಮ ದೇಶದ ಮತದರರನ್ನು ಸಬಲೀಕರಣ, ಜಾಗರೂಕ, ಸುರಕ್ಷಿತ ಮತ್ತು ಮಾಹಿತಿದಾರರನ್ನಾಗಿ ಮಾಡುವುದು. ಚುನಾವಣೆಯ ಸಮಯದಲ್ಲಿ ದೇಶದ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಹಾಗೂ ಜವಾಬ್ದಾರಿಯುತ ನಾಗರಿಕರಾಗಲು ಅವರಿಗೆ ಸಹಕರಿಸುವುದು ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ ಎಂದು ತಾ.ಪಂ ಅಧಿಕಾರಿ ಮುರಳೀಧರ ದೇಶಪಾಂಡೆ ಹೇಳಿದರು. ಬುಧವಾರದಂದು ತಾಲೂಕಾಡಳಿತ,ತಾಪಂ, ನಗರಸಭೆ, ಶಿಕ್ಷಣ ಇಲಾಖೆ ಸೇರಿದಂತೆ ಇತರ ಇಲಾಖೆಗಳು …

Read More »

ಬೆಳಗಾವಿಯಲ್ಲಿ ಜ. 28, 29 ರಂದು ಅಖಿಲ ಕರ್ನಾಟಕ ಜೈನ ಸಾಹಿತ್ಯ ಸಮ್ಮೇಳನ

ಬೆಳಗಾವಿಯಲ್ಲಿ ಜ. 28, 29 ರಂದು ಅಖಿಲ ಕರ್ನಾಟಕ ಜೈನ ಸಾಹಿತ್ಯ ಸಮ್ಮೇಳನ ಯುವ ಭಾರತ ಸುದ್ದಿ ಬೆಳಗಾವಿ : ಭರತೇಶ ಶಿಕ್ಷಣ ಸಂಸ್ಥೆ ಕನ್ನಡ ನಾಡು, ನುಡಿ, ಏಳ್ಗಗೆಗಾಗಿ ಹತ್ತಾರು ಕಾರ್ಯಕ್ರಮಗಳನ್ನೂ ಕಳೆದ 50 ವರ್ಷದುದ್ದಕ್ಕೂ ಆಯೋಜಿಸುತ್ತ ಬಂದಿದೆ. ಜೈನಧರ್ಮದ ಪ್ರಸಾರ, ಪ್ರಚಾರಕ್ಕಾಗಿ ಮೂಂಚೂಣಿಯಲ್ಲಿದೆ. ಭಟ್ಟಾರಕ ಪರಂಪರೆಯನ್ನು ಮುಂದುವರೆಸಲು ಸಾಕಷ್ಟು ಪ್ರಯತ್ನಪಟ್ಟಿದೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಹಿರಿತನದಲ್ಲಿ ಯಕ್ಷ-ಯಕ್ಷಣಿಯರ ಪರಿಕಲ್ಪನೆ, ಜೈನ ಶಾಸನಗಳು, ಚಂಪು ಕಾವ್ಯ ಕುರಿತು ಹಾಗೂ …

Read More »

ರಕ್ತದಾನವೇ ಶ್ರೇಷ್ಠ ದಾನ

ರಕ್ತದಾನವೇ ಶ್ರೇಷ್ಠ ದಾನ ಯುವ ಭಾರತ ಸುದ್ದಿ ಬೆಳಗಾವಿ : ಎಲ್ಲ ದಾನಗಳಲ್ಲಿ ರಕ್ತದಾನ ಅತ್ಯಮೂಲ್ಯವಾದುದು. ಇದರಿಂದ ದೈಹಿಕ ಆರೋಗ್ಯವು ಉತ್ತಮವಾಗುವದಲ್ಲದೇ ತನ್ನಿಂದ ಇನ್ನೊಬ್ಬರಿಗೆ ಜೀವದಾನವಾಯಿತು ಎಂಬ ಆತ್ಮ ಸಂತೋಷವನ್ನು ಹೊಂದಬಹುದಾಗಿದೆ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ರಕ್ತಭಂಡಾರದ ಅಧಿಕಾರಿ ಡಾ. ಅಶೋಕ ಅಲತಗಿ ಹೇಳಿದರು. ನಗರದ ಉದ್ಯಮಬಾಗ ಅಶೋಕ ಐರನ್ ನ ಪ್ಲಾಂಟ 3 ರಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. 18 ವರ್ಷ …

Read More »

ಎತ್ತುಗಳ ಮೂಕ ರೋಧನೆಗೆ ಸರಕಾರ ಹಾಕುವುದೇ ಕಡಿವಾಣ…..?

ಎತ್ತುಗಳ ಮೂಕ ರೋಧನೆಗೆ ಸರಕಾರ ಹಾಕುವುದೇ ಕಡಿವಾಣ…..? ಸಿದ್ದರೂಢ ಬಣ್ಣದ, ರಡ್ಡೇರಹಟ್ಟಿ : ಕೃಷಿ ಕಾಯಕದೊಂದಿಗೆ ಎತ್ತುಗಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಕಾಳಜಿಯಿಂದ ಸಾಕಿ ಸಲಹುತ್ತಿದ್ದ ರೈತರು ಇಂದು ತಮ್ಮ ಸ್ವಾರ್ಥಕ್ಕಾಗಿ ದಯೆಯನ್ನು ಮರೆತು ಮೂಕ ಜಾನುವಾರಗಳನ್ನು ಇಟ್ಟುಕೊಂಡು ಹಣ ಗಳಿಕೆಯ ಆಸೆಗಾಗಿ ಅವುಗಳಿಗೆ ಹಿಂಸೆ ನೀಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ – ಕಾಗವಾಡ ತಾಲೂಕಿನಲ್ಲಿ ಐದಕ್ಕೂ ಹೆಚ್ಚು ಕಬ್ಬಿನ ಕಾರ್ಖಾನೆಗಳಲ್ಲಿ ಎತ್ತುಗಳು ಕಬ್ಬನ್ನು ಸಾಗಾಣಿಕೆ ಮಾಡುತ್ತಿರುವ ಈ ದೃಶ್ಯದಲ್ಲಿನ …

Read More »

ಹೊರನಾಡು ಕನ್ನಡಿಗರ ಶೈಕ್ಷಣಿಕ, ಉದ್ಯೋಗ ಸಮಸ್ಯೆ ಕುರಿತು ಸಭೆ

ಹೊರನಾಡು ಕನ್ನಡಿಗರ ಶೈಕ್ಷಣಿಕ, ಉದ್ಯೋಗ ಸಮಸ್ಯೆ ಕುರಿತು ಸಭೆ ಯುವ ಭಾರತ ಸುದ್ದಿ ಬೆಂಗಳೂರು : ಹೊರನಾಡು ಕನ್ನಡಿಗರು ಎದುರಿಸುತ್ತಿರುವ ಶೈಕ್ಷಣಿಕ ಮತ್ತು ಉದ್ಯೋಗ ಸಮಸ್ಯೆಗಳನ್ನು ಚರ್ಚಿಸಲು ಇಂದು ಬೆಂಗಳೂರಿನ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನೆರೆಯ ಆರು ರಾಜ್ಯಗಳ ಕನ್ನಡ ಪರ ಸಂಘಟನೆಗಳ ಸಭೆ ನಡೆಯಿತು. ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಭೆಯಲ್ಲಿ ಮಹಾರಾಷ್ಟ್ರ, ಗೋವೆ,ಆಂಧ್ರಪ್ರದೇಶ,ತೆಲಂಗಾಣ, ತಮಿಳುನಾಡು ಹಾಗೂ ಕೇರಳದ ಸುಮಾರು 50 …

Read More »

ಕ್ರಿಕೆಟ್ ಆಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಕ್ರಿಕೆಟ್ ಆಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ನಾಗನೂರ : ನಾಗನೂರ ಪ್ರಿಮಿಯರ್ ಲೀಗ್ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ರಿಕೆಟ್ ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊದಲಿಂದಲೂ ಕ್ರಿಕೆಟ್ ಬಗ್ಗೆ ಅಪಾರ ಅಭಿಮಾನವನ್ನು ಜೊತೆಗೆ ಕ್ರಿಕೆಟ್ ಆಟಗಾರರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಅಭಿಮಾನಿಗಳ ಒತ್ತಾಯದ ಮೇರೆಗೆ ಬ್ಯಾಟಿಂಗ್ ಮಾಡುವ ಮೂಲಕ ನೆರೆದ ಸಭಿಕರನ್ನು ರಂಜಿಸಿದರು. ಹಿರಿಯ ಸಹಕಾರಿ ಬಿ.ಆರ್. ಪಾಟೀಲ ಹಾಗೂ …

Read More »

ಕಾನ್ವೆ ಶತಕ ವ್ಯರ್ಥ : ಗೆಲುವಿನೊಂದಿಗೆ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಟ್ಟ ಭಾರತ !

ಕಾನ್ವೆ ಶತಕ ವ್ಯರ್ಥ : ಗೆಲುವಿನೊಂದಿಗೆ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಟ್ಟ ಭಾರತ ! ಯುವ ಭಾರತ ಸುದ್ದಿ ಇಂದೋರ್ : ಪ್ರವಾಸಿ ನ್ಯೂಜಿಲೆಂಡ್ ಎದುರಿನ ಕೊನೆಯ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ 90 ರನ್ ಗಳಿಂದ ಅಮೋಘ ಜಯಗಳಿಸಿ ರ್ಯಾಂಕಿಂಗ್ ನಲ್ಲಿ ವಿಶ್ವದ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಭಾರತ ತಂಡದ ಪರವಾಗಿ ನಾಯಕ ರೋಹಿತ್ ಶರ್ಮ ಹಾಗೂ ಶುಭಮನ್ ಗಿಲ್ ಅತ್ಯಮೋಘ ಶತಕ ಬಾರಿಸಿದರು. …

Read More »

ನಾಡಿನ ಸಾಂಸ್ಕೃತಿಕ ವಲಯಕ್ಕೆ ಸಂಸ್ಥಾನಗಳ ಕೊಡುಗೆ ಅನನ್ಯ : ಮಹಾಂತೇಶ ಕವಟಗಿಮಠ

ನಾಡಿನ ಸಾಂಸ್ಕೃತಿಕ ವಲಯಕ್ಕೆ ಸಂಸ್ಥಾನಗಳ ಕೊಡುಗೆ ಅನನ್ಯ : ಮಹಾಂತೇಶ ಕವಟಗಿಮಠ ಯುವ ಭಾರತ ಸುದ್ದಿ ಬೆಳಗಾವಿ : ಇತಿಹಾಸವನ್ನು ಬಲ್ಲವರು ಇತಿಹಾಸವನ್ನು ನಿರ್ಮಿಸಬಲ್ಲರು ಎಂಬ ನುಡಿಯನ್ನು ಇಂದಿನ ಯುವ ಜನಾಂಗ ಅರಿಯಬೇಕು. ನಮ್ಮ ನಾಡಿನ ಹಾಗೂ ದೇಶ ಕೆಲವು ಸಂಸ್ಥಾನಿಕರು ಸಾಂಸ್ಕೃತಿಕ ವಲಯಕ್ಕೆ ಭವ್ಯವಾದ ಕೊಡುಗೆಯನ್ನು ನೀಡುವ ಮೂಲಕ ಇಂದಿಗೂ ಅಮರರಾಗಿ ಉಳಿದಿದ್ದಾರೆ ಎಂದು ಕರ್ನಾಟಕ ಸರ್ಕಾರ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು. …

Read More »