ಶನಿ ಪ್ರದೋಷ ಶನಿವಾರ
ಯುವ ಭಾರತ ಸುದ್ದಿ ಬೆಳಗಾವಿ :
ಫೆ. 18 ರಂದು ಒಂದೇ ದಿನ ಶನಿ ಪ್ರದೋಷ ಹಾಗೂ ಮಹಾಶಿವರಾತ್ರಿ ಯೋಗಾಯೋಗದಿಂದ ಬಂದಿದೆ. ಈ ನಿಮಿತ್ತ ಪಾಟೀಲ ಗಲ್ಲಿಯ ಶನಿ ದೇವಸ್ಥಾನದಲ್ಲಿ ಶನಿಶಾಂತಿ , ತೈಲಾಭಿಷೇಕ, ರುದ್ರಾಭಿಷೇಕ ಮುಂತಾದವುಗಳ ಸೇವೆಗಳ ಆಯೋಜನೆ ಮಾಡಲಾಗಿದೆ. ಶನಿ ಪ್ರದೋಷ ನಿಮಿತ್ತ ಸಂಜೆ 6 ಗಂಟೆಗೆ ವಿಶೇಷ ಅಭಿಷೇಕ, ಮಾಡಲಾಗುವುದು. ದಿವಸಪೂರ್ತಿ ಮಂದಿರದಲ್ಲಿ ಪ್ರಸಾದದ ಆಯೋಜನೆ ಮಾಡಲಾಗಿದೆ. ಸಂಜೆ 7.30 ಕ್ಕೆ ಪಾಲಕಿ ಸೇವೆ ಮಾಡಲಾಗುವುದು. ಭಕ್ತರು ಹೆಚ್ಚಿನ ಮಾಹಿತಿಗಾಗಿ ಮಂದಿರದಲ್ಲಿ ಸಂಪರ್ಕಿಸಬಹುದು. ಶನಿ ಪ್ರದೋಷದ ಮಹತ್ವ : ಶನಿದೇವರು ಶ್ರೀ ಶಿವ ಶಂಕರನ ಭಕ್ತರಿರುವುದರಿಂದ ಶನಿವಾರ ಬರುವ ತ್ರಯೋದಶಿಯ ದಿನ ಉಪವಾಸ ಮಾಡಿದರೆ ಎಲ್ಲಾ ದೋಷದಿಂದ ಮುಕ್ತಿ ಸಿಗುವುದು ಎನ್ನುತ್ತಾರೆ. ಶನಿ ಪೀಡೆಯ ಜನರು ಈ ದಿವಸ ಉಪವಾಸ ಪೂಜಾ ಮಾಡಿದರೆ ಲಾಭದಾಯಕ ಆಗುವುದು. ಶನಿವಾರಿ ಶನಿ ಪ್ರದೋಷ ಆಗುತ್ತದೆ. ಈ ವ್ರತದಿಂದ ಸಂತಾನ ಪ್ರಾಪ್ತಿ , ಯಶ ಪ್ರಾಪ್ತಿ ಆಗುವುದು, ಆಯುಷ್ಯದಲ್ಲಿ ಮಾನಸಿಕ, ಶಾರೀರಿಕ , ಆರ್ಥಿಕ ತೊಂದರೆಯವರಿಗೆ ಶನಿಯ ಅಶುಭದವರಿಗೆ, ಈ ಸಮಯದಲ್ಲಿ ಉಪವಾಸ ಹಾಗೂ ಉಪಾಯ ತಿಳಿದುಕೊಳ್ಳುವುದು ಮಹತ್ವ. ಇದು ಮಾಡಲಾಗಲಿಲ್ಲ ಎಂದರೆ ಪ್ರದೋಷ ಮತ್ತು ಶನಿವಾರದ ಯೋಗ ಅಂದರೆ ಶನಿ ಪ್ರದೋಷ ಶನಿ ದೇವರ ಶಾಂತಿಯ ಸಲುವಾಗಿ ಉಪಯೋಗವಿದೆ.