Breaking News

ನಾನೇಕೆ ಟೆನ್ಶನ್ ಮಾಡಿಕೊಳ್ಳಲಿ. ಕುಡಚಿಯಲ್ಲೇ ನಿಲ್ತೇನೆ ಎಂದ ಶಾಸಕ

Spread the love

ನಾನೇಕೆ ಟೆನ್ಶನ್ ಮಾಡಿಕೊಳ್ಳಲಿ. ಕುಡಚಿಯಲ್ಲೇ ನಿಲ್ತೇನೆ ಎಂದ ಶಾಸಕ

ಯುವ ಭಾರತ ಸುದ್ದಿ ಕುಡಚಿ :
ವಿಧಾನಸಭಾ ಚುನಾವಣೆಗೆ ಯಾವ ಮತ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಗೊಂದಲಗಳಿಗೆ ಸ್ವತಃ ಕುಡಚಿ ಪ್ರಭಾವಿ ಬಿಜೆಪಿ ಶಾಸಕ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಅವರೇ ಕೊನೆಗೂ ತೆರೆ ಎಳೆದಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ತಮ್ಮ ಮತದಾರರ ಮನದಾಳದ ಇಂಗಿತ ಅರಿತು ಭಾವನಾತ್ಮಕವಾಗಿ ಮಾತನಾಡಿದ ಅವರು, ಯಾವ ಕಾರಣಕ್ಕೂ ಬೇರೆ ಕ್ಷೇತ್ರಕ್ಕೆ ನಾನು ಹೋಗುವ ಪ್ರಶ್ನೆ ಇಲ್ಲ. ವಿಧಾನಸಭಾ ಚುನಾವಣೆಗೆ ಕುಡಚಿ ವಿಧಾನಸಭಾ ಮತಕ್ಷೇತ್ರದಿಂದಲೇ ಬಿಜೆಪಿಯಿಂದ ಮತ್ತೊಂದು ಸಲ ಕಣಕ್ಕಿಳಿಯುವುದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಬಿದ್ದಂತಾಗಿದೆ. ಪಿ.ರಾಜೀವ ಅವರು ಚಿತ್ತಾಪುರ ಮತಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ವದಂತಿ ಹರಡಿತ್ತು. ಜೊತೆಗೆ ಶಿರಹಟ್ಟಿಯಿಂದಲೂ ಸ್ಪರ್ಧೆ ನಡೆಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ಎರಡೂ ಮತಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಬಂಜಾರ ಮತಗಳು ಇವೆ. ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸುಪುತ್ರ ಹಾಲಿ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ಸೋಲಿಸುವ ನಿಟ್ಟಿನಲ್ಲಿ ಚಿತ್ತಾಪುರದಿಂದ ರಾಜೀವ ಅವರನ್ನು ಸ್ಪರ್ಧೆಗಿಳಿಸಲಿದ್ದಾರೆ ಎಂಬ ಮಾತು ಹಲವು ದಿನಗಳಿಂದ ಹರಿದಾಡಿತ್ತು. ಆದರೆ, ಇದೀಗ ರಾಜೀವ ಅವರೇ ಈ ಕುರಿತ ಎಲ್ಲಾ ವದಂತಿಗಳಿಗೂ ತೆರೆ ಎಳೆದಿದ್ದಾರೆ.

*ರಾಜೀವ ಭಾವನಾತ್ಮಕ ಮಾತೇನು ?:*
ನೀವು ಅನ್ನ ಕೊಟ್ಟವರು, ನೀವು ಬದುಕು ಕೊಟ್ಟವರು, ನೀವು ಭರವಸೆ ಕೊಟ್ಟವರು, ನಾನು ಎಲ್ಲಿಯವರೆಗೆ ರಾಜಕಾರಣ ಮಾಡುತ್ತೇನೋ ಅಲ್ಲಿವರೆಗೆ ನಿಮ್ಮ ಕೈ ಬಿಡಲಾರೆ. ಸುಮ್ಮನೆ ಏನೋ ವಿರೋಧ ಪಕ್ಷದವರು ಪಾಪ ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ನಾನೇಕೆ ಟೆನ್ಶನ್ ಮಾಡಿಕೊಳ್ಳಲಿ. ಕುಡಚಿಗೆ ನಿಲ್ಲುತ್ತೇನೆ. ಆ ಬಗ್ಗೆ ಯಾವ ಗೊಂದಲವೂ ಇಲ್ಲ. ಕುಡಚಿಗೆ ನಿಲ್ಲುವೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

18 − 1 =