Breaking News

ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಅವುಗಳನ್ನು ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದ ಶಾಸಕ ರಮೇಶ ಜಾರಕಿಹೊಳಿ.!

Spread the love

ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಅವುಗಳನ್ನು ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದ ಶಾಸಕ ರಮೇಶ ಜಾರಕಿಹೊಳಿ.!


ಗೋಕಾಕ: ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಅವುಗಳನ್ನು ಯಶಸ್ವಿಗೊಳಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು.
ಅವರು, ಶುಕ್ರವಾರದಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಅಧಿಕಾರಿಗಳ ಹಾಗೂ ನೌಕರರ ಸಂಘದ ನೂತನ ಪದಾಧಿಕಾರಿಗಳಿಂದ ಸತ್ಕಾರÀ ಸ್ವೀಕರಿಸಿ ಮಾತನಾಡುತ್ತ ಸರಕಾರದ ಯೋಜನೆಗಳು ಯಶಸ್ವಿಯಾಗಲು ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ಅದನ್ನು ಜವಾಬ್ದಾರಿಯುತವಾಗಿ ನಿಭಾಯಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದರು.
ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ಅಧ್ಯಕ್ಷ ಸುಧೀರ ಜಮಖಂಡಿ, ಉಪಾಧ್ಯಕ್ಷ ವಿನಾಯಕ ಮಾಳಿ, ಖಜಾಂಚಿ ಅಲ್ಲಾಭಕ್ಷ ಮಹಾತ, ಸಂಘಟನಾ ಕಾರ್ಯದರ್ಶಿ ಮಡ್ಡೆಪ್ಪ ಭಜಂತ್ರಿ, ಸದಸ್ಯರಾದ ಯಲ್ಲಪ್ಪ ಮೂಡಲಗಿ, ಸುನೀಲ ನಾಯ್ಕ, ಸಾಯಿಶ್ವರಿ ಮೆಣಸಿನಕಾಯಿ, ಶಾಂತವ್ವ ಪ್ರಭುನಟ್ಟಿ, ಮಂಜುನಾಥ ಭಜಂತ್ರಿ, ಭಾರತಿ ಕುಳ್ಳೂರ, ಶಿವು ನಿಲಗಲ್ಲ, ವೀರಭದ್ರ ಗುಂಡಿ, ಸತೀಶ ಸುಣಗಾರ ಆಯ್ಕೆಯಾಗಿದ್ದಾರೆ.


Spread the love

About Yuva Bharatha

Check Also

ಬಜೇಟ ಅಭಿವೃದ್ಧಿ ಪರವಾಗಿಲ್ಲ- ಭೀಮಶಿ ಭರಮಣ್ಣವರ.!

Spread the loveಬಜೇಟ ಅಭಿವೃದ್ಧಿ ಪರವಾಗಿಲ್ಲ- ಭೀಮಶಿ ಭರಮಣ್ಣವರ.! ಗೋಕಾಕ: ಸಿದ್ಧರಾಮಯ್ಯನವರು ಮಂಡಿಸಿರುವ ಬಜೇಟ ಅಭಿವೃದ್ಧಿ ಪರವಾಗಿಲ್ಲ. ರೈತರ, ಬಡವರ …

Leave a Reply

Your email address will not be published. Required fields are marked *

twenty + 8 =