Breaking News

ಅನಗೋಳ ಹರಿಮಂದಿರದಲ್ಲಿ ಪ್ರವಚನ ನಿಮಿತ್ತ ಸಂಚಾರ ಮಾರ್ಗ ಬದಲಾವಣೆ

Spread the love

ಅನಗೋಳ ಹರಿಮಂದಿರದಲ್ಲಿ ಪ್ರವಚನ ನಿಮಿತ್ತ ಸಂಚಾರ ಮಾರ್ಗ ಬದಲಾವಣೆ

ಯುವ ಭಾರತ ಸುದ್ದಿ ಬೆಳಗಾವಿ : ದಿನಾಂಕ : 17/01/2023 ರಿಂದ 23/01/2023 ರವರೆಗೆ ಬೆಳಗಾವಿ ನಗರದಲ್ಲಿ ಶ್ರೀ ಪರಮಪೂಜ್ಯ ಕಲಾವತಿ ದೇವಿ ಪುಣ್ಯತಿಥಿ ಉತ್ಸವ ಹಿನ್ನೆಲೆಯಲ್ಲಿ ಅನಗೋಳ ಮುಖ್ಯ ರಸ್ತೆಯಲ್ಲಿರುವ ಹರಿ ಮಂದಿರದಲ್ಲಿ ಪ್ರವಚನ ಕುರಿತು ನೆರೆಯ ಮಹಾರಾಷ್ಟ್ರ , ಗೋವಾ ರಾಜ್ಯಗಳಿಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿರುವುದರಿಂದ ಹೆಚ್ಚಿನ ಜನಸಂದಣಿಯಿಂದ ಕೂಡಿರುತ್ತದೆ.

ಈ ಕಾಲಕ್ಕೆ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಗೆ ಅನುಗುಣವಾಗಿ ದಿನಾಂಕ : 17/01/2023 ರಿಂದ 23/01/2023 ಪ್ರತಿದಿನವೂ ಮುಂಜಾನೆ 7.00 ಗಂಟೆಯಿಂದ 8.30 ಗಂಟೆಯವರೆಗೆ , 10.30 ಗಂಟೆಯಿಂದ ಮದ್ಯಾಹ್ನ 12.00 ಗಂಟೆಯವರೆಗೆ ಮತ್ತು ಸಾಯಂಕಾಲ 5.30 ಗಟೆಯಿಂದ 7.00 ಗಂಟೆಯವರೆಗೆ ಹಾಗೂ ರಾತ್ರಿ 9.00 ಗಂಟೆಯಿಂದ 10.30 ಗಂಟೆಯವರೆಗೆ ಈ ಕೆಳಗೆ ನಮೂದಿಸಿದ ಮಾರ್ಗಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವುದು.

1 ) ಡಿವಿಎಸ್ ಚೌಕ್ ಅನಗೋಳ ಕಡೆಯಿಂದ ಹರಿಮಂದಿರ ಮುಖಾಂತರ ಆರ್‌ಪಿಡಿ ಸರ್ಕಲ್ , ಖಾನಾಪುರ ಮುಖ್ಯ ರಸ್ತೆ ಸೇರುವ ಎಲ್ಲ ಮಾದರಿಯ ವಾಹನ ಚಾಲಕರು ಆಶೀರ್ವಾದ ಮಂಗಲ ಕಾರ್ಯಾಲಯ ( ಎಸ್‌ವಿ ಕಾಲೋನಿ ಕ್ರಾಸ್ ) ಹತ್ತಿರ ಎಡತಿರುವು ಪಡೆದುಕೊಂಡು ಮುಖ್ಯ ರಸ್ತೆಗೆ ಸಾಗುವುದು . 2 ) ಆರ್‌ಪಿಡಿ ಸರ್ಕಲ್ ಕಡೆಯಿಂದ ಡಿವಿಎಸ್ ಚೌಕ ಅನಗೋಳ ಮತ್ತು ಭಾಗ್ಯನಗರ ಸಾಗುವ ಎಲ್ಲ ಮಾದರಿಯ ವಾಹನಗಳು ಅನಗೋಳ ಮುಖ್ಯ ರಸ್ತೆಯ ಪುರೋಹಿತ ಸ್ವೀಟ್ ಮಾರ್ಟ್ ಹತ್ತಿರ ಎಡ ತಿರುವು ಪಡೆದುಕೊಂಡು ವಿದ್ಯಾನಗರ 1 ನೇ ಕ್ರಾಸ್ ಮುಖಾಂತರ ಯುನಿಯನ್ ಬ್ಯಾಂಕ್ ಎಟಿಎಂ ಹತ್ತಿರ ಮುಖ್ಯ ರಸ್ತೆ ಸೇರಿ ಮುಂದೆ ಸಾಗುವುದು.
ಕಾರಣ ಈ ಮೇಲ್ಕಂಡ ಸಂಚಾರ ಮಾರ್ಗ ಬದಲಾವಣೆಗೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

16 − 4 =