ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರಲಿದೆ.- ಶಾಸಕ ರಮೇಶ ಜಾರಕಿಹೊಳಿ.!

Spread the love

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರಲಿದೆ.- ಶಾಸಕ ರಮೇಶ ಜಾರಕಿಹೊಳಿ.!


ಗೋಕಾಕ: ಪ್ರಧಾನಿ ನರೇಂದ್ರ ಮೋದಿಯವರ ಕರೆ ಮೇರೆಗೆ ಜಿಲ್ಲಾಧ್ಯಂತ ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಭಿವೃದ್ಧಿಗೂ ಶ್ರಮಿಸಲಾಗುವದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ನಗರದ ಗಾಂಧಿ ಮೈದಾನದಲ್ಲಿ ನಡೆದ ವ್ಯಾಪಾರಸ್ಥರು ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಪಾಕಿಸ್ತಾನ ದೇಶದ ಮುಸಲ್ಮಾನರು ಆ ದೇಶದ ವ್ಯವಸ್ಥೆಗೆ ನೊಂದು ಭಾರತ ದೇಶದ ವಿಶ್ವಾಸವಿಟ್ಟು ನಮ್ಮ ದೇಶಕ್ಕೆ ಬರಲು ಸಿದ್ಧರಾಗಿದ್ದು ನಮ್ಮ ಪ್ರಧಾನಿಯ ಆಡಳಿತ ವೈಖರಿಯೆ ಕಾರಣವಾಗಿದೆ ಎಂದರು.
ನನ್ನ ಅಧಿಕಾರವಧಿಯಲ್ಲಿ ಕ್ಷೇತ್ರದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೆನೆ. ಗೋಕಾಕ ಮತ್ತು ಅರಭಾಂವಿ ಮತಕ್ಷೇತ್ರದಲ್ಲಿ ಹಿಂದು, ಮುಸ್ಲಿಂ ಭಾಂದವರು ಪರಸ್ಪರ ಪ್ರೀತಿ ವಿಶ್ವಾಸದಿಂದ ನಮ್ಮ ಪಕ್ಷದೊಂದಿಗೆ ಇದ್ದಾರೆ. ಇಂದಿನ ಯುವ ಪೀಳಿಗೆ ಇದನ್ನು ಅರಿತು ಶಾಂತಿಯುತ ನಗರವನ್ನಾಗಿಸಲು ಕೈಜೋಡಿಸಬೇಕು. ಎಲ್ಲ ಹಿರಿಯರು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಕರೆ ನೀಡಿದರು.
ಚುನಾವಣೆ ಸಮೀಪ ಬರುತ್ತಿದ್ದು ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಹಬ್ಬಿಸುವ ವದಂತಿಗಳಿಗೆ ಕಿವಿಗೊಡಬೇಡಿ. ಇವರು ಮೂರು ತಿಂಗಳು ಮಾತ್ರ ಪ್ರತ್ಯಕ್ಷರಾಗಿ ನಾಲಕುವರೆ ವರ್ಷ ಕಾಣೆಯಾಗಿರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಅಪಪ್ರಚಾರ ಮಾಡುವ ಇಂತಹ ಷಡ್ಯಂತ್ರಿಗಳಿAದ ದೂರವಿದ್ದು ಅಭಿವೃದ್ಧಿ ಹಾಗೂ ಶಾಂತಿಯುತ ನಗರವನ್ನಾಗಿಸಲು ನಮ್ಮನ್ನು ಬೆಂಬಲಿಸಿ. ನಿಮ್ಮ ಆಶೀರ್ವಾದವೆ ನನ್ನ ಶಕ್ತಿಯಾಗಿದ್ದು ಅದು ಸದಾ ನಮ್ಮ ಮೇಲೆ ಇರಲಿ ಎಂದರು.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರಲಿದೆ. ನಾನು ಬಿಜೆಪಿ ಪಕ್ಷವನ್ನು ಬಿಡುವದಿಲ್ಲ. ಜಿಲ್ಲೆಯಾಧ್ಯಂತ ಹಿಂದು, ಮುಸ್ಲಿಂ, ದಲಿತ ಸೇರಿದಂತೆ ಎಲ್ಲ ಸಮುದಾಯಗಳನ್ನು ಸಂಘಟಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವದಾಗಿ ತಿಳಿಸಿದ ಅವರು, ಇದಕ್ಕೆ ನಿಮ್ಮೆಲ್ಲರ ಸಹಕಾರ ನೀಡುವಂತೆ ಕೋರಿದರು.


Spread the love

About Yuva Bharatha

Check Also

ವೀರಶೈವ-ಲಿಂಗಾಯತ ಸಮುದಾಯದ ಸಭೆಯಲ್ಲಿ ಮತಯಾಚಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮತ್ತೋಮ್ಮೆ ಆಶೀರ್ವದಿಸಿ-ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ: ಕರ್ನಾಟಕ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ …

Leave a Reply

Your email address will not be published. Required fields are marked *

9 + 8 =