Breaking News

ಕೊರೋನಾ ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕಾರ್ಯ ವೈದ್ಯರು ಮಾಡಬೇಕು : ಶಾಸಕ ರಮೇಶ ಜಾರಕಿಹೊಳಿ.!!

Spread the love

ಕೊರೋನಾ ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕಾರ್ಯ ವೈದ್ಯರು ಮಾಡಬೇಕು : ಶಾಸಕ ರಮೇಶ ಜಾರಕಿಹೊಳಿ.!!

 

ಯುವ ಭಾರತ ಸುದ್ದಿ, ಗೋಕಾಕ್:    ಕೊರೋನಾ ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕಾರ್ಯ ವೈದ್ಯರು ಮಾಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು

ಶನಿವಾರದಂದು ನಗರದ ಶಾಸಕರ ಕಾರ್ಯಾಲಯದಲ್ಲಿ ಕರೆದಿದ್ದ ಅಧಿಕಾರಿಗಳ ಹಾಗೂ ಖಾಸಗಿ ವೈದ್ಯರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎಲ್ಲರೂ ಕೂಡಿ ಮಹಾಮಾರಿ ಕೊರೋನಾ ರೋಗದ ವಿರುದ್ಧ ಹೋರಾಟ ಮಾಡಿ ಕರೋನಾ ಸೋಂಕನ್ನು ಹರಡದಂತೆ ತಡೆಗಟ್ಟಲು ಮೊದಲ ಪ್ರಾಮುಖ್ಯತೆಯನ್ನು ನೀಡಿ ಕಾರ್ಯ ಮಾಡಿದರೆ ಕೊರೋನಾ ಮಹಾಮಾರಿಯನ್ನು ಗೆಲ್ಲಬಹುದಾಗಿದೆ.

ಆಕ್ಸಿಜನ ಸರಬರಾಜಿನಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯೆಯ ಉಂಟಾಗಿದ್ದು ಪಕ್ಕದ ಕೋಲ್ಹಾಪೂರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಹಾಗೂ ಸಚಿವ ಜಗದೀಶ ಶೆಟ್ಟರ್ ಅವರೊಂದಿಗೆ ಮಾತನಾಡಿ ಆದಷ್ಟು ಬೇಗ್ ತ್ವರಿತಗತಿಯಲ್ಲಿ ಜಿಲ್ಲೆಗೆ ಆಕ್ಸಿಜನ ಸರಬರಾಜು ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು .
ಕೊರೋನಾ ಹಾಗೂ ಸೆಮಿ ಲಾಕಡೌನ ನಿಂದ ಸಾರ್ವಜನಿಕರು ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ರೋಗಿಗಳಿಂದ ಹೆಚ್ಚಿನ ಹಣ ತಗೆದುಕೊಳ್ಳದೆ ಸರಕಾರ ನಿಗದಿ ಪಡಿಸಿದ ದರವನ್ನು ಮಾತ್ರ ತಗೆದುಕೊಳ್ಳಬೇಕು ಇದಕ್ಕೆ ಸಂಬಂಧಿಸಿದಂತೆ ನಮ್ಮ ಕಾರ್ಯಾಲಯಕ್ಕೆ ಸಾಕಷ್ಟು ಕರೆಗಳು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಸರಿ ಹೋಗದಿದ್ದರೆ ಅಂತಹ ಆಸ್ಪತ್ರೆಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು.

ಕೊರೋನಾ ರೋಗಿಗಳು ಮರಣ ಹೊಂದಿದಾಗ ಕುಟುಂಬಸ್ಥರು ಶವಸಂಸ್ಕಾರಕ್ಕೆ ಹಿಂದೆಟ್ಟು ಹಾಕಿದರೆ ಅಂತಹ ಶವಗಳ ಬಗ್ಗೆ ವೈದ್ಯರು ತಾಲೂಕಾಡಳಿತಕ್ಕೆ ಮಾಹಿತಿ ನೀಡಿದರೆ ನಗರಸಭೆ ಹಾಗೂ ಆರೋಗ್ಯ ಇಲಾಖೆಯವರ ಸಹಯೋಗದಲ್ಲಿ ಶವಸಂಸ್ಕಾರ ಮಾಡಲಾಗುವುದು ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ ಸೆಮಿ ಲಾಕಡೌನ ನಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಹಿಂದಿನ ಪೆಡಿಂಗ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಪರಿಣಾಮ ಜನರು ಭಯಭೀತರಾಗುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಕೊರೋನಾ ಸಂಬಂಧ ಅಂತಹ ಗಂಭೀರ ಪರಿಸ್ಥಿತಿ ಇಲ್ಲಾ ಯಾರು ಹೆದರುವ ಅವಶ್ಯಕತೆ ಇಲ್ಲ ಅಧಿಕಾರಿಗಳು ಹಾಗೂ ವೈದ್ಯರು ಸಮನ್ವಯದಿಂದ ಕಾರ್ಯನಿರ್ವಹಿಸಿ ಕೊರೋನಾ ಸೋಂಕನ್ನು ತಡೆಯಲು ಹೋರಾಟ ಮಾಡೋಣಾ ಎಂದು ಹೇಳಿದರು.


Spread the love

About Yuva Bharatha

Check Also

ಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.!

Spread the loveಗೋಕಾಕನಲ್ಲಿ ಬಿಜೆಪಿಯಿಂದ ಕಾಂಗ್ರೇಸ್ ವಿರುದ್ಧ ಪ್ರತಿಭಟನೆ.! ಗೋಕಾಕ: ವಿಜಯಪುರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯ ಹಿಂದು ಧಾರ್ಮಿಕ …

Leave a Reply

Your email address will not be published. Required fields are marked *

2 × two =