ಶೇಡೆಗಾಳಿ ತೋಟಗಾರಿಕೆ ಕ್ಷೇತ್ರಕ್ಕೆ ರಾಜೇಂದ್ರರ್‌ಕುಮಾರ, ನಾಗೇಂದ್ರಪ್ರಸಾದ್.ಕೆ ಭೇಟಿ
ರಾಜಕುಮಾರ ಕಾರ್ಯವೈಖರಿಗೆ ಶ್ಲಾಘನೆ, ತೋಟಗಾರಿಕೆ ಸದುದ್ದೇಶಗಳನ್ನು ಸಕಾರಗೊಳಿಸುವಲ್ಲಿ ಯಶಸ್ವಿಯಾಗಲು ಶುಭ ಹಾರೈಕೆ
ಯುವ ಭಾರತ ಸುದ್ದಿ ಬೆಳಗಾವಿ :
ಜಿಲ್ಲೆಯ ಖಾನಾಪುರ ತಾಲೂಕಿನ ಶೇಡೆಗಾಳಿಯಲ್ಲಿರುವ ಸುಮಾರು ೩೦.೦೮ಎಕರೆ ವಿಸ್ತೀರ್ಣದಲ್ಲಿ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಸಂಸ್ಥೆ(ಕೆಎಸ್‌ಎಚ್‌ಡಿಎ) ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಕ್ಷೇತ್ರಕ್ಕೆ ಬೆಂಗಳೂರು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಟಾರಿಯಾ ಹಾಗೂ ತೋಟಗಾರಿಕೆ ನಿರ್ದೇಶಕ ನಾಗೇಂದ್ರಪ್ರಸಾದ್.ಕೆ ಅವರು ಇತ್ತೀಚೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ತೋಟಗಾರಿಕೆ ಕ್ಷೇತ್ರದಲ್ಲಿ ಸುಮಾರು ೨೦ ತರಹದ ಪ್ರಧಾನ ಮತ್ತು ಅಪ್ರಧಾನ ಹಣ್ಣುಗಳ ಸಸಿಗಳನ್ನು ನಾಟಿ ಮಾಡಲಾಗಿದ್ದು, ಇದೊಂದು ಮಾದರಿಯ ತೋಟಗಾರಿಕೆ ಕ್ಷೇತ್ರವಾಗಿದೆ. ಇದು ರೈತರಿಗಾಗಿ ಒಂದು ಒಳ್ಳೆಯ ಮಾದರಿಯ ನರ್ಸರಿಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಯ ರೈತರಿಗೆ ಉತೃಷ್ಟ ಸಸಿಗಳನ್ನು ನೀಡುವ ಮೂಲಕ ತೋಟಗಾರಿಕೆ ಸದುದ್ದೇಶಗಳನ್ನು ಸಕಾರಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ತೋಟಗಾರಿಕೆಯಲ್ಲಿನ ಆಸಕ್ತ ರೈತರ ಹೊಲಗಳಿಗೆ ಉತ್ಕೃಷ್ಟ ಸಸಿಗಳನ್ನು ನೀಡಿ ರೈತರಿಗೆ ಆರ್ಥಿಕ ಚೈತನ್ಯ ತುಂಬುವಂತ ಕೆಲಸವಾಗಿದ್ದು, ರಾಜ್ಯ ತೋಟಗಾರಿಕೆ ಅಭಿವೃದ್ಧಿ ಸಂಸ್ಥೆ (ಕೆಎಸ್‌ಎಚ್‌ಡಿಎ) ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಅವರ ವಿಶೇಷ ಕಾಳಜಿ ಹಾಗೂ ಮುತುವರ್ಜಿಗೆ ರಾಜೇಂದ್ರರ್‌ಕುಮಾರ ಕಟಾರಿಯ ಹಾಗೂ ನಾಗೇಂದ್ರಪ್ರಸಾದ್.ಕೆ ಮಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ತೋಟಗಾರಿಕೆ ಕ್ಷೇತ್ರ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜಕುಮಾರ ಅವರು ಆರ್‌ಐಡಿಎಫ್ ಅಡಿ ನರ್ಸರಿ ಸಂರಕ್ಷಣೆಗಾಗಿ ತಂತಿಬೇಲಿ ಅಳವಡಿಸುವ ಕಾರ್ಯಕ್ಕೆ ಚುರುಕು ಮುಟ್ಟಿಸಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಹಾಗೆಯೇ ಟ್ರೈನಿಂಗ್ ಹಾಲ್, ೨೦ ಗುಂಟೆ ಜಾಗದಲ್ಲಿ ಪಾಲಿ ಹೌಸ್, ಎರೆಹುಳು ಗೊಬ್ಬರ ಘಟಕ ಮತ್ತು ಬಯೋ ಡೈಸ್ಟರ್ ಘಟಕ ಸೇರಿದಂತೆ ಬೋರವೆಲ್ ಕೊರೆಸುವ ಎಲ್ಲ ಯೋಜನೆಗಳನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಅತ್ಯಂತ ಕಡಿಮೆ ವೇಳೆಯಲ್ಲಿ ಮಾದರಿ ಫಾರ್ಮ್‌ಗೆ ಮುನ್ನುಡಿ ಬರೆದಿದ್ದಾರೆ.
ಕೋಟ್….
೧೯೬೫ರಲ್ಲಿಯೇ ಸ್ಥಾಪನೆಯಾದ ಶೇಡೆಗಾಳಿಯ ತೋಟಗಾರಿಕೆಯ ಈ ನರ್ಸರಿಯಲ್ಲಿ ಸುಮಾರು ಸೇಬು-೧೪೦, ಬಟರ್‌ಪ್ರುಟ್-೧೦೦, ರೋಜ ಆ್ಯಪಲ್-೮೦, ಮಿರ‌್ಯಾಕಲ್ ಪ್ರುಟ್-೧೨೦, ಬ್ರೆಡ್ ಫ್ರುಟ್-೪೦, ಲಕ್ಷ್ಮಣ ಪಲ್ಲು ಹಾಗೂ ಹನುಮಾನ ಪಲ್ಲು-೧೨೦, ಮಿಲ್ಕ್ ಫ್ರುಟ್-೨೦, ಮೆಕಡಾಮಿಯಾ-೪೦, ನಾಲ್ಕು ಬಗೆಯ ತಳಿಯ ಹಣ್ಣು-೮೦, ಬಾರ್ಬಾ-೩೦, ಎಗ್ ಫ್ರುಟ್-೩೦, ಲಾಂಗನ್-೨೦, ರಾಮಭೂತನ-೨೦, ಲಿಚ್ಚಿ-೩೦, ಕೊಕಮ್-೩೦, ಬಿಳಿನೆರಳೆ-೪೦, ಮ್ಯಾಂಗೋ ಸ್ಟಿನ್-೨೫ ಸೇರಿದಂತೆ ೨೦ ತರಹದ ವಿವಿಧ ಬಗೆಯ ಹಣ್ಣುಗಳ ಸಸಿಗಳನ್ನು ನಾಟಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅಗ್ರೋ ಟ್ಯೂರಿಜಂ ಮಾಡುವ ಮೂಲಕ ಅತ್ಯಾಕರ್ಷಣೆಯ ಕೇಂದ್ರವನ್ನಾಗಿ ಮಾಡುವುದಲ್ಲದೇ ರಾಜ್ಯದಲ್ಲಿಯೇ ಮಾದರಿಯ ನರ್ಸರಿಯಾಗಿ ಮಾಡಲು ಎಲ್ಲ ಪ್ರಯತ್ನ ಮಾಡಲಾಗುವುದು.
*ರಾಜಕುಮಾರ ದೋ.ಟಾಕಳೆ
ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯ ವಲಯ ಶೇಡೆಗಾಳಿ ತೋಟಗಾರಿಕೆ ಕ್ಷೇತ್ರ, ಖಾನಾಪುರ ಬೆಳಗಾವಿ ಜಿಲ್ಲೆ.