Breaking News

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಪಸ್ವರ.!

Spread the love

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಪಸ್ವರ.!

ಯುವ ಭಾರತ ಸುದ್ದಿ, ಗೋಕಾಕ:  ನೆರೆ ಹಾವಳಿ ಹಾಗೂ ಕರೋನಾ ವೈರಸ್ಸನಿಂದಾಗಿ ತತ್ತರಿಸಿರುವ ಗೋಕಾವಿ ನಾಡಿನಲ್ಲಿ ಅದ್ದೂರಿ ಸಮ್ಮೇಳನ ಅವಶ್ಯಕತೆ ಇತ್ತಾ ಎಂದು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಕಸಾಪ ತಾಲೂಕ ಘಟಕದ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು, ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸಂಭಾವನೆ ನೀಡಿ ಚಿತ್ರ ನಟಿಯರನ್ನು ಕರೆ ತಂದು ಸಮ್ಮೇಳನ ನಡೆಸುವದು ಸರಿಯಲ್ಲ. ಸಾರ್ವಜನಿಕರು ನೀಡಿದ ಹಣ ದುರ್ಬಳಕೆಯಾಗಬಾರದು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಒಬ್ಬರ ಕೈಗೊಂಬೆಯಾಗಿದ್ದಾರೆ ಎಂದು ದೂರಿದರು.
ಗೋಕಾವಿ ನಾಡಿನಲ್ಲಿ ಇನ್ನೂ ಅನೇಕ ಹಿರಿಯ ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳು, ಸಾಹಿತ್ಯ ಪೋಷಕರು ಹಾಗೂ ಕನ್ನಡಪರ ಸಂಘಟನೆಗಳಿದ್ದು ಎಲ್ಲರನ್ನು ಗಣನೆಗೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಸಮ್ಮೇಳನ ನಡೆಸಲು ಮುಂದಾಗುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಮಂತ್ರಣ ಪತ್ರಿಕೆಯಲ್ಲಿ ಸಾಹಿತಿಗಳ ಕನ್ನಡಪರ ಹೋರಾಟಗಾರರ ಹೆಸರುಗಳನ್ನು ಹಾಕದೇ ಒಬ್ಬ ವ್ಯಕ್ತಿ ಕಸಾಪ ಅಧ್ಯಕ್ಷರನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ತಮಗೆ ಬೇಕಾದವರ ಹೆಸರುಗಳನ್ನು ಮಾತ್ರ ಹಾಕಿಸಿದ್ದು, ಇದನ್ನು ನೋಡಿಯೂ ಅಧ್ಯಕ್ಷ ಮಹಾಂತೇಶ ತಾಂವಶಿ ಸುಮ್ಮನಿದ್ದಾರೆ ಎಂದರೆ ಇವರ ನಡುವಿನ ನಿಗೂಡತೆ ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.
ಸಾಹಿತಿ ಪ್ರೋ. ಚಂದ್ರಶೇಖರ ಅಕ್ಕಿ ಅವರು ಹಿರಿಯರಾಗಿದ್ದು, ಕಸಾಪ ಅಧ್ಯಕ್ಷರು ಮಾಡುತ್ತಿರುವ ತಪ್ಪುಗಳನ್ನು ತಿದ್ದುಯ ಕಾರ್ಯವನ್ನು ಮಾಡುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಕಸಾಪ ಸಂಘಟನಾ ಕಾರ್ಯದರ್ಶಿ ರಾಜೇಶ್ವರಿ ವಡೇಯರ ಮಾತನಾಡಿ, ಕಳೆದೆರಡು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಷ್ಠೆಯಿಂದ ದುಡಿದಿದ್ದೆನೆ. ಸಾಹಿತ್ಯ ಸಮ್ಮೇಳನದ ಲೇಕ್ಕ ಪತ್ರಗಳನ್ನು ಸಭೆಯಲ್ಲಿ ಪ್ರಶ್ನಿಸಿದಾಗ ನನ್ನನ್ನು ಅವಮಾನಿಸಲಾಗಿದೆ ಎಂದು ದೂರಿದರು.
ಕನ್ನಡ ಸಾಹಿತ್ಯ ಪರಿಷತ ಸಂಘಟನೆಗಾಗಿ ಹಗಲಿರುಳು ಶ್ರಮಿಸಿದ್ದೆನೆ. ಸೋಮವಾರದಂದು ಕಸಾಪದಿಂದ ಕರೇದ ಪತ್ರಿಕಾಗೋಷ್ಠಿಗೂ ನನ್ನನ್ನು ಕರೇಯಲಿಲ್ಲ. ಹಾಗೇಯೆ ಎಲ್ಲ ಪತ್ರಕರ್ತರನ್ನು ಅಹ್ವಾನಿಸಿಲ್ಲ. ಅಲ್ಲದೇ ಸಮ್ಮೇಳನದ ಪೂರ್ವಭಾವಿ ಸಭೆಗೆ ಹಾಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಿರುವರನ್ನು ಕರೇಯದೆ ತಮಗೆ ಬೇಕಾದವರನ್ನು ಹಾಗೂ ಒಂದಿಬ್ಬರು ಪತ್ರಕರ್ತರನ್ನು ಕರೇದು ಸಭೆಗಳು ಮತ್ತು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಹೀಗಾದರೆ ಕನ್ನಡ ಸಾಹಿತ್ಯ ಪರಿಷತ್ ಸಂಘಟನೆ ಹೇಗೆ ಆಗುವದು ಎಂದು ಪ್ರಶ್ನಿಸಿದರು.
ಹಿರಿಯ ಪತ್ರಕರ್ತ ಬಸವರಾಜ ಕುರೇರ ಮಾತನಾಡಿ, ನಾಡು ನುಡಿಗಾಗಿ ಸಾಹಿತಗಳಷ್ಟೇ ಪತ್ರಕರ್ತರ ಪಾತ್ರವು ಬಹಳ ಮಹತ್ವದ್ದಾಗಿದೆ. ಅಂತಹ ಪತ್ರಕರ್ತರನ್ನೇ ನಿರ್ಲಕ್ಷö್ಯ ಮಾಡುವದು ಅಕ್ಷಮ್ಯ. ಈ ವಿಷಯದ ಬಗ್ಗೆ ಸಂಘಟಕರು ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

5 × one =