Breaking News

ಅಂಕಲಗಿಯಲ್ಲಿ ಅಂಗಡಿ, ಮುಗ್ಗಟ್ಟುಗಳು ಸ್ವಯಂ ಪ್ರೇರಿತ ಬಂದ.! ರಮೇಶ ಜಾರಕಿಹೊಳಿ ಬೆಂಬಲಿಗರ ಬೃಹತ್ ಪ್ರತಿಭಟನೆ.!

Spread the love

ಯುವ ಭಾರತ ಸುದ್ದಿ, ಗೋಕಾಕ: ದಿನೇಶ ಕಲ್ಲಹಳ್ಳಿ ಸಿ.ಡಿ. ಪ್ರಕರಣಕ್ಕೆ ಸಂಬಂದಿಸಿದತೆ ಶನಿವಾರ ಸಮಸ್ತ ಕುಂದರನಾಡಿನ ಅಂಕಲಗಿ, ಅಕ್ಕತಂಗೇರಹಾಳ, ಮದವಾಲ, ಗುಜನಾಳ, ಸುಲಧಾಳ, ಬೆಣಚನಮರಡಿ, ಕುಂದರಗಿ ಸೇರಿದಂತೆ ಮುಂತಾದ ಗ್ರಾ.ಪಂ ವ್ಯಾಪ್ತಿಯ ಸುಮಾರು ೩ ಸಾವಿರಕ್ಕೂ ಹೆಚ್ಚು ರಮೇಶರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದರಲ್ಲದೆ, ಪ್ರಕರಣ ಸಿ.ಬಿ.ಐ.ಗೆ ವಹಿಸಬೇಕು. ಪ್ರಕರಣದ ಸತ್ಯಾ ಸತ್ಯತೆ ಹೊರಬರಬೇಕು ಎಂದು ಆಗ್ರಹಿಸಿದರು.
ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೂಗಿದ ಅಭಿಮಾನಿಗಳು ಉತ್ತರ ಕರ್ನಾಟಕದ ಪ್ರಮುಖ ನಾಯಕರಾಗಿ ಬೆಳೆಯುತ್ತಿರುವ ರಮೇಶ ಜಾರಕೀಹೊಳಿ ಅವರ ಶಕ್ತಿ ಕುಗ್ಗಿಸುವ ಯತ್ನ ಇದಾಗಿದೆ. ಇದು ಕ್ರೂರ ಅನ್ಯಾಯ ಇದನ್ನು ಸಹಿಸಲಾಗದು ಎಂದು ಅಭಿಮಾನಿ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ಅಂಕಲಗಿಯಲ್ಲಿ ಬೆಳಗಿನಿಂದಲೇ ಅಂಗಡಿ, ಮುಗ್ಗಟ್ಟು ಗಳು ಸ್ವಯಂ ಪ್ರೇರಿತರಾಗಿ ಬಂದ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಪ್ರತಿಭಟನಾಕಾರರು ಟೈರ್‌ಗೆ ಬೆಂಕಿಹಚ್ಚಿ ತಮ್ಮ ಆಕ್ರೋಷ ಹೊರಹಾಕಿದರು.
ಎಲ್ಲ ಪ್ರತಿಭಟನಾಕಾರರು ಅಂಕಲಗಿ ಪೋಲಿಸ ಠಾಣೆಯ ವರೆಗೆ ಪಾದಯಾತ್ರೆಯ ಮೂಲಕ ತೆರಳಿ ಉಪತಹಶೀಲ್ದಾರ ಕಟ್ಟೀಮನಿ. ಮತ್ತು ಹೆಚ್ಚುವರಿ. ಎಸ್.ಪಿ. ಅಮರನಾಥ ರೆಡ್ಡಿ ಅವರಿಗೆ ಸೂಕ್ತ ಕ್ರಮಕ್ಕೆ ಮನವಿ ಅರ್ಪಿಸಿದರು. ಬೆಳಗಿನ ೯ ಗಂಟೆಯಿAದ ಮಧ್ಯಾಹ್ನ ೩ ಗಂಟೆಯವರೆಗೆ ಸಂಪೂರ್ಣ ಬಸ್ ಮತ್ತಿತರ ವಾಹನಗಳ ಓಡಾಟ ಸ್ತಗಿತಗೊಂಡಿತ್ತು.
ಪ್ರತಿಭಟನೆಯಲ್ಲಿ ಸುತ್ತಲಿನ ಗ್ರಾಮಗಳ ಮುಖಂಡರಾದ ಭೀಮಗೌಡ ಪೋಲಿಸಗೌಡರ ಶಿವಾನಂದ ಡೋಣಿ, ಬಸನಗೌಡ ನಿರ್ವಾಣಿ, ಶಂಕರ ಭೂಸಣ್ಣವರ, ರಾಜು ತಳವಾರ, ಮುನ್ನಾ ದೇಸಾಯಿ, ಮಲ್ಲಿಕಾರ್ಜುನ ನಾಯಿಕ, ರವಿ ಭಡಕಲ್ , ಶಿವನಪ್ಪಾ ಕುಂದರಗಿ, ಬೋರಪ್ಪಾ ತಳವಾರ, ಬಸವರಾಜ ಪಟ್ಟಣಶೆಟ್ಟಿ, ಅಜಿತ ಹರಿಜನ, ಸಿ.ಎನ್.ಬಡವನ್ನವರ, ರಾಮಣ್ಣಾ ಸುಂಬಳಿ,ಮಾಜಿ ಶಾಸಕ, ಎಮ್ .ಎಲ್ .ಮುತ್ತೆನ್ನವರ, ನಟರಾಜ ಶೆಟ್ಟೆಣ್ಣವರ, ಮಹಾದೇವ ಶ್ರೇಷ್ಟಿ, ಎಲ್.ಕೆ.ಪೂಜೇರಿ, ವಿರುಪಾಕ್ಷಿ ಅಂಗಡಿ, ಆನಂದ ಅತ್ತು, ಅನ್ನಪೂರ್ಣಾ ನಿರ್ವಾಣಿ, ರಾಮಚಂದ್ರ ಬಳೋಬಾಳ, ಮಾರುತಿ ಗೋಡಲ ಕುಂದರಗಿ, ಅಡಿವೆಪ್ಪಾ ಮಳಗಲಿ, ಅಡಿವೆಪ್ಪಾ ನಾವಲಗಟ್ಟಿ, ಬಸಪ್ಪಾ ಉರಬಿನಹಟ್ಟಿ. ಸತ್ಯಪ್ಪಾ ಅವ್ವನ್ನಗೋಳ, ಶಿವಾನಂದ ಪಂಗನ್ನವರ, ಮಲ್ಲಿಕಾರ್ಜುನ ನಾಯಿಕ, ರವಿ ಭಡಕಲ್ ಅಡಿವೆಪ್ಪಾ ಈಶ್ವರಪ್ಪಗೋಳ ಮುಂತಾದವರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

two − two =