Breaking News

ಬದುಕಿನ ಜಂಜಾಟದಿಂದ ಮುಕ್ತರಾಗಲು ಸಂಗೀತ ಜೀವಾಮೃತ ಗೋಕಾಕದಲ್ಲಿ ಸಂಗೀತ ಸಂಭ್ರಮ.!

Spread the love

ಬದುಕಿನ ಜಂಜಾಟದಿoದ ಮುಕ್ತರಾಗಲು ಸಂಗೀತ ಜೀವಾಮೃತ ಗೋಕಾಕದಲ್ಲಿ ಸಂಗೀತ ಸಂಭ್ರಮ.!


 ಯುವ ಭಾರತ ಸುದ್ದಿ  ಗೋಕಾಕ: ಸಂಗೀತವು ಸಮಸ್ತ ಜೀವರಾಶಿಗಳಿಗೆ ಜೀವಾಮೃತವನ್ನು ನೀಡುತ್ತದೆ. ಮನುಷ್ಯ ಬದುಕಿನ ಜಂಜಾಟವನ್ನು ಸಲೀಸಾಗಿ ಹೊರಬರಲು ಸಂಗೀತವು ದಿವ್ಯವಾದುದು ಎಂದು ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.
ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಶನಿವಾರ ಗೋಕಾಕ ತಾಲೂಕು ಪತ್ರಕರ್ತ ಸಂಘ ಹಾಗೂ ರಾಹುಲ್ ಸೊಂಟಕ್ಕಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನೋವುಗಳನ್ನು ಮರೆಸುವ ಔಷಧಿ ಸಂಗೀತದಲ್ಲಿದೆ. ಸರ್ವ ರೋಗಕ್ಕೂ ಸಂಗೀತ ಮದ್ದು ಎನ್ನುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ, ತುಂಬಾ ನೋವಾದಾಗ, ಜೀವನದಲ್ಲಿ ಜಿಗುಪ್ಸೆಯಾದಾಗ ಸಂಗೀತ ಕೇಳಿದರೆ ಮನಸ್ಸು ಪ್ರಫುಲ್ಲ ಆಗುತ್ತದೆ ಎಂದರು.
ಕನ್ನಡ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅನನ್ಯವಾದುದು. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಕಲಾವಿದರು ಇದ್ದಾರೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಗೋಕಾಕ ಕಲಾವಿದರನ್ನು ಆರಾಧಿಸುವ ಹಾಗೂ ಕಲಾವಿದರು ಇರುವ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರ‍್ರವಾಗಿದೆ. ಸ್ವಾತಂತ್ರö್ಯ ಹೋರಾಟದಲ್ಲಿಯೂ ಬೆಳಗಾವಿ ಹಾಗೂ ಗೋಕಾಕ ಕೊಡುಗೆ ಆಪಾರವಾಗಿದೆ. ವೀರರಾಣಿ ಕಿತ್ತೂರು ಚನ್ನಮ್ಮ ಹೋರಾಡಿದ ವೀರ ಭೂಮಿ ಇದು. ಹಲವಾರು ದಶಮಾನಗಳಿಂದಲೂ ಬೆಳಗಾವಿಗೆ ತಾಕತ್ತು ಜಾಸ್ತಿ ಇದೆ. ಅದೇ ರೀತಿ ಗೋಕಾಕಿಗೂ ಗತ್ತು ಇದೆ ಎಂದರು.
ಗೋಕಾಕ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಗೀತಕ್ಕೆ ಇನ್ನೊಂದು ಹೆಸರು ದೇವಭಾಷೆ. ಎಲ್ಲಾ ಕಲೆಗಳಿಗಿಂತ ಸಂಗೀತವು ಅತ್ಯಂತ ಶ್ರೇಷ್ಠವಾದ ಕಲೆ. ಸಂಗೀತದ ನಾದಮಾಧುರ್ಯಕ್ಕೆ ಒಲಿಯದ ಜೀವವೇ ಇಲ್ಲ. ಬದುಕಿನ ತವಕ- ತಲ್ಲಣಗಳನ್ನು ಮರೆಸುವ ಶಕ್ತಿ ಸಂಗೀತಕ್ಕೆ ಇದೆ. ಜೀವನೋತ್ಸಾಹವನ್ನು ಇಮ್ಮಡಿಗೊಳಿಸಲು, ಹೊಸ ಬದುಕಿನೆಡೆಗೆ ಸಾಗಲು ಸಂಗೀತವನ್ನು ನಾವು ಸದಾ ಆಸ್ವಾದಿಸುತ್ತಿರಬೇಕು ಎಂದರು.


ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಮಾತನಾಡಿ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವುದರ ಮೂಲಕ ಅತ್ಯುತ್ತಮ ಕಾರ್ಯ ಮಾಡುತ್ತಿರುವ ಗೋಕಾಕ ಪತ್ರಕರ್ತರ ಸಂಘದ ಕಾರ್ಯ ಪ್ರಶಂಸನೀಯ. ಗೋಕಾಕ ನಗರದಲ್ಲಿ ಸಂಗೀತ ಸಂಭ್ರಮದAಥ ಕಾರ್ಯಕ್ರಮಗಳು ಇನ್ನೂ ಹೆಚ್ಚೆಚ್ಚು ನಡೆಯಲಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ನಗರ ಘಟಕ ಅಧ್ಯಕ್ಷ, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಭೀಮಶಿ ಭರಮಣ್ಣವರ, ಗೋಕಾಕ ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಮ್ಯಾಗೇರಿ, ರಾಹುಲ ಸೊಂಟಕ್ಕಿ ಟ್ರಸ್ಟ್ ಅಧ್ಯಕ್ಷ ಲಕ್ಷö್ಮಣ ಸೊಂಟಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ನಿರಂಜನ ಬನ್ನಿಶೆಟ್ಟಿ, ಮೋಹನ ಡಿ.ಆರ್., ರಾಘು ಹೊಸಮನಿ, ಸಚೀನ ಸಮಯ, ಸಂಜು ಖನಗಾಂವಿ, ಶ್ರೀಕಾಂತ ರತನ್, ಶ್ರವಣ ಮನ್ನಿಕೇರಿ, ಪ್ರಶಾಂತ ಕುರಬೇಟ, ಬಾಬುಲಾಲ, ಜಾವೇದ ಗೋಕಾಕ, ಸುನೀಲ ಮಾಂಗಲೇಕರ, ಯುಸೂಫ ಫಿರಜಾದೆ, ಪವನ ಮಹಾಲಿಂಗಪುರ ಅವರನ್ನು ಸನ್ಮಾನಿಸಲಾಯಿತು. ರಮೇಶ ಸಾವಳಗಿ, ಯಲ್ಲೇಶಕುಮಾರ ನಿರೂಪಿಸಿದರು.
ಗೋಕಾಕ ಜಿಲ್ಲೆ ಅಥವಾ ಉ.ಕ ಪ್ರತ್ಯೇಕ ರಾಜ್ಯ: ಶ್ರೀಗಳ ಎಚ್ಚರಿಕೆ ಸರ್ಕಾರವೇ ಗೋಕಾಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಿದರೆ ಗೋಕಾಕ ಮಾತ್ರ ಜಿಲ್ಲೆ ಆಗುತ್ತದೆ. ಇಲ್ಲದಿದ್ದರೆ ನಾವಾಗಿಯೇ ಹೋರಾಟಕ್ಕಿಳಿದರೆ ಗೋಕಾಕನ್ನು ಜಿಲ್ಲೆಯಾಗಿ ಪಡೆಯುವುದರ ಜೊತೆಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನಾಗಿ ಪಡೆಯುತ್ತೇವೆ ಎಂದು ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು ಎಚ್ಚರಿಕೆ ನೀಡಿದರು.
ಗೋಕಾಕ ತಾಲೂಕಿಗೆ ಜಿಲ್ಲೆ ಆಗುವ ಎಲ್ಲ ಅರ್ಹತೆ ಇದೆ. ಆದಷ್ಟು ಬೇಗ ಗೋಕಾಕ ಜಿಲ್ಲೆಯಾಗಿ ಸರ್ಕಾರ ಘೋಷಣೆ ಮಾಡಬೇಕು. ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕಿಗೆ ಜಿಲ್ಲೆಯ ಸ್ಥಾನಮಾನ ನೀಡಬೇಕು ಎಂದು ಕುಂದರಗಿ ಸ್ವಾಮೀಜಿ ಹೇಳಿದರು.


ಸಂಗೀತ ಲೋಕದಲ್ಲಿ ಮಿಂದೆದ್ದ ಕರದಂಟು ನಗರಿ: ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಕಲಾವಿದರ ಹಾಡಿಗೆ ಇಡೀ ಕರದಂಟು ನಗರಿ ಹೆಜ್ಜೆ ಹಾಕಿತು. ಗೋಕಾಕನ ಜನತೆ ಸಂಗೀತ ಲೋಕದಲ್ಲಿ ಮಿಂದೆದ್ದರು. ನಾಡಿನ ಖ್ಯಾತ ಕಲಾವಿದರಾದ ಕುರಿಗಾಹಿ ಹನುಮಂತ, ಶ್ರೀರಾಮ ಕಾಸರ, ಶೀಲಾ ಹಿರೇಮಠ, ಅಜಯ ಸಾರಾಪುರ, ಸೇರಿದಂತೆ ಅನೇಕ ಕಲಾವಿದರು ತಮ್ಮ ಹಾಡಿನ ಮೂಲಕ ಮನಸೂರೆಗೊಂಡರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

1 × 4 =