Breaking News

ಡಿಕೆಶಿ, ಹೆಬ್ಬಾಳ್ಕರ್ ವಿರುದ್ದ ಮತ್ತೆ ಕೆಂಡ ಕಾರಿದ ರಮೇಶ ಜಾರಕಿಹೊಳಿ

Spread the love

ಡಿಕೆಶಿ, ಹೆಬ್ಬಾಳ್ಕರ್ ವಿರುದ್ದ ಮತ್ತೆ ಕೆಂಡ ಕಾರಿದ ರಮೇಶ ಜಾರಕಿಹೊಳಿ

ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಬಿಜೆಪಿ ಎಸ್ಸಿ, ಎಸ್ಟಿ ಕಾರ್ಯಕರ್ತರ ಸಮಾವೇಶದಲ್ಲಿ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ಕೆಂಡಕಾರಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಬಿಜೆಪಿಯ ಭರ್ಜರಿ ಪ್ರಚಾರ ನಡೆಯುತ್ತಿದೆ. ಆದರೆ, ಸ್ಥಳೀಯ ಶಾಸಕರು ಮತ್ತು ಅವರ ಹಿಂಬಾಲಕರು ಮಾತ್ರ ನಾವು ಈ ಸಲವೂ ಒಂದು ಲಕ್ಷ ಲೀಡ್ ಅಂತರದಿಂದ ಗೆಲ್ಲುತ್ತೇವೆ
ಎನ್ನುತ್ತಿದ್ದರು. ಚುನಾವಣೆಯ ಮೊದಲೇ ಅವರಿಗೆ ದರ್ಪ ಬಂದಿತ್ತು. ಆದರೆ ಈಗ ಅವರ ಗೆಲುವಿನ ಲೀಡ್ 10,000 ಕ್ಕೆ ಬಂದಿದೆ. ಜನಸೇವೆಗೆ ಜನರ ಆಶೀರ್ವಾದ ಮುಖ್ಯ. ಹಣ ಮತ್ತು ಗೂಂಡಾಗಿರಿಯಲ್ಲಿ ಏನು ನಡೆಯದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದರ್ಪದಿಂದ ಯಾರು ಮುಂದೆ ಬಂದಿಲ್ಲ. ದುಡ್ಡಿಗಿಂತ ಜನರ ಪ್ರೀತಿ ವಿಶ್ವಾಸ ಮುಖ್ಯ ಎಂದು ರಮೇಶ ಜಾರಕಿಹೊಳಿ ಅವರು ಮತ್ತೊಮ್ಮೆ ಶಾಸಕಿಯ ವಿರುದ್ಧ ಹರಿಹಾಯ್ದರು.

 

ಐದು ವರ್ಷಗಳ ಹಿಂದೆ ನಾನು ಸಂತಿಬಸ್ತವಾಡಕ್ಕೆ ಕಾಂಗ್ರೆಸ್ ಪರವಾಗಿ ಮತಯಾಚನೆಗೆ ಬಂದಿದ್ದೆ. ನಿಮ್ಮೆಲ್ಲರ ಆಶೀರ್ವಾದದಿಂದ ಆಗ ಆಯ್ಕೆಯಾದ ಶಾಸಕರು ಬಹುದೊಡ್ಡ ಅಂತರದಿಂದ ಗೆದ್ದು ಎಲ್ಲರನ್ನೂ ಮರೆತರು ಎಂದು ವಾಗ್ದಾಳಿ ನಡೆಸಿದರು.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕಳೆದ ಬಾರಿ ಶಾಸಕರಾಗಿ ಗೆದ್ದ ಒಂದೇ ಗಂಟೆಯಲ್ಲಿ ಬದಲಾದರು. ನಾನು ದುಡ್ಡಿನಿಂದ, ಬೆಂಗಳೂರಿನ ಮಹಾ ನಾಯಕನಿಂದ ಗೆದ್ದೇ ಎಂದರು. ಚುನಾವಣೆ ಕಾಲಕ್ಕೆ ಅವರ ಗೆಲುವಿಗೆ ಹಗಲು ರಾತ್ರಿ ದುಡಿದ ನನ್ನನ್ನೇ ಮರೆತರು. ಗ್ರಾಮೀಣ ಮತಕ್ಷೇತ್ರದ ಜನ ಅವರ ದುಡ್ಡಿಗೆ ಕೈಯೊಡ್ಡದೇ ಸ್ವಾಭಿಮಾನಕ್ಕೆ ಸಂಕಲ್ಪ ಮಾಡಬೇಕು. ಯಾವುದೇ ಆಸೆ- ಆಮಿಷಗಳಿಗೆ ಈ ಬಾರಿ ಬಲಿಯಾಗಬಾರದು. ಕಳೆದ ಸಲ ಇಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಕ್ಕೆ ನಾನು ಅಸಹಾಯಕನಾದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

50 ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೆ. ಗ್ರಾಮೀಣ ಶಾಸಕಿ, ಮಹಾನಾಯಕನಿಂದಲೇ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರುವ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು. ಆದರೆ ಬಿಜೆಪಿ ನನಗೆ ದಿನೇ ದಿನೇ ಹೆಚ್ಚಿನ ಮನ್ನಣೆ ನೀಡುತ್ತಿದ್ದು ಇಲ್ಲಿ ಯಾವುದೇ ಪಕ್ಷಪಾತಕ್ಕೆ ಅವಕಾಶ ಇಲ್ಲ. ಪಕ್ಷ ಇಲ್ಲಿ ನೈಜ ನಾಯಕರಿಗೆ ಕೆಲಸ ಮಾಡುವ ಶಕ್ತಿ ನೀಡುತ್ತಿದೆ ಎಂದು ಅವರು ಹೇಳಿದರು.

 

ನಾನು ಈಗ ಬಿಜೆಪಿ ಸೇರಿದ್ದರಿಂದ ನನಗೆ ಬಹಳಷ್ಟು ಒಳ್ಳೆಯದಾಗಿದೆ. ನನಗೆ ಉತ್ತಮ ನಾಯಕತ್ವ ಸಿಕ್ಕಿದೆ. ಎಲ್ಲಾ ನಾಯಕರು ನನ್ನನ್ನು ಪ್ರೀತಿ ಹಾಗೂ ವಿಶ್ವಾಸದಿಂದ ದೊಡ್ಡ ನಾಯಕನನ್ನಾಗಿ ಮಾಡಿ ಸಹಕಾರ ಕೊಡುತ್ತಿದ್ದಾರೆ. ಬಿಜೆಪಿ ದಿನೇ ದಿನೇ ಬಲವರ್ಧನೆ ಆಗುತ್ತಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ಹೇಳಿದರು.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಶಾಸಕರು ರಸ್ತೆ, ಚರಂಡಿ ಬಿಟ್ಟರೆ ಏನೊಂದು ಅಭಿವೃದ್ಧಿ ಮಾಡಿಲ್ಲ. ನಾನು ಸಹಾ ಇದೇ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ನನಗೆ ಮುಖ್ಯ ರಸ್ತೆಯ ಅಭಿವೃದ್ಧಿ ಆಗಿರುವುದೇ ಕಾಣುತ್ತಿಲ್ಲ. ಸರಕಾರಿ ಅನುದಾನದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರೂ ತಾವೇ ಸ್ವಂತ ದುಡ್ಡಿನಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಾರೆ. ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು ಆದರೆ ಆನಂತರ ಮುಖ್ಯಮಂತ್ರಿ ಲೋಹಾರ್ಪಣೆಗೊಳಿಸಿದ ನಂತರವೂ ಎರಡನೇ ಬಾರಿ ಲೋಕಾರ್ಪಣೆ ಮಾಡುವ ಕೆಟ್ಟ ಗಳಿಗೆ ಯಾಕೆ ಬಂತು ? ಎಷ್ಟು ಕೆಟ್ಟ ಗುಣ ಇದೆ ಎಂಬುದು ಗೊತ್ತಾಗುತ್ತದೆ. ಒಬ್ಬ ಹೆಣ್ಣು ಮಗಳಾಗಿ ಕೆಟ್ಟ ಸ್ವಭಾವ, ಗೂಂಡಾಗಿರಿ ಪ್ರವೃತ್ತಿ ಇದೆ. ಇಂಥವರು ಚುನಾವಣೆಯಲ್ಲಿ ಮತ್ತೆ ಆರಿಸಿ ಬಂದರೆ ಇಲ್ಲಿನ ಜನರ ಪರಿಸ್ಥಿತಿ ಏನಾಗಲಿದೆ ಎಂಬುದರ ಕುರಿತು ಎಲ್ಲರೂ ವಿಚಾರ ಮಾಡಬೇಕು ಎಂದು ಅವರು ಎಚ್ಚರಿಕೆ ನೀಡಿದರು.

ಬೆಳಗಾವಿ ಗ್ರಾಮೀಣ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ. ನಾಗೇಶ ಮನ್ನೋಳ್ಕರ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಬಿಜೆಪಿ ಯಾರಿಗೆ ಟಿಕೆಟ್ ನೀಡುತ್ತದೆ ಅವರ ಪರವಾಗಿ ನಾನು ಕೆಲಸ ಮಾಡುವೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಇದೆ. ರಾಜ್ಯದಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು ಎಂದು ಅವರು ಮನವಿ ಮಾಡಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

19 − 13 =