Breaking News

ಮೈ ಕೊರೆಯುವ ಚಳಿಗೆ ತತ್ತರಿಸಿದ ಜನತೆ

Spread the love

ಮೈ ಕೊರೆಯುವ ಚಳಿಗೆ ತತ್ತರಿಸಿದ ಜನತೆ

ಯುವ ಭಾರತ ಸುದ್ದಿ ಬೆಳಗಾವಿ :
ಚಳಿಯ ತೀವ್ರತೆಯಿಂದ ಜನ ಕಂಗಾಲಾಗಿದ್ದಾರೆ. ಮೈ ಕೊರೆಯುವ ಚಳಿಗೆ ಜನ ತತ್ತರಿಸಿ ಹೋಗುವಂತಾಗಿದ್ದು, ಬಹಳಷ್ಟು ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುವ ವಾತಾವರಣ ನಿರ್ಮಾಣವಾಗಿದೆ. ಜನವರಿ ತಿಂಗಳಲ್ಲೇ ಕನಿಷ್ಠ ತಾಪಮಾನ ದಾಖಲಾಗಿದ್ದು ತೀವ್ರ ಚಳಿ ತಾಳಲಾರದೆ ಜನ ಬಿಸಿಲಿನ ಮೊರೆ ಹೋಗುತ್ತಿದ್ದಾರೆ.

ಮೂರ್ನಾಲ್ಕು ದಿನಗಳಿಂದ ಚಳಿ ಜೋರಾಗಿದೆ. ಹೀಗಾಗಿ ಜನ ಮನೆಯಿಂದ ಹೊರಬರಲು ತಡವರಿಸುವಂತಾಗಿದೆ. ಬೆಳಗಾವಿ ಮಹಾನಗರದಲ್ಲಿ ಭಾರೀ ಬಾರಿ ಪ್ರಮಾಣದಲ್ಲಿ ಚಳಿ ಕಂಡುಬಂದಿದೆ. ಇದರಿಂದ ವೃದ್ಧರು, ಮಕ್ಕಳು ಹಾಗೂ ಕೃಷಿ ಚಟುವಟಿಕೆ ಕೈಗೊಳ್ಳುವ ಜನ ಮನೆಯಿಂದ ಹೊರಬರಲು ವಿಳಂಬ ಮಾಡುವಂತಾಗಿದೆ.
ಶಿವರಾತ್ರಿ ಹಬ್ಬದವರಿಗೂ ಚಳಿ ಕಾಣಿಸಿಕೊಳ್ಳಲಿದ್ದು ಜನ ಚಳಿಗಾಲ ಮುಗಿದರೆ ಸಾಕು ಎನ್ನುವಂತೆ ಚಳಿಗಾಲವನ್ನು ಕಳೆಯುತ್ತಿದ್ದಾರೆ.

ಮುಂದಿನ ಐದು ದಿನಗಳ ಕಾಲ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಚಳಿ ಇರಲಿದೆ ಎಂದು ಧಾರವಾಡದ ಜಿಕೆಎಂಎಸ್ ಘಟಕದ ಪ್ರಧಾನ ನೋಡಲ್ ಅಧಿಕಾರಿ ಡಾ.ಆರ್ .ಎಚ್ .ಪಾಟೀಲ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಹುಬ್ಬಳ್ಳಿಯಲ್ಲಿ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಒಣ ಮತ್ತು ಶೀತ ವಾತಾವರಣ ಮುಂದುವರಿಯಲಿದೆ ಎಂದು ತಿಳಿಸಿದರು.
ಜನವರಿ 10 ಮತ್ತು 11 ರಂದು 13 ರಿಂದ 17 ಡಿಗ್ರಿ ಸೆಲ್ಸಿಯಸ್, ಜನವರಿ 12 ಮತ್ತು 13 ರಂದು 14 ಮತ್ತು 18 ಡಿಗ್ರಿ ಸೆಲ್ಸಿಯಸ್ ಮತ್ತು ಜನವರಿ 14 ಮತ್ತು 15 ರಂದು 16 ಮತ್ತು 19 ಡಿಗ್ರಿ ಸೆಲ್ಸಿಯಸ್ ನಡುವೆ ತಾಪಮಾನವು ಉಳಿಯುವ ನಿರೀಕ್ಷೆಯಿದೆ.
ಚಂಡಮಾರುತ ಚಳಿಗಾಲದ ಆರಂಭ ವಿಳಂಬವಾಗಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ವೃದ್ಧರು ಹೊರಗೆ ಹೋಗುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ್ದು, ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು ಎಂದು ಹೇಳಿದರು. ಬೆಳಗಿನ ನಡಿಗೆಯನ್ನು ತಡಮಾಡಲು ಮತ್ತು ಬೆಚ್ಚಗಿನ ನೀರನ್ನು ಕುಡಿಯಲು ಅವರು ಜನರಿಗೆ ಸಲಹೆ ನೀಡಿದ್ದಾರೆ. ಶುಷ್ಕ ವಾತಾವರಣವು ಚರ್ಮಕ್ಕೆ ಕಾರಣವಾಗುವುದರಿಂದ ಸರಿಯಾದ ಜಲಸಂಚಯನ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆ, ಉತ್ತರ ಕರ್ನಾಟಕದಲ್ಲಿ ಚಳಿಯಿಂದ ಜನ ಗಢಗಢ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

thirteen + six =