ಸಿದ್ಧಾರೂಡ ದರ್ಶನ ಪಡೆದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಸತ್ಕಾರ.!
Yuva Bharatha
September 8, 2021
Uncategorized
500 Views
ಸಿದ್ಧಾರೂಡ ದರ್ಶನ ಪಡೆದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಸತ್ಕಾರ.!
ಯುವ ಭಾರತ ಸುದ್ದಿ ಗೋಕಾಕ: ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಡ ಜಾತ್ರಾ ಮಹೋತ್ಸವ ಕೋವಿಡ್ ನಿಯಮಗಳ ಪಾಲನೆ ಮೂಲಕ ಸರಳವಾಗಿ ಆಚರಿಸಲಾಯಿತು.
ಮಂಗಳವಾರದಂದು ಬೆಳಿಗ್ಗೆ 6ಗಂಟೆಗೆ ಶ್ರೀ ಸಿದ್ಧಾರೂಡರ ಮೂರ್ತಿಗೆ ರುದ್ರಾಭಿಷೇಕ, ಮಹಾಪೂಜೆ ಜೊತೆಗೆ ಸಿದ್ಧಾರೂಡರ ಆಶ್ರಮದಲ್ಲಿ ಹೋಮ ಹವನ ಹಮ್ಮಿಕೊಳ್ಳಲಾಯಿತು.
ಮಧ್ಯಾಹ್ನ ಮಹಾಪ್ರಸಾದ ಜರುಗಿ, ಸಂಜೆ ಶ್ರೀ ಸಿದ್ಧಾರೂಡರ ತೆಪ್ಪೋತ್ಸವ ಹಾಗೂ ಸಿದ್ಧಾರೂಡರ ಉತ್ಸವ ಮೂರ್ತಿಯ ಮೆರವಣಿಗೆ ಸುಮಂಗಲಿಯ ಕುಂಬ ಮತ್ತು ಸಕಲ ವಾದ್ಯ ಮೇಳದೊಂದಿಗೆ ಉಪ್ಪಾರಹಟ್ಟಿ ಗ್ರಾಮದಲ್ಲಿ ನಡೆಯಿತು.
ಸಂಜೆ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮ ಜರುಗಿತು.
ಇದೇ ಸಂದರ್ಭದಲ್ಲಿ ಸಿದ್ಧಾರೂಡ ಆಶ್ರಮದಿಂದ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರನ್ನು ಸಿದ್ಧಾರೂಡ ಮಠದ ಪೀಠಾಧಿಪತಿ ಶ್ರೀ ನಾಗೇಶ್ವರ ಮಹಾಸ್ವಾಮಿಜಿಯವರು ಆತ್ಮೀಯವಾಗಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಮಾಜಿ ಜಿಪಂ ಸದಸ್ಯ ಎಮ್ ಎಲ್ ತೋಳಿನವರ, ಮುಖಂಡರಾದ ಹನಮಂತ ದುರ್ಗನ್ನವರ, ರಂಗಪ್ಪ ನಂದಿ, ಹನಮಂತ ಖಿಚಡಿ, ಮಹಾದೇವ ಭಂಡಿ, ಗುರುಲಿಂಗ ಭಾಗೋಜಿ, ಬಸವರಾಜ ಹೊನ್ನಕುಪ್ಪಿ ಸೇರಿದಂತೆ ಗ್ರಾಪಂ ಸದಸ್ಯರು ಹಾಗೂ ಉಪ್ಪಾರಹಟ್ಟಿ ಪಿಕೆಪಿಎಸ್ ನಿರ್ದೇಶಕರು ಇದ್ದರು.