Breaking News

ಕೇಂದ್ರ ಬಜೆಟ್ -ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

Spread the love

ಕೇಂದ್ರ ಬಜೆಟ್ – ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

 

ಯುವ ಭಾರತ ಸುದ್ದಿ ಗೋಕಾಕ : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಮಧ್ಯಮ, ಬಡವರ ಕುಟುಂಬ ಸ್ನೇಹಿ ಬಜೆಟ್ ಆಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶದ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಪ್ರಗತಿಗೆ ಹಾಗೂ ಉದ್ಯಮಗಳ ಬೆಳವಣಿಗೆಗೆ ಹತ್ತು ಹಲವಾರು ಅಂಶಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ. ಕರ್ನಾಟಕಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ 53೦೦ ಕೋಟಿ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ. ಅದರಂತೆ ಆದಾಯ ಮಿತಿ ಹೆಚ್ಚಳ, ಕೃಷಿ ಉದ್ಯಮಿಗಳ ಸ್ಟಾರ್ಟಪ್ ಆಪ್‌ಗೆ ಉತ್ತೇಜನ, ೧೫೭ ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ, 5೦ ಹೊಸ ವಿಮಾನ ನಿಲ್ದಾಣ, ಏಕಲವ್ಯ ಶಾಲಾ ವಸತಿ ಶಾಲೆಗಳಿಗೆ ಶಿಕ್ಷಕರ ನೇಮಕ, ಮಹಿಳಾ ಸಮ್ಮಾನ್ ಯೋಜನೆ, ಯುವಕರ ಕೌಶಲ್ಯಕ್ಕೆ ಯೋಜನೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಅಂಶಗಳು, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ಸ್ಥಾಪನೆ, ಆವಾಸ್ ಯೋಜನೆಗೆ ಉತ್ತೇಜನದಂತಹ ಹತ್ತು ಹಲವಾರು ಯೋಜನೆಗಳು ದೇಶವನ್ನು ವಿಶ್ವದಲ್ಲಿ ಮತ್ತಷ್ಟು ಉನ್ನತ್ತಕ್ಕೆ ಏರಿಸಲು ಅನುಕೂಲವಾಗಿದೆ. ಸಮೃದ್ಧ ಭಾರತ ನಿರ್ಮಾಣ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಬಜೆಟ್ ಮತ್ತಷ್ಟು ಶಕ್ತಿ ತುಂಬಿದೆ ಎಂದು ಹೇಳಿದ್ದಾರೆ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

2 × 2 =