ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಸತ್ಕಾರ!

ಯುವ ಭಾರತ ಸುದ್ದಿ ಗೋಕಾಕ: ನಗರದ ಮರಾಠಾ ಗಲ್ಲಿಯ ಕರೇಮ್ಮ ದೇವಿಯ ಕಾರ್ತಿಕೋತ್ಸವ ಹಾಗೂ ಎಪಿಎಮ್‌ಸಿ ಹನುಮಾನ ಮಂದಿರದ ಕಾರ್ತಿಕೋತ್ಸವಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಿದರು.
ಎರಡು ದೇವಸ್ಥಾನದ ಕಮೀಟಿಯವರು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಸೆರಿದಂತೆ ಗಣ್ಯರನ್ನು ಆತ್ಮೀಯವಾಗಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಸದಸ್ಯ ಶ್ರೀಶೈಲ ಯಕ್ಕುಂಡಿ, ಅಡಿವೆಪ್ಪ ಕಿತ್ತೂರ, ವಿಜಯ ಜತ್ತಿ, ಭೀಮಶಿ ಕೊಳವಿ, ಮರಾಠಾ ಗಲ್ಲಿಯ ಅನಿಲ ಮಿಲ್ಕೆ, ಭೀಮಶಿ ಕಲ್ಲೊಳ್ಳಿ, ಹರ್ಷವರ್ಧನ ಚಿಗಡೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
YuvaBharataha Latest Kannada News