ಹಾನಗಲ್ ಕುಮಾರಸ್ವಾಮಿಗಳ ವಿರಾಟಪುರದ ವಿರಾಗಿ ಚಲಚಿತ್ರದ ಪ್ರಚಾರಾರ್ಥ ಹಮ್ಮಿಕೊಂಡ ರಥಯಾತ್ರೆಗೆ ಸ್ವಾಗತ
ಯುವ ಭಾರತ ಸುದ್ದಿಇಂಡಿ: ೧೨ ನೇ ಶತಮಾನದಲ್ಲಿ ಅಧ್ಯಾತ್ಮೀಕ ಕ್ರಾಂತಿ ಮಾಡಿದವರಲ್ಲಿ ಹಾನಗಲ್ ಕುಮಾರಸ್ವಾಮಿ ಅವರು ಒಬ್ಬರು.ವೀರಶೈವ ಲಿಂಗಾಯ ಸಮುದಾಯವನ್ನು ಎತ್ತಿಹಿಡಿದು ಶಿವಯೋಗಿ ಮಂದಿರ ಸ್ಥಾಪನೆ ಮಾಡಿದ್ದಾರೆ.ಶಿವಯೋಗಿ ಮಂದಿರ ಮಹಾನ್ ಸಂಸ್ಥೆಯಾಗಿದೆ.ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಏನೇನು ಮಾಡಲು ಸಾಧ್ಯವೊ ಅದನ್ನೆಲ್ಲ ಸಾಧ್ಯ ಮಾಡಿದ್ದಾರೆ ಎಂದು ಸಾಹಿತಿ,ಸಂಶೋಧಕ ಡಾ.ಎಸ್.ಕೆ.ಕೊಪ್ಪಾ ಹೇಳಿದರು.
ಅವರು ಭಾನುವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಹಾನಗಲ್ ಕುಮಾರಸ್ವಾಮಿಗಳ ವಿರಾಟಪೂರದ ವಿರಾಗಿ ಚಲಚಿತ್ರದ ಪ್ರಚಾರಾರ್ಥ ಹಮ್ಮಿಕೊಂಡ ರಥಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂಚಗೇರಿ ಮಠದ ಶಂಭುಲಿಂಗ ಶಿವಾಚಾರ್ಯರು ಮಾತನಾಡಿ,ಹಾನಗಲ್ ಕುಮಾರಸ್ವಾಮಿ ಶಿವಯೋಗಿಗಳು ವಿಕಲಚೇತನರು ,ಅಂಧರು , ಅನಾಥರು ಹಾಗೂ ವೀರಶೈವ ಸಮಾಜದ ಮತ್ತು ಇತರೇ ಜಾತ್ಯಾತೀತವಾಗಿ ಮಾನವ ಕುಲಕೋಟಿ ಉದ್ದರಿಸಲು ಈ ಭೂಮಿಗೆ ಅವತರಿಸಿದ್ದಾರೆ ಎಂದು ನುಡಿದರು.
ಹಾನಗಲ್ ಶಿವಯೋಗಿಗಳು ಶಿಷ್ಯನಿಗಾಗಿ ತ್ಯಾಗ ಮಾಡಿದ ತ್ಯಾಗಮಯಿ ಶಿವಯೋಗಿಗಳ ಯಾತ್ರೆ ಜ್ಞಾನ ಯಾತ್ರೆ ಇಂತಹ ಪುಣ್ಯ ಪುರುಷ್ಯರ ಚಲನ ಚಿತ್ರ ನೋಡಿ ಭಕ್ತರು ಪಾವನರಾಗಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿ ಡಾ.ಸ್ವರೂಪಾನಂದ ಮಹಾಸ್ವಾಮಿ ಆರ್ಶೀವಚನ ನೀಡಿ ಮಾತನಾಡಿ, ತಂದೆ ತಾಯಿ ಋಣ ತೀರಿಸುವ ಮಕ್ಕಳಿರಬೇಕು .ಗುರುವಿನ ಖುಣ ತೀರಿಸಿದ ಶಿಷ್ಯ ಜಡೆಯ ಶಾಂತಲಿಂಗೇಶ್ವರರು, ಇತ್ತಿತಲಾಗಿ ಚಿಲನಚಿತ್ರಗಳು ಸಾಧುಸಂತರ ಶರಣರ ಮಾನ ಮರ್ಯಾದೆ ಕಳೆಯುತ್ತಿವೆ. ಕುಮಾರೇಶ್ವರ ಸೀನಿಮಾ ಪವಿತ್ರವಾಗಿದ್ದು ಸ್ನಾನ ಮಾಡಿಕೊಂಡು ಮಡಿವಂತಿಕೆಯಿಂದ ನೋಡಬೇಕೆಂದರು.
ಶಿರಶ್ಯಾಡ ಶ್ರೀಮಠದ ಮುರುಘೇಂದ್ರ ಶಿವಾಚರ್ಯರು, ಖೇಡಗಿ ವಿರಕ್ತಮಠದ ಬಸವರಾಜೇಂದ್ರ ಶಿವಾಚಾರ್ಯ, ಓಂಕಾರಾಶ್ರಮದ ಡಾ. ಸ್ವರೂಪಾನಂದ ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸಿ ಆಶಿರ್ವಚನ ನೀಡದರು.
ಬಿಜೆಪಿ ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಸವನಗೌಡ ಕಟ್ಟಿ, ಎ.ಎಸ್ ಗಾಣಿಗೇರ ಹಾನಗಲ್ ಮಾತನಾಡಿದರು.
ಅಖೀಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯದರ್ಶಿ ಬಸವರಾಜ ಕುಮಸಗಿ, ಚನ್ನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಅರವಿಂದ ಘಾಳಿಮಠ,ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ ಡೊಮನಾಳ ವೇದಿಯಲ್ಲಿದ್ದರು.
ಶಾಂತಪ್ಪ ಕಕ್ಕಳಮೇಲಿ, ರಾಜಶೇಖರ ಕಕ್ಕಳಮೇಲಿ, ಪ್ರದೀಪ ಮುರಗುಂಡಿ, ಸತೀಶ ಕುಂಬಾರ,ಡಾ.ವಾಲಿ, ಚಂದ್ರಶೇಖರ ಲಬ್ಬಾ, ಪಾರ್ವತಿ ಸುರಪೂರ,ಬಿಜೆಪಿ ಮಹಿಳಾ ಮೊರ್ಚಾ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ ರೂಗಿಮಠ,ದೀಪಾ ರೂಗಿಮಠ, ಈರಣ್ಣಾ ಬುರಕುಲೆ,ಶಿವಾನಂದ ಲಬ್ಬಾ,ಪ್ರವೀಣ ಲಬ್ಬಾ, ಆರ್.ವ್ಹಿ ಪಾಟೀಲ, ರವೀಂದ್ರ ನಿಗಡಿ ಇತರರು ಕಾರ್ಯಕ್ರಮದಲ್ಲಿ ಇದ್ದರು.ವಿ.ವಿ.ಕತ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಹಾನಗಲ್ ಕುಮಾರೇಶ್ವರರ ರಥಯಾತ್ರೆ ಪಟ್ಟಣದಲ್ಲಿ ಸುಮಂಗಲೆಯರ ಕುಂಭ ಮೆರವಣಿಗೆಯೊಂದಿಗೆ ಸಮಾರಂಭಕ್ಕೆ ಅವ್ಹಾನಿಸಲಾಯಿತು.