ಅನಗೋಳ ಹರಿಮಂದಿರದಲ್ಲಿ ಪ್ರವಚನ ನಿಮಿತ್ತ ಸಂಚಾರ ಮಾರ್ಗ ಬದಲಾವಣೆ
ಯುವ ಭಾರತ ಸುದ್ದಿ ಬೆಳಗಾವಿ : ದಿನಾಂಕ : 17/01/2023 ರಿಂದ 23/01/2023 ರವರೆಗೆ ಬೆಳಗಾವಿ ನಗರದಲ್ಲಿ ಶ್ರೀ ಪರಮಪೂಜ್ಯ ಕಲಾವತಿ ದೇವಿ ಪುಣ್ಯತಿಥಿ ಉತ್ಸವ ಹಿನ್ನೆಲೆಯಲ್ಲಿ ಅನಗೋಳ ಮುಖ್ಯ ರಸ್ತೆಯಲ್ಲಿರುವ ಹರಿ ಮಂದಿರದಲ್ಲಿ ಪ್ರವಚನ ಕುರಿತು ನೆರೆಯ ಮಹಾರಾಷ್ಟ್ರ , ಗೋವಾ ರಾಜ್ಯಗಳಿಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿರುವುದರಿಂದ ಹೆಚ್ಚಿನ ಜನಸಂದಣಿಯಿಂದ ಕೂಡಿರುತ್ತದೆ.
ಈ ಕಾಲಕ್ಕೆ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಗೆ ಅನುಗುಣವಾಗಿ ದಿನಾಂಕ : 17/01/2023 ರಿಂದ 23/01/2023 ಪ್ರತಿದಿನವೂ ಮುಂಜಾನೆ 7.00 ಗಂಟೆಯಿಂದ 8.30 ಗಂಟೆಯವರೆಗೆ , 10.30 ಗಂಟೆಯಿಂದ ಮದ್ಯಾಹ್ನ 12.00 ಗಂಟೆಯವರೆಗೆ ಮತ್ತು ಸಾಯಂಕಾಲ 5.30 ಗಟೆಯಿಂದ 7.00 ಗಂಟೆಯವರೆಗೆ ಹಾಗೂ ರಾತ್ರಿ 9.00 ಗಂಟೆಯಿಂದ 10.30 ಗಂಟೆಯವರೆಗೆ ಈ ಕೆಳಗೆ ನಮೂದಿಸಿದ ಮಾರ್ಗಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವುದು.
1 ) ಡಿವಿಎಸ್ ಚೌಕ್ ಅನಗೋಳ ಕಡೆಯಿಂದ ಹರಿಮಂದಿರ ಮುಖಾಂತರ ಆರ್‌ಪಿಡಿ ಸರ್ಕಲ್ , ಖಾನಾಪುರ ಮುಖ್ಯ ರಸ್ತೆ ಸೇರುವ ಎಲ್ಲ ಮಾದರಿಯ ವಾಹನ ಚಾಲಕರು ಆಶೀರ್ವಾದ ಮಂಗಲ ಕಾರ್ಯಾಲಯ ( ಎಸ್‌ವಿ ಕಾಲೋನಿ ಕ್ರಾಸ್ ) ಹತ್ತಿರ ಎಡತಿರುವು ಪಡೆದುಕೊಂಡು ಮುಖ್ಯ ರಸ್ತೆಗೆ ಸಾಗುವುದು . 2 ) ಆರ್‌ಪಿಡಿ ಸರ್ಕಲ್ ಕಡೆಯಿಂದ ಡಿವಿಎಸ್ ಚೌಕ ಅನಗೋಳ ಮತ್ತು ಭಾಗ್ಯನಗರ ಸಾಗುವ ಎಲ್ಲ ಮಾದರಿಯ ವಾಹನಗಳು ಅನಗೋಳ ಮುಖ್ಯ ರಸ್ತೆಯ ಪುರೋಹಿತ ಸ್ವೀಟ್ ಮಾರ್ಟ್ ಹತ್ತಿರ ಎಡ ತಿರುವು ಪಡೆದುಕೊಂಡು ವಿದ್ಯಾನಗರ 1 ನೇ ಕ್ರಾಸ್ ಮುಖಾಂತರ ಯುನಿಯನ್ ಬ್ಯಾಂಕ್ ಎಟಿಎಂ ಹತ್ತಿರ ಮುಖ್ಯ ರಸ್ತೆ ಸೇರಿ ಮುಂದೆ ಸಾಗುವುದು.
ಕಾರಣ ಈ ಮೇಲ್ಕಂಡ ಸಂಚಾರ ಮಾರ್ಗ ಬದಲಾವಣೆಗೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.