Breaking News

ಮೃತ ಕುಟುಂಬದ ಸದಸ್ಯರಿಗೆ ಪರಿಹಾರ ವಿತರಿಣೆ- ರಮೇಶ ಜಾರಕಿಹೊಳಿ!!

Spread the love

ಮೃತ ಕುಟುಂಬದ ಸದಸ್ಯರಿಗೆ ಪರಿಹಾರ ವಿತರಿಣೆ- ರಮೇಶ ಜಾರಕಿಹೊಳಿ!!

ಗೋಕಾಕ: ಇತ್ತಿಚೇಗೆ ಕೂಲಿ ಕೇಲಸಕ್ಕಾಗಿ ಬೆಳಗಾವಿಗೆ ತೆರಳುತ್ತಿದ್ದ ಗೋಕಾಕ ತಾಲೂಕಿನ ಕಾರ್ಮಿಕರಿದ್ದ ಕ್ರೂಸ್‌ರ ಪಲ್ಟಿಯಾಗಿ ಸ್ಥಳದಲ್ಲೆ 8ಜನ ಮೃತಪಟ್ಟಿದ್ದರು, ಮೃತ ಕೂಲಿ ಕಾರ್ಮಿಕರ ಕುಟುಂಬದ ಸದಸ್ಯರಿಗೆ ಕಾರ್ಮಿಕ ಇಲಾಖೆಯಿಂದ ಬಿಡುಗಡೆಯಾದ ಪರಿಹಾರ ಧನವನ್ನು ಶಾಸಕ ರಮೇಶ ಜಾರಕಿಹೊಳಿ ಹಸ್ತಾಂತರಿಸಿದರು.
ಶನಿವಾರದಂದು ತಾಲೂಕಿನ ಅಕ್ಕತಂಗೇರಹಾಳ ಗ್ರಾಮದ ಮೃತ ಕುಟುಂಬದ ಅಡಿವೆಪ್ಪ ಶಿವಪ್ಪ ಸಜಲಿ-3ಲಕ್ಷ, ಕಿರಣ ಅಶೋಕ ಕಳಸನ್ನವರ 3ಲಕ್ಷ, ಫಕೀರಪ್ಪ ರಾಮಣ್ಣ ಕಳಸನ್ನವರ 5ಲಕ್ಷ, ಬಸು ಚಂದ್ರಪ್ಪ ದಳವಿ 3ಲಕ್ಷ ಮತ್ತು ದಾಸನಟ್ಟಿ ಗ್ರಾಮದ ಕೃಷ್ಣಾ ರಾಮಪ್ಪಖಂಡೂರಿ 3ಲಕ್ಷ, ಬಸವಣ್ಣೆಪ್ಪ ಹನಮನ್ನವರ 5ಲಕ್ಷ ಹಾಗೂ ಎಮ್ ಮಲ್ಲಾಪೂರ ಗ್ರಾಮದ ಬಸವರಾಜ ಸನದಿ 3ಲಕ್ಷ ಸೇರಿ ಒಟ್ಟು 25ಲಕ್ಷ ರೂಪಾಯಿ ಪರಿಹಾರ ಧನದ ಚೇಕ್‌ಗಳನ್ನು ಮೃತರ ಮನೆಗಳಿಗೆ ಭೇಟಿ ನೀಡಿ ವಿತರಿಸಿದ್ದಾರೆ. ಈಗಾಗಲೇ ಕೆಲ ಕುಟುಂಬಗಳಿಗೆ ಪರಿಹಾರ ಧನ ಚೇಕಗಳನ್ನು ವಿತರಿಸಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ, ಈಗಾಗಲೇ ದುರ್ಘಟನೆಯಲ್ಲಿ ಮೃತ ಪಟ್ಟ ಏಳು ಕುಟುಂಬದ ಸದಸ್ಯರಿಗೆ ಕಾರ್ಮಿಕ ಇಲಾಖೆಯಿಂದ ಪರಿಹಾರ ಧನ ಚೇಕ್ ವಿತರಣೆ ಮಾಡಲಾಗಿದ್ದು, ಇನ್ನೊರ್ವರು ಈ ಅಪಘಾತದಲ್ಲಿ ಮೃತಪಟ್ಟಿದ್ದು ತಾಂತ್ರಿಕವಾಗಿ ಪರಿಹಾರ ಧನ ವಿಳಂಭವಾಗಿದೆ ಅತಿಶೀಘ್ರದಲ್ಲಿ ಅವರ ಕುಟುಂಬ ಸದಸ್ಯರಿಗೆ ಪರಿಹಾರ ಧನ ವಿತರಿಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಗಳ ಮುಖಂಡರಾದ ಬಸಪ್ಪ ಉರಬಿನಹಟ್ಟಿ, ಮುನ್ನಾ ದೇಸಾಯಿ, ಮಲ್ಲಿಕಾರ್ಜುನ ನಾಯ್ಕ, ಶಿವನಪ್ಪ ಕುಂದರಗಿ, ಸಂತೋಷ ಈಶ್ವರಪ್ಪಗೋಳ, ಸತ್ತೆಪ್ಪ ಅವ್ವನಗೋಳ, ರವಿ ಬಡಕಲಿ, ರಾಜು ಕರಲಿಂಗನವರ, ರಮೇಶ ನಿರ್ವಾಣಿ, ಅಜೀತ ಹರಿಜನ, ಶಿವಾನಂದ ಕರಲಿಂಗನವರ, ನಾಗಪ್ಪ ಹುಬ್ಬಳಿ, ಬಸವನಗೌಡ ನಿರ್ವಾಣಿ, ಅಡಿವೆಪ್ಪ ನಾವಲಟ್ಟಿ, ಬಸು ವನ್ನೂರಿ, ಶಂಕರ ಬಸನ್ನವರ, ವೀರುಪಾಕ್ಷ ಅಂಗಡಿ, ಕೆಂಪಣ್ಣ ಹೆಗದಾಳ, ಸುರೇಶ ಪಂಗನ್ನವರ, ಸಂಜು ಪಂಗನ್ನವರ, ಸುನೀಲ ಮಾಸ್ತಿ, ರಾಜು ಪಾಟೀಲ, ಬಸವಂತ ಈಶ್ವರಪ್ಪಗೋಳ, ಚಿನ್ನಯ್ಯ ಹಿರೇಮಠ, ಸುಭಾಸ ಬಿಳಿಕಿಚಡಿ ಇದ್ದರು.


Spread the love

About Yuva Bharatha

Check Also

ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.!

Spread the loveಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪತ್ರಿಕಾ ವಿತರಕರ ಪಾತ್ರ ಬಹಳ ದೊಡ್ಡದು.- ರಮೇಶ ಜಾರಕಿಹೊಳಿ.! ಗೋಕಾಕ: ಪತ್ರಿಕೆಗಳನ್ನು ಮನೆಗಳಿಗೆ ಸರಿಯಾದ …

Leave a Reply

Your email address will not be published. Required fields are marked *

thirteen − 4 =