ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಳ್ಳಬೇಕು : ಶ್ರೀನಿವಾಸ ಪಾಟೀಲ
ಯುವ ಭಾರತ ಸುದ್ದಿ ಬೆಳಗಾವಿ : ನಗರದ ಕೆ ಎಲ್ ಇ ಸಂಸ್ಥೆಯ ವಾಣಿಜ್ಯ ಪದವಿ ಮಹಾವಿದ್ಯಾಲಯ ( ಜಕ್ಕೇರಿ ಹೊಂಡ ಗೋವಾ ವೇಸ್) ದಲ್ಲಿ ವಾಣಿಜ್ಯ ಉತ್ಸವ ಆರಂಭ-22 ವನ್ನು ದಿನಾಂಕ 16/12/2022 ರಂದು ಬೆಳಿಗ್ಗೆ 9:೦೦ ಗಂಟೆಗೆ ಕಾಲೇಜು ಆವರಣದಲ್ಲಿ ಉದ್ಘಾಟಿಸಲಾಯಿತು. ಕರ್ನಾಟಕ ಲಾ ಸೊಸೈಟಿಯ ನಿರ್ವಹಣೆ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಪ್ರೊ. ಡಾ.ಶ್ರೀನಿವಾಸ ಆರ್ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ವಿವಿಧ ಕೌಶಲಗಳನ್ನು ಪಡೆದು ಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಕ್ರಿಯಾತ್ಮಕ ವ್ಯವಹಾರ ತಂತ್ರಗಳನ್ನು ತಿಳಿದು ಕೊಳ್ಳಬೇಕು. ಭಾರತ ದೇಶವು ಒಟ್ಟು ದೇಶದ ನಿವ್ವಳ ವ್ಯವಹಾರ ಅರ್ಥೈಸಿಕೊಳ್ಳಲು ಮುಂದಾಗಬೇಕು. ಪ್ರಸ್ತುತ ವಿದ್ಯಾರ್ಥಿಗಳಿಗೆ ಮುಂದೆ ಗುರಿ ಇರಬೇಕು. ಕಷ್ಟ ಪಟ್ಟು ಅಧ್ಯಯನ ಮಾಡಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಶ್ರೀದೇವಿ ಹಿರೇಮಠ ಅವರು ಇಂದಿನ ವಿದ್ಯಾರ್ಥಿಗಳು ಬಹುಶಿಸ್ತೀಯ ಕೌಶಲಗಳನ್ನು ಪಡೆದು ಕೊಂಡು ಜೀವನ ರೂಪಿಸಿಕೊಳ್ಳಬೇಕೆಂದು ಹೇಳಿದರು. ಮಿನಲ್ ಮತ್ತು ಸೃಷ್ಟಿ ಪ್ರಾರ್ಥಿಸಿದರು. ಪ್ರೊ.ಸುಧಾರಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರೊ ಪ್ರತೀಕ್ಷಾ ಅನಸೂರಕರ ಅತಿಥಿಗಳನ್ನು ಪರಿಚಯಿಸಿದರು.ಪ್ರೊ. ಮಾಳೇಶ ಅನಗೋಳಕರ ವಂದಿಸಿದರು. ಪ್ರೊ ಶಶಿಕಾಂತ ತಾರದಾಳೆ, ಪ್ರೊ.ಪವನ ಜಾಂಗಳೆ ಮತ್ತು ವಿದ್ಯಾರ್ಥಿಗಳು ಹಾಗೂ ಸ್ಪರ್ಧಾಳುಗಳು ಭಾಗವಹಿಸಿದ್ದರು.(ಭಾವಚಿತ್ರ ಸ್ಪರ್ಧೆ ಭಾಷಣ ಸ್ಪರ್ಧೆ ವ್ಯವಹಾರ ಸ್ಪರ್ಧೆ ವೇಷಭೂಷಣ ಸ್ಪರ್ಧೆ, ಅಣುಕು ಸ್ಪರ್ಧೆ) ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.