Breaking News

ಭಾರತದ ಗೋಡೆ ರಾಹುಲ್ ಅರ್ಧ ಶತಕ 

Spread the love

ಭಾರತದ ಗೋಡೆ ರಾಹುಲ್ ಅರ್ಧ ಶತಕ

ಯುವ ಭಾರತ ಸುದ್ದಿ ಬೆಂಗಳೂರು :            ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹಾಲಿ ಕೋಚ್ ರಾಹುಲ್ ದ್ರಾವಿಡ್  ಇಂದು 50 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ರಾಹುಲ್ ಶರದ್ ದ್ರಾವಿಡ್ – ಇವರು ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರು ಮತ್ತು ತಂಡದ ಮಾಜಿ ನಾಯಕ. ಮದ್ಯಪ್ರದೇಶ ಮೂಲದವರಾದ ದ್ರಾವಿಡ್  ಕನ್ನಡಿಗರು. ಟೆಸ್ಟ್ ಪಂದ್ಯಗಳಲ್ಲಿ 10,000ಕ್ಕೂ ಅಧಿಕ ರನ್ನುಗಳನ್ನು ಗಳಿಸುವುದರಲ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಸ್ಥಾನ ಪಡೆದ ಭಾರತೀಯ.

ಇಂದೋರ್ ನಲ್ಲಿ ಜನಿಸಿದ ಅವರು , ಕೇವಲ 12 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅವರನ್ನು  ದಿ ವಾಲ್ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ . ದ್ರಾವಿಡ್ ಅತಿ ಹೆಚ್ಚು ಎಸೆತಗಳನ್ನು ಆಡಿದ ಬ್ಯಾಟ್ಸ್‌ಮನ್ ಎಂಬ ಬಿರುದು ಹೊಂದಿದ್ದಾರೆ . ಅವರು ಒಟ್ಟು 31258 ಎಸೆತಗಳನ್ನು ಆಡಿದ್ದಾರೆ . ಅವರು ತಮ್ಮ ವೃತ್ತಿಜೀವನದಲ್ಲಿ ಗೋಲ್ಡನ್ ಡಕ್ ( 0 ರನ್ ) ಆಗಿಲ್ಲ . ಭಾರತ ಕಂಡ ಅತ್ಯಂತ ಶ್ರೇಷ್ಠ ಬ್ಯಾಟ್ಸಮನ್  ಗಳಲ್ಲಿ ರಾಹುಲ್ ದ್ರಾವಿಡ್ ಒಬ್ಬರಾಗಿದ್ದಾರೆ. ಕರ್ನಾಟಕ ತಂಡಕ್ಕೆ ಅವರು ಆಡಿದ್ದರು.

 

ವಿಶ್ವ ಕ್ರಿಕೆಟ್ ಕಂಡ ಅತ್ಯಂತ ಅಪರೂಪದ ಪ್ರತಿಭೆಯಾಗಿರುವ ರಾಹುಲ್ ದ್ರಾವಿಡ್ ಅವರು ತಮ್ಮ ಮೃದು ಹಾಗೂ ಸ್ನೇಹ ಶೀಲ ಸ್ವಭಾವಕ್ಕೆ ಹೆಸರಾದವರು. ಅತಿ ಹೆಚ್ಚು ಕ್ಯಾಚ್ ಹಿಡಿದ ವಿಕೆಟ್ ಕೀಪರ್ ಯೇತರ ಎನ್ನುವ ಹೆಗ್ಗಳಿಗೆ ರಾಹುಲ್ ದ್ರಾವಿಡ್ ಅವರ ಹೆಸರಲ್ಲಿದೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 × 5 =