Breaking News

ಉತ್ತರ ಕ್ಷೇತ್ರದ ಕಾಂಗ್ರೆಸ್ ಲಿಸ್ಟ್‌ ನಲ್ಲಿ ಸುಧೀರ ಗಡ್ಡೆ ಹೆಸರು ಫೈನಲ್?

Spread the love

ಉತ್ತರ ಕ್ಷೇತ್ರದ ಕಾಂಗ್ರೆಸ್ ಲಿಸ್ಟ್‌ ನಲ್ಲಿ ಸುಧೀರ ಗಡ್ಡೆ ಹೆಸರು ಫೈನಲ್?

ಯುವ ಭಾರತ ಸುದ್ದಿ ಬೆಳಗಾವಿ :
ಎಲ್ಲರ‌ ಚಿತ್ತರ ಬೆಳಗಾವಿ ಉತ್ತರ ಕ್ಷೇತ್ರದತ್ತ ನೆಟ್ಟಿದ್ದು, ಬಿಜೆಪಿ ಸೋಲಿಸಬೇಕಾದರೆ ಸುಧೀರ ಗಡ್ಡೆ ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಕಾಂಗ್ರೆಸ್ ಫೈನಲ್‌ ಲಿಸ್ಟ್ ನಲ್ಲಿ ಸುಧೀರ ಗಡ್ಡೆ ಅವರ ಹೆಸರು ಇರುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಪ್ರತಿಷ್ಠೆಯ ಕಣವಾಗಿರುವ ಬೆಳಗಾವಿ ಉತ್ತರ ಮತಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ಎಲ್ಲ ತರಹದ ತಯಾರಿ ನಡೆಸಿದೆ. ಸದ್ಯ ಸುಧೀರ ಗಡ್ಡೆ, ಮಾಜಿ ಶಾಸಕ ಫಿರೋಜ ಸೇಠ, ಅಜೀಮ್‌ ಪಟವೇಗಾರ ಹೆಸರು ಕೇಳಿ ಬರುತ್ತಿದೆ. ಅಳೆದು ತೂಗಿ ಹೆಸರು ಫೈನಲ್ ಮಾಡಲು ಕಾಂಗ್ರೆಸ್ ಕಸರತ್ತು ನಡೆಸಿದೆ.

ಅಧಿಕಾರ ಇದ್ದಾಗ ಹಿಗ್ಗುವ, ಅಧಿಕಾರ ಇಲ್ಲದಾಗ ಕುಗ್ಗುವ, ಅಹಂಕಾರ ತೋರುವ ಮನಸ್ಸು ಸುಧೀರ ಗಡ್ಡೆ ಅವರದ್ದಲ್ಲ. ಸಮಚಿತ್ತ ಭಾವ, ಶಾಂತ-ಸೌಮ್ಯ ಸ್ವಭಾವ, ಸರಳತೆ, ತಾಳ್ಮೆ, ಸಹನಶೀಲ ವ್ಯಕ್ತಿತ್ವವುಳ್ಳ ಸುಧೀರ ಗಡ್ಡೆ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭವಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.

ಹಲವು ದಿನಗಳಿಂದ ವರಿಷ್ಠರು ಈ ಕ್ಷೇತ್ರದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹೀಗಾಗಿ ಸುಧೀರ ಗಡ್ಡೆ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದ್ದು, ಇವರನ್ನೇ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಬೇಕೆಂಬ‌ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸುಧೀರ ಗಡ್ಡೆ ಬೆಳಗಾವಿ ನಗರ ಹಾಗೂ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸುಧೀರ ಗಡ್ಡೆ ಅವರು ಸಮಚಿತ್ತ ಭಾವ, ಶಾಂತ-ಸೌಮ್ಯ ಸ್ವಭಾವ, ಸರಳತೆ, ತಾಳ್ಮೆ, ಸಹನಶೀಲ ವ್ಯಕ್ತಿತ್ವವುಳ್ಳ, ಪಕ್ಷ ಹಾಗೂ ಸಂಘ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ.
ಪಕ್ಷ ನಿಷ್ಠೆಗೆ ಬದ್ಧತೆಯ ಅಚ್ಚೊತ್ತಿದ್ದಾರೆ ಸುಧೀರ ಗಡ್ಡೆ.

ಕಾಂಗ್ರೆಸ್ ಪಕ್ಷ ನೀಡಿದ ಅವಕಾಶ-ಜವಾಬ್ದಾರಿಗಳನ್ನು ಗೌರವ, ಬದ್ಧತೆಯಿಂದ ಸುಧೀರ ಗಡ್ಡೆ ನಿಭಾಯಿಸುತ್ತಿದ್ದಾರೆ. ನಂಬಿದ ಜನತೆ, ಅವಕಾಶ ನೀಡಿದ ಪಕ್ಷಕ್ಕೆ ಒಳಿತಾಗುವ ಕಾರ್ಯ ಮಾಡುತ್ತ ಬಂದಿರುವುದೇ ಸುಧೀರ ಅವರ ವಿಶೇಷತೆ. ಹಲವಾರು ವರ್ಷಗಳಿಂದ ಪಕ್ಷಕ್ಕೆ ಬದ್ಧರಾಗಿ ತಮ್ಮದೇ ಛಾಪು ಮೂಡಿಸಿರುವ ಯುವ ನಾಯಕ ಸುಧೀರ ಗಡ್ಡೆ ಉತ್ತರ ಕ್ಷೇತ್ರಕ್ಕೆ ಕೈ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

nineteen + seventeen =