ಶ್ರೀ ಕೃಷ್ಣವೇಣಿ ಮಂದಿರ-ಕಳಸಾರೋಹಣ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ!
ಯುವ ಭಾರತ ಸುದ್ದಿ ಕಾಗವಾಡ : ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಕೃಷ್ಣಾ ನದಿ ತಟದಲ್ಲಿರುವ ಕಾಗವಾಡ ತಾಲೂಕಿನ ಪುಣ್ಯಕ್ಷೇತ್ರ ಜುಗೂಳ ಗ್ರಾಮದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ನೂತನವಾಗಿ ನಿರ್ಮಿಸಿದ ಶ್ರೀ ಕೃಷ್ಣವೇಣಿ ಮಂದಿರದ ಕಳಸಾರೋಹಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಜರುಗಿತು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಕೃಷ್ಣಾ ನದಿ ತಟದಲ್ಲಿ ಬ್ರಾಹ್ಮಣ ಸಮಾಜದ ಕೇವಲ ಮೂರ‍್ನಾಲ್ಕು ಕುಟುಂಬಗಳಿದ್ದರೂ ಸಹ ಅವರು ಎಲ್ಲರು ಕೂಡಿಕೊಂಡು ನೂತನವಾದ ಭವ್ಯ ಹಾಗೂ ಸುಂದರವಾದ ಬ್ರಾಹ್ಮಣ ಸಮಾಜದ ಶ್ರೀ ಕೃಷ್ಣವೇಣಿ ಮಂದಿರ ನಿರ್ಮಿಸಿದ್ದು, ಇಂದು ಅದರ ಕಳಸಾರೋಹಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನೆರವೇರಿತು.
ಬೆಳಿಗ್ಗೆ ಗಣೇಶ ಮಂದಿರದಿಂದ ಮಾಜಿ ಶಾಸಕ ರಾಜು ಕಾಗೆ ನೇತೃತ್ವದಲ್ಲಿ ಸಕಲ ವಾದ್ಯ ವೃಂದಗಳೊಂದಿಗೆ ಸುಮಂಗಲೆಯರು ಪೂರ್ಣ ಕುಂಭಗಳನ್ನು ಹೊತ್ತುಕೊಂಡು ಜೈ ಘೋಷಗಳನ್ನು ಹಾಕುತ್ತ ಭವ್ಯ ಮೆರವಣಿಗೆಯೊಂದಿಗೆ ಮೂರ್ತಿಯನ್ನು ತರಲಾಯಿತು.
ನಂತರ ದೇವಸ್ಥಾನದಲ್ಲಿ ಹೋಮ,ಹವನಗಳನ್ನು ಮಾಡುವ ಮೂಲಕ ಶಾಸ್ತೋಕ್ತವಾಗಿ ಕಳಸಾರೋಹಣ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೇರವೇರಿಸಿದರು.
ದಿವ್ಯ ಸಾನಿಧ್ಯವನ್ನು ಪಪೂಶ್ರೀ ಜಗದ್ಗುರು ಶಂಕರಾಚಾರ್ಯ ಮಹಾರಾಜರ ಅಮೃತ ಹಸ್ತದಿಂದ ಕಳಸಾರೋಹಣ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.
ಮಾಜಿ ಶಾಸಕ ರಾಜು ಕಾಗೆ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಭಾರತ ಭಕ್ತಿ ಪ್ರಧಾನ ದೇಶವಾಗಿದ್ದು, ಇಲ್ಲಿ ದೇವರು, ಧರ್ಮದ ಮೇಲೆ ಅಪಾರವಾದ ಭಕ್ತಿಯುಳ್ಳವರಾಗಿದ್ದಾರೆ. ಈ ಗ್ರಾಮದಲ್ಲಿ ಬ್ರಾಹ್ಮಣ ಸಮಾಜದ ಕೇವಲ ಮೂರ‍್ನಾಲ್ಕು ಕುಟುಂಬಗಳಿದ್ದರು ಲಕ್ಷಾಂತರ ರೂ. ವೆಚ್ಚ ಮಾಡಿ ದೇವಾಲಯವನ್ನು ನಿರ್ಮಿಸಿ ಇಂದು ದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಾಡಿದ್ದಾರೆ. ಬ್ರಾಹ್ಮಣ ಸಮಾಜದವರ ಸಂಸ್ಕಾರ ನಮ್ಮೆಲ್ಲರಿಗೆ ಮಾದರಿಯಾಗಿದ್ದು, ಪ್ರತಿಯೊಬ್ಬರು ಭಕ್ತಿ ಮಾರ್ಗದಲ್ಲಿ ನಡೆದು ಪುನೀತರಾಗುವಂತೆ ಹೇಳಿದರು.
ಪಪೂಶ್ರೀ ಜಗದ್ಗುರು ಶಂಕರಾಚಾರ್ಯ ಮಹಾರಾಜರು, ಐನಾಪುರದ ಶ್ರೀ ಬಸವೇಶ್ವರ ಮಹಾಸ್ವಾಮಿಗಳು ಉಪಸ್ಥಿತರಿದ್ದು ಧರ್ಮೋಪದೇಶ ಮಾಡಿದರು.
ಪಿಕೆಪಿಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ, ಎಂ.ಡಿ.ಕುಲಕರ್ಣಿ, ಡಿ.ಆರ್.ಕುಲಕರ್ಣಿ, ಆನಂದ ಕುಲಕರ್ಣಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಕಾ ಪಾಟೀಲ, ಮಾಜಿ ಅಧ್ಯಕ್ಷ ಅನೀಲ ಸುಂಕೆ,ಉಮೇಶ ಪಾಟೀಲ, ತಾತ್ಯಾಸಾಬ ಪಾಟೀಲ, ಬಾಬಗೌಡ ಪಾಟೀಲ,ಬಿ.ಆಯ್.ಪಾಟೀಲ,ರವೀಂದ್ರ ವ್ಹಾಂಟೆ.ಪಿಂಟು ಮೋಳೆ,ದಾದಾ ಅಂಬಿ, ರಾಜು ಕಡೋಲಿ, ಅನೀಲ ಕಡೋಲಿ, ವಿಜಯ ಅಗಸರ, ಅವಿನಾಶ ಪಾಟೀಲ,ಸೇರಿದಂತೆ ಮಹಾರಾಷ್ಟ್ರದ ಹಲವಾರು ಬ್ರಾಹ್ಮಣ ಸಮಾಜದ ಮುಖಂಡರು ಇದ್ದರು.