Breaking News

ಟಾಪ್ ಟೆನ್ ಎಂಜಿನಿಯರಿಂಗ್ ಸಂಸ್ಥೆಗಳ ಪಟ್ಟಿ ಪ್ರಕಟ

Spread the love

ಟಾಪ್ ಟೆನ್ ಎಂಜಿನಿಯರಿಂಗ್
ಸಂಸ್ಥೆಗಳ ಪಟ್ಟಿ ಪ್ರಕಟ

ನವದೆಹಲಿ:
ಎನ್‌ಐಆರ್‌ಎಫ್‌ (NIRF ) 2023ರ ಶ್ರೇಯಾಂಕಗಳನ್ನು ಸೋಮವಾರ (ಜೂನ್ 5) ಬಿಡುಗಡೆ ಮಾಡಲಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್ ಈ ವರ್ಷವೂ ಒಟ್ಟಾರೆ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬೆಂಗಳೂರಿನ ಭಾರತಿಯ ವಿಜ್ಞಾನ ಸಂಸ್ಥೆ (IISc) ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಐಐಟಿ (IIT) ದೆಹಲಿ ಮೂರನೇ ಸ್ಥಾನದಲ್ಲಿದೆ.
ಐಐಟಿ ಮದ್ರಾಸ್ 86.69% ಅಂಕಗಳನ್ನು ಪಡೆದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಸತತ ಐದನೇ ವರ್ಷ ಐಐಟಿ ಮದ್ರಾಸ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಐಐಎಸ್‌ಸಿ ಬೆಂಗಳೂರು ಸಹ ಶೇಕಡಾ 83.09 ಅಂಕ ಪಡೆದು ತನ್ನ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ ಮತ್ತು ಐಐಟಿ ದೆಹಲಿ ಶೇಕಡಾ 82.16 ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಐಐಟಿ ದೆಹಲಿ ಒಂದು ಸ್ಥಾನ ಮೇಲಕ್ಕೇರಿದೆ. IIT ಬಾಂಬೆ ಒಂದು ಶ್ರೇಣಿಯನ್ನು ಕಳೆದುಕೊಂಡು 4 ನೇ ಸ್ಥಾನದಲ್ಲಿದೆ. AIIMS ದೆಹಲಿ ಕಳೆದ ವರ್ಷ ಒಂಬತ್ತನೇ ಸ್ಥಾನದಲ್ಲಿತ್ತು, ಈ ವರ್ಷ ಆರನೇ ಸ್ಥಾನಕ್ಕೆ ಜಿಗಿದಿದೆ. ಐಐಟಿ ಕಾನ್ಪುರ ಈ ವರ್ಷವೂ ಐದನೇ ಸ್ಥಾನವನ್ನು ಉಳಿಸಿಕೊಂಡಿದೆ. ಐಐಟಿ ಖರಗಪುರ, ಐಐಟಿ ರೂರ್ಕಿ ಮತ್ತು ಐಐಟಿ ಗುವಾಹತಿ ಈ ವರ್ಷ ತಲಾ ಒಂದೊಂದು ಸ್ಥಾನ ಕೆಳಗಿಳಿದಿವೆ.
ಒಟ್ಟಾರೆ ವಿಭಾಗದಲ್ಲಿ ಟಾಪ್ 10 ಸಂಸ್ಥೆಗಳ ಪಟ್ಟಿ
1. ಐಐಟಿ ಮದ್ರಾಸ್
2. IISc ಬೆಂಗಳೂರು
3. ಐಐಟಿ ದೆಹಲಿ
4. ಐಐಟಿ ಬಾಂಬೆ
5. ಐಐಟಿ ಕಾನ್ಪುರ
6. ಏಮ್ಸ್, ನವದೆಹಲಿ
7. ಐಐಟಿ ಖರಗಪುರ
8. ಐಐಟಿ ರೂರ್ಕಿ
9. ಐಐಟಿ ಗುವಾಹತಿ
10. JNU, ನವದೆಹಲಿ
2022 ರಲ್ಲಿ, IIT ಬಾಂಬೆ 82.35% ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿತ್ತು. IISc ಬೆಂಗಳೂರು 83.57% ಸ್ಕೋರ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು IIT ಮದ್ರಾಸ್ 87.59% ಅಂಕಗಳೊಂದಿಗೆ 1ನೇ ಸ್ಥಾನದಲ್ಲಿದೆ.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

3 × four =