Breaking News

ಸಿಡಿಲು ಮುನ್ನೆಚ್ಚರಿಕೆ

ಸಿಡಿಲು ಮುನ್ನೆಚ್ಚರಿಕೆ ಯುವ ಭಾರತ ಸುದ್ದಿ ಬೆಂಗಳೂರು : ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಿಡಿಲಿನಿಂದ ರಕ್ಷಣೆ ಪಡೆಯಬಹುದಾದ ಸರಳ ಮಾರ್ಗಗಳನ್ನು ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ಸಿಡಿಲು-ಮೊಬೈಲ್‌ ಆಪ್ ನಲ್ಲಿ ಸಿಡಿಲಿನ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಸಿಡಿಲಿನ ಸಂಭವನೀಯತೆ ಇದ್ದಲ್ಲಿ ಹೊರಗಿನ ಕೆಲಸಗಳನ್ನು ಮುಂದೂಡಿ, ಆದಷ್ಟು ಮನೆಯಲ್ಲಿಯೇ ಇರುವುದು ಸೂಕ್ತ. ಮನೆಯ ಸುತ್ತಲಿನಲ್ಲಿರುವ ಕೊಳೆತ ಹಾಗೂ ಒಣಗಿದ ಮರಗಳನ್ನು ತೆರವುಗೊಳಿಸಬೇಕು. ಮನೆಯ ಒಳಗಿರುವಾಗ ಸಿಡಿಲು …

Read More »

ಆರ್ ಸಿಬಿ ಕಪ್​ ಗೆಲ್ಲುವ ತನಕ ಸ್ಕೂಲ್​ಗೆ ಸೇರುವುದಿಲ್ಲ ಎಂದ ಪೋರ

ಆರ್ ಸಿಬಿ ಕಪ್​ ಗೆಲ್ಲುವ ತನಕ ಸ್ಕೂಲ್​ಗೆ ಸೇರುವುದಿಲ್ಲ ಎಂದ ಪೋರ ಯುವ ಭಾರತ ಸುದ್ದಿ ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ಹಾಗೂ ಆರ್​ಸಿಬಿ ನಡುವಿನ ಪಂದ್ಯದ ವೇಳೆ ಪುಟ್ಟ ಅಭಿಮಾನಿ ಆರ್​ಸಿಬಿ ಕಪ್ ಗೆಲ್ಲುವ ತನಕ ಶಾಲೆಗೆ ಸೇರಲ್ಲ ಎಂಬ ಪೋಸ್ಟರ್ ಹಿಡಿದುಕೊಂಡು ಪೋಸ್ ನೀಡಿದ್ದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ‘ಕಪ್ ಗೆಲ್ಲುವವರೆಗೂ ಶಾಲೆಗೆ ಸೇರಲ್ಲ’ ಎಂದಿರುವ RCB ಅಭಿಮಾನಿಯ ಅಭಿಲಾಷೆಯನ್ನು …

Read More »

ಮೋದಿ ವಿಷಪೂರಿತ ಹಾವಿದ್ದಂತೆ : ಭಾರೀ ವಿವಾದ ಸೃಷ್ಟಿಸಿತು ಖರ್ಗೆ ಹೇಳಿಕೆ !

ಮೋದಿ ವಿಷಪೂರಿತ ಹಾವಿದ್ದಂತೆ : ಭಾರೀ ವಿವಾದ ಸೃಷ್ಟಿಸಿತು ಖರ್ಗೆ ಹೇಳಿಕೆ ! ಯುವ ಭಾರತ ಸುದ್ದಿ ಗದಗ : ಪ್ರಧಾನಿ ನರೇಂದ್ರ ಮೋದಿ ವಿಷಪೂರಿತ ಹಾವಿದ್ದಂತೆ, ನೆಕ್ಕಿದರೆ ಸತ್ತೇ ಹೋಗುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ‘ಮೋದಿ ವಿಷಪೂರಿತ ಹಾವಿದ್ದಂತೆ. ಇದು ವಿಷವೋ ಅಲ್ಲವೋ ಎಂದು ನೀವು ಭಾವಿಸಿ ಅದನ್ನು ನೆಕ್ಕಿದರೆ, ನೀವು ಸತ್ತು ಹೋಗ್ತೀರಿ. ನೀವು ಯೋಚಿಸಬಹುದು. …

Read More »

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ; ರಾಹುಲ್ ಗಾಂಧಿ ಘೋಷಣೆ !

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ; ರಾಹುಲ್ ಗಾಂಧಿ ಘೋಷಣೆ ! ಯುವ ಭಾರತ ಸುದ್ದಿ ಮಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲಾಗುವುದು ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣದ ಬಸ್ ಘೋಷಣೆ ಮಾಡಲಾಗಿದೆ . ಮಂಗಳೂರಿನಲ್ಲಿ ನಡೆದ …

Read More »

ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್ : ಉಚಿತ ಸಿಲಿಂಡರ್, ಅಂಗನವಾಡಿ ನೌಕರರ ಕಾಯಂ ಉದ್ಯೋಗ

ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್ : ಉಚಿತ ಸಿಲಿಂಡರ್, ಅಂಗನವಾಡಿ ನೌಕರರ ಕಾಯಂ ಉದ್ಯೋಗ ಯುವ ಭಾರತ ಸುದ್ದಿ ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಚುನಾವಣಾ ಜನತಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಿ ಎಂ ಫಾರೂಕ್, ಪಕ್ಷದ ಕಾರ್ಯಾಧ್ಯಕ್ಷ ಅಲ್ಕೋಡ್ ಹನುಮಂತಪ್ಪ, …

Read More »

ನಾಳೆ ಗೀತಾ ಶಿವರಾಜಕುಮಾರ ಕಾಂಗ್ರೆಸ್ ಸೇರ್ಪಡೆ

ನಾಳೆ ಗೀತಾ ಶಿವರಾಜಕುಮಾರ ಕಾಂಗ್ರೆಸ್ ಸೇರ್ಪಡೆ ಯುವ ಭಾರತ ಸುದ್ದಿ ಬೆಂಗಳೂರು: ನಟ ಶಿವರಾಜ​ಕುಮಾರ​ ಪತ್ನಿ ಗೀತಾ ಶಿವರಾಜಕುಮಾರ ಅವರು ನಾಳೆ (ಶುಕ್ರವಾರ) ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಮ್ಮುಖದಲ್ಲಿ ನಾಳೆ ಗೀತಾ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಪುತ್ರಿಯಾಗಿರುವ ಗೀತಾ ಅವರು, ಈ ಹಿಂದೆ ಜೆಡಿಎಸ್‌ನಿಂದ ಲೋಕಸಭಾ ಚುನಾವಣೆಗೆ ಬಿ.ಎಸ್. ಯಡಿಯೂರಪ್ಪ ಎದುರಾಳಿಯಾಗಿ …

Read More »

ಮನೆ ಮಗನ ದಾಖಲೆಯ ವಿಜಯಕ್ಕೆ ಮುನ್ನುಡಿ ಬರೆಯಿರಿ : ಬಾಲಚಂದ್ರ ಜಾರಕಿಹೊಳಿ

ಮನೆ ಮಗನ ದಾಖಲೆಯ ವಿಜಯಕ್ಕೆ ಮುನ್ನುಡಿ ಬರೆಯಿರಿ : ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ಗೋಕಾಕ: ಮೇ-10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದು, ಜನಸೇವೆಗೆ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಅರಭಾವಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿದರು. ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಬುಧವಾರ ಸಂಜೆ ಜರುಗಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿ …

Read More »

ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್ ಪರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಬ್ಬರದ ಪ್ರಚಾರ

ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್ ಪರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಬ್ಬರದ ಪ್ರಚಾರ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್ ಪರ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಗುರುವಾರ ಅಬ್ಬರದ ಚುನಾವಣಾ ಪ್ರಚಾರ ನಡೆಸಿದರು. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಹಿಳಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರದ ನರೇಂದ್ರ ಮೋದಿ ಸರಕಾರ ಮಹಿಳೆಯರ …

Read More »

ಅಂಬಿರಾವ್ ಪಾಟೀಲರಿಂದ ಮತ ಯಾಚನೆ !

ಅಂಬಿರಾವ್ ಪಾಟೀಲರಿಂದ ಮತ ಯಾಚನೆ ! ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಘಟಪ್ರಭಾ ಪುರಸಭೆಯ ವಾರ್ಡ್ ನಂಬರ್ 10 ರಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರವಾಗಿ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಅವರು ಗುರುವಾರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಕಳೆದ ನಾಲ್ಕು ದಶಕಗಳಿಂದ ಗೋಕಾಕ ಮತಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಮಾದರಿಯಾಗಿ ನಿಂತಿವೆ. …

Read More »

ಗ್ಯಾರಂಟಿ ಕಾರ್ಡ್ ವಿತರಿಸಿ ಕೂಲಿ ಕಾರ್ಮಿಕರಿಗೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್

ಗ್ಯಾರಂಟಿ ಕಾರ್ಡ್ ವಿತರಿಸಿ ಕೂಲಿ ಕಾರ್ಮಿಕರಿಗೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಯುವ ಭಾರತ ಸುದ್ದಿ ಬೆಳಗಾವಿ : ಬೆಳಗಾವಿ ಗ್ರಾಮೀಣ ಶಾಸಕಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಲಕ್ಷ್ಮಿ ಹೆಬ್ಬಾಳಕರ ಅವರ ಸುಪುತ್ರ ಮೃಣಾಲ ಹೆಬ್ಬಾಳಕರ ಅವರು ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕೆಲಸಕ್ಕೆ ತಡೆಯೊಡ್ಡಿ ಚುನಾವಣಾ ಪ್ರಚಾರ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಗುರುವಾರ ಬೆಳಗಾವಿ ತಾಲೂಕು ಬೆಳಗುಂದಿ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿದ್ದವರನ್ನು …

Read More »