Breaking News

ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು

Spread the love

ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು

ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಾಂಬೆ ನೀನೇ ವಿಶ್ವ ಮಾನ್ಯಳು

ಅಪಮಾನವ ಸಹಿಸಿದ ಅಜ್ಞಾನವ ದಹಿಸಿದ ದೇಶಕೆ ಬೆಳಕು ತೋರಿದ ಅನ್ಯಾಯವ ಮೀರಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತೀಯ ನೀನೇ ಮಾನ್ಯಳು

ಮೇಲು-ಕೀಳು ದಳ್ಳುರಿಯನು ಶಿಕ್ಷಣದಲ್ಲಿ ಕರಗಿಸಿ ಶತಮಾನದ ಶತ್ರುಗಳನ್ನು ಸಂಕೋಲೆಯಲಿ ಬಂಧಿಸಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಿ ನೀನೆ ವಿಶ್ವ ಮಾನ್ಯಳು

ನಾಡಿಗಾಗಿ ಬದುಕಿದ ಪುಣ್ಯಪುರುಷನೆನೆಸಿದ ಜಗದಗಲ ಮುಗಿಲಗಳ ನಿನ್ನ ಕೀರ್ತಿ ಬೆಳಗಿಸಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಿ ನೀನೇ ವಿಶ್ವಮಾನ್ಯಳು

ಹೊಸದಿಗಂತ ತೋರಿದ ಛಲದಿ ಬದುಕ ಕಲಿಸಿದ ಮನ ಮನಗಳಲ್ಲಿ ಕೆಚ್ಚು ತುಂಬಿ ಬಾಳುಹಸನಗೊಳಿಸಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಿ ನೀನೇ ವಿಶ್ವಮಾನ್ಯಳು

ಸ್ವಾತಂತ್ರ್ಯ ಸಿಕ್ಕಿದರೂ ಸಮಾನತೆ ದಕ್ಕದಿರೆ ಬದುಕು ನಿಜದಿ ನರಕವು ನರಕದಿಂದ ನಾಕಕೆತ್ತಿ ಜನತೆಯನ್ನು ಉದ್ಧರಿಸಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಾಂಬೆ ನೀನೆ ವಿಶ್ವಮಾನ್ಯಳು…..

ಡಾ. ಶ್ರೀದೇವಿ ಆನಂದ ಪೂಜಾರಿ


Spread the love

About Yuva Bharatha

Check Also

ಹಕ್ಕಿ-ಡಿಕ್ಕಿ

Spread the loveಹಕ್ಕಿ-ಡಿಕ್ಕಿ ———— ಚಿಕ್ಕ ಹಕ್ಕಿ ಪಕ್ಕನೆ ನುಂಗಲಾರದು, ಹಾರುವ ಬೃಹತ್ ವಿಮಾನವನ್ನು; ಆದರೂ ಓಡಿಸುತ್ತಾರೆ ದೂರ, ಡಿಕ್ಕೀ …

Leave a Reply

Your email address will not be published. Required fields are marked *

19 + ten =