ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಅತ್ಯುತ್ತಮ ಸಂಶೋಧಕಿ ಪ್ರಶಸ್ತಿ ಪಡೆದ ಸಮೀಕ್ಷಾ ಮಹಾದಿಕ್

ಯುವ ಭಾರತ ಸುದ್ದಿ ಬೆಳಗಾವಿ :
ಮುಂಬೈ ಚೆಂಬೂರ್ ವಿವೇಕಾನಂದ ಎಜುಕೇಶನ್ ಸೊಸೈಟಿಯ ಕಾನೂನು ಕಾಲೇಜು ವತಿಯಿಂದ ನಡೆದ
5 ನೇ ಹಶುಜಿ ಅಡ್ವಾಣಿ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಸಮೀಕ್ಷಾ ಮಹಾದಿಕ್ ಅತ್ಯುತ್ತಮ ಸಂಶೋಧಕಿ ಪ್ರಶಸ್ತಿ ಪಡೆದರು.
ಕಾಲೇಜು ಆಡಳಿತ ಮಂಡಳಿ ಚೇರಮನ್ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ್, ಅಣಕು ನ್ಯಾಯಾಲಯ ಸ್ಪರ್ಧೆಯ ಸಮನ್ವಯಾಧಿಕಾರಿ ಪ್ರೊ.ಅಶ್ವಿನಿ ಪರಬ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಮೀಕ್ಷಾ ಮಹಾದಿಕ್ ಅವರನ್ನು ಅಭಿನಂದಿಸಿದ್ದಾರೆ.
YuvaBharataha Latest Kannada News