ಗೋಕಾಕ: ರಾಜಸ್ಥಾನಿ ವ್ಯಾಪಾರಸ್ಥರು ಕಳೆದ ಹಲವಾರು ವರ್ಷಗಳಿಂದ ಗೋಕಾಕ ನಗರದಲ್ಲಿ ಕೋಮುಗಲಭೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತ ಬಂದಿದ್ದು, ಹೊರ ರಾಜ್ಯದ ರಾಜಸ್ಥಾನಿ ವ್ಯಾಪಾರಿಗಳ ಪರವಾನಿಗೆ ರದ್ದುಗೊಳಿಸಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲು ಸರ್ಕಾರಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಅ.೫ ರಂದು ಗೋಕಾಕ ಸಂಪೂರ್ಣ ಬಂದ್‌ಗೆ ಕರೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಡಿಎಸ್‌ಎಸ್ನ ಬೆಳಗಾವಿ ಜಿಲ್ಲಾ ಸಂಚಾಲಕ ರಮೇಶ. ಮಾದರ ಅವರು ಮಾತನಾಡಿ ಗೋಕಾಕ, ಮೂಡಲಗಿ ತಾಲೂಕಿನ ವಿವಿಧ ಪಟ್ಟಣ, ನಗರಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ಥಳಿಯವಾಗಿ ಬೇರು ಬಿಟ್ಟು ಕಳಪೆ ವಸ್ತುಗಳ ಮಾರಾಟ ಮಾಡುವದಲ್ಲದೇ ಸರಕಾರಕ್ಕೆ ಭರಿಸಬೇಕಾದ ತರಿಗೆ ವಂಚನೆ ಮಾಡುವ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರೈತರಿಗೆ ಮತ್ತು ದಲಿತರಿಗೆ ಅನ್ಯಾಯ ಎಸಗುತ್ತಿರುವ ರಾಜಸ್ಥಾನಿ ವ್ಯಾಪಾರಿಗಳು ಗೋಕಾಕ ನಗರದಲ್ಲಿ ಕೋಮುಗಲಭೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ರಾಜಸ್ಥಾನಿ ವ್ಯಾಪಾರಿಗಳನ್ನು ಹಠಾವೋ, ಗೋಕಾಕ, ಮೂಡಲಗಿ ಘಟಪ್ರಭಾ ಬಚಾವೋ’ ಎಂಬ ಹೋರಾಟ ಹಮ್ಮಿಕೊಂಡಿರುದಾಗಿ ತಿಳಿಸಿದ್ದಾರೆ.
ರಾಜಸ್ಥಾನಿ ಸೇರಿದಂತೆ ವಲಸೆ ವ್ಯಾಪಾರಸ್ಥರ ಪರವಾಣಿಗೆಗಳನ್ನು ರದ್ದು ಪಡಿಸಿ, ಅವರವರ ರಾಜ್ಯಗಳಿಗೆ ಹಿಂತಿರುಗಿಸಬೇಕೆAದು ಆಗ್ರಹಿಸಿ ಅ.೫ ರಂದು ಸಂಪೂರ್ಣ ಗೋಕಾಕ ಬಂದ್‌ಗೆ ಕರೆ ನೀಡಲಾಗಿದೆ ಎಂದು ರಮೇಶ ಮಾದರ ತಿಳಿಸಿದರು.
ಇದೆ ತಿಂಗಳ ಸೆ.೨೮ ರಂದು ರೈತ ಸಂಘಟನೆಗಳು ಘೋಷಿಸಿರುವ ಕರ್ನಾಟಕ ಬಂದ್‌ಗೆ ಡಿಎಸ್‌ಎಸ್ ಸಂಘಟನೆ ಬೆಂಬಲ ವ್ಯಕ್ತಪಡಿಸಿ ಜರುಗಲಿರುವ ಕರ್ನಾಟಕ ಬಂದ್‌ನಲ್ಲಿ ಪಾಲ್ಗೊಳ್ಳುವದಾಗಿ ತಿಳಿಸಿದರು.
ದಲಿತ ಮುಖಂಡ ಸತ್ತೆಪ್ಪ ಕರವಾಡೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಗಣಪತಿ ಇಳಿಗೇರ, ಬಸವರಾಜ ಕಾಡಾಪೂರ, ವಿನಾಯಕ ಪೂಜೇರಿ, ಅಲ್ಲಾಭಕ್ಷ ಮುಲ್ಲಾ, ಮಹಾದೇವ ಗೂಡೇದ, ಗಜಬರ ನದಾಫ್ ಇದ್ದರು.
Check Also
ತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!!
Spread the loveತಮ್ಮ ಮಕ್ಕಳಲ್ಲೂ ನಮ್ಮ ಸಂಸ್ಕೃತಿಯ ಜಾಗೃತಿ ಮೂಢಿಸಿ-ಸಂಸದ ಜಗದೀಶ ಶೆಟ್ಟರ!! ಗೋಕಾಕ: ಭಾರತೀಯ ಸಂಸ್ಕೃತಿಗೆ ಜಾಗತಿಕ …