Breaking News

ಗುರುಗಳಿಗೆ ಅಭಿನಂದನೆ ಸಲ್ಲಿಸುವದು ಶ್ಲಾಘನೀಯ ಸಿದ್ದರಾಮ ಶ್ರೀಗಳು!

Spread the love

ಗುರುಗಳಿಗೆ ಅಭಿನಂದನೆ ಸಲ್ಲಿಸುವದು ಶ್ಲಾಘನೀಯ ಸಿದ್ದರಾಮ ಶ್ರೀಗಳು!

ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರ:  ತಾವು ಕಲಿತ ಮಠವನ್ನು ನೆಣಪಿಸಿಕೊಂಡು ತಮ್ಮ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಇವರ ಕೃತಜ್ಞತಾ ಭಾವ ಶ್ಲಾಘನೀಯವಾದದು ಎಂದು ಗದಗ ಡಂಬಳದ ಎಡೆಯೂರು ತೋಂಟದ ಸಂಸ್ಥಾನ ಮಠದ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.
ಕಲ್ಮಠ ಸಭಾ ಭವನದಲ್ಲಿ ಮಠದಲ್ಲಿನ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿರುವ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳರಾಜಯೋಗಿಂದ್ರ ಸ್ವಾಮಿಗಳ ೧೩ ನೇ ಪಟ್ಟಾಧಿಕಾರದ ವಾರ್ಷಿಕೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಅವರು ಕಲಿಯುವ ಸಂದರ್ಭದಲ್ಲಿ ಸ್ವಾಮೀಜಿಗಳು ತೋರಿರುವ ಪ್ರೀತಿ ವಾತ್ಸಲ್ಯ ಹಾಗೂ ಇಲ್ಲಿ ಕಲಿತ ಸಂಸ್ಕಾರಗಳೇ ಇಂತಹ ಕಾರ್ಯಮಾಡಲು ಸಹಕಾರಿಗುತ್ತದೆ. ಇವರು ಮಠಕ್ಕೆ ಪಟ್ಟಾಧಿಕರ ವಹಿಸಿಕೊಂಡಾಗಿನಿAದ ಮಠದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಮಾತಿಗಿಂತ ಕೆಲಸವೇ ಹೆಚ್ಚಾಗಿದೆ ನಾನೇ ಮಾಡಿದ್ದೇನೆ ಎಂದು ಹೇಳುವವರಲ್ಲ ಅದುವೆ ಶ್ರೇಯಸ್ಕರವಾಗಿರುತ್ತದೆ ಭೌತಿಕವಾಗಿ ಮಠವನ್ನು ಬೆಳೆಸಿದ್ದಾರೆ. ಕಿತ್ತೂರ ಅಭಿವೃದ್ದಿ ಪ್ರಾಧಿಕಾರಕ್ಕೆ ಹಣ ಮಂಜೂರು ಮಾಡಿಸುವಲ್ಲಿ ಅಭಿವೃದ್ದಿಗೆ ಪೂರಕವಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಕಿತ್ತೂರಿಗೆ ತನ್ನದೇ ಆದ ವೈಶಿಷ್ಠö್ಯವಿದೆ ಎಲ್ಲಿ ಹೋದರೂ ಚನ್ನಮ್ಮಾಜಿಯ ಹೆಸರು ಇದೆ ಚನ್ನಮ್ಮಾಜಿಯ ಅರಮನೆ ಗುರು ಮನೆ ನೋಡಬೆಕೆಂದರೆ ಕಿತ್ತೂರಿಗೆ ಬರಬೇಕೆಂದರು. ಕಿತ್ತೂರ ಸಂಸ್ಥಾನದ ಅರಸರು ಎಲ್ಲರಿಗೂ ಮಾದರಿಯಾಗಿದ್ದಾರೆ. ಸ್ವಾಮೀಜಿಗಳಾದವರು ಕ್ರೀಯಾಶೀಲರಾಗಿರಬೇಕು ಧಾರ್ಮಿಕ, ಸಂಸ್ಕçತಿಕ, ಸಾಹಿತ್ಯ ಮುಂತಾದ ಕಾರ್ಯಗಳನ್ನು ಮನಮುಟ್ಟುವ ಹಾಗೆ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರಂಜಿ ಮಠದ ಗುರುಶಿದ್ದ ಸ್ವಾಮೀಜಿ ಮಾತನಾಡಿ ಈ ಸ್ವಾಮೀಜಿಗಳು ಧಾರ್ಮಿಕ, ಸಂಸ್ಕçತಿಕ ಸಾಮಾಜಿಕವಾಗಿ ಬಹಳ ಒಳ್ಳೆಯ ಕಾರ್ಯವನ್ನು ಮಾಡದ್ದಾರೆ ಈ ರಾಜ ಪರಂಪರೆ ಮಠವು ಮತ್ತೆ ಕಿತ್ತೂರ ಚನ್ನಮ್ಮಾಜಿಯ ಗತ ವೈಭವ ಮೆರೆಯುವಂತಾಗಿದೆ ಎಂದರು.
ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ ಇಲ್ಲಿಯ ಪೂಜ್ಯರಲ್ಲಿ ದೊಡ್ಡ ಶಕ್ತಿ ಇದೆ ಚನ್ನಮ್ಮಾಜಿಯ ಗುರು ಮಠವನ್ನು ಬೆಳೆಸಲು ಶ್ರಮ ವಹಿಸುತ್ತಿದ್ದಾರೆ ಈ ನಾಡಿಗೆ ಬೆಳಕು ಚಲ್ಲುವ ಕೆಲಸವನ್ನು ಮಾಡುತ್ತಿದ್ದಾರೆ ಸರ್ವ ಜನಾಂಗದ ಹಿತವನ್ನು ಬಯಸುವವರಾಗಿದ್ದಾರೆ ಎಂದು ಹೇಳಿದರು.
ಗುರುವಂದನೆ ಸ್ವಿಕರಿಸಿ ಮಡಿವಾಳರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ ರಾಜ ಗರು ಸಂಸ್ಥಾನವಿರುವದು ಕಿತ್ತೂರಿನಲ್ಲಿಯೇ ಮಾತ್ರ ನಾನು ಇಲ್ಲಿ ಬಂದಿರುವದು ನನ್ನ ಪೂರ್ವ ಜನ್ಮದ ಪುಣ್ಯ ನನ್ನ ಬದುಕಿಗೆ ಜೀವನ ಕೊಟ್ಟವರು ಗದುಗಿನ ತೋಂಡದ ಜಗದ್ಗುರುಗಳು ಪಟ್ಟಾಧಿಕಾರವಾಗಿ ಹಲವಾರು ವರ್ಷಗಳು ಕಳೆದಿವೆ ಇನ್ನೂ ಮಾಡುವದು ಬಹಳಷ್ಟಿದೆ ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ ಮಠವನ್ನು ಅಭಿವೃದ್ದಿಪಡಿಸುತ್ತೇನೆ ಯಾವದೇ ಆಸೆ ಆಮೀಸೆಗಳಿಗೆ ಒಳಗಾದವರಲ್ಲ ಮಠಕ್ಕೆ ಆರ್ಥಿಕ ದೃಷ್ಟಿಯಿಂದ ಕೆಲವು ಕೆಲಸವನ್ನು ಮಾಡಿದ್ದೇನೆ ನಾನು ಯಾವಾಗಲೂ ಸಮಾಜ ಸೇವೆಗೆ ಬದ್ದನಾಗಿದ್ದೇನೆ ಎಂದರು.
ಗಂದಿಗವಾಡದ ಮೃತ್ಯುಂಜಯ ಸ್ವಾಮೀಜಿ, ಶಿವಯೋಗಿ ದೇವರು ಮಾತನಾಡಿದರು.ವಿದ್ಯಾರ್ಥಿಗಳು, ಸ್ವಾಮೀಜಿಗಳು ಸೇರಿಂದತೆ ಹಲವರು ಸೇರಿ ಮಡಿವಾಳರಾಜಯೋಗಿಂದ್ರ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಿ ಗೌರವ ಸಮರ್ಪಿಸಿದರು.

“ಕಲ್ಮಠದ ಸ್ವಾಮೀಜಿಗಳು ಸಮಾಜದಲ್ಲಿ ಯಾವದೇ ತಾರತಮ್ಯ ಮಾಡದೇ ಭಕ್ತರ ಕಾರ್ಯ ನೆರವೇರಿಸುತ್ತಾರೆ ಅಂಬಡಗಟ್ಟಿಯಲ್ಲಿ ನೂತನವಾಗಿ ನಿರ್ಮಿಸಿದ ಮಸೀದಿ ಹಾಗೂ ದರ್ಗಾ ಉದ್ಘಾಟನೆಗೆ ಆವ್ಹಾನಿಸಿದ್ದೆ ಅವರು ಬಂದು ಉದ್ಘಾಟಿಸಿದ್ದಾರೆ ಇದು ಇತಿಹಾಸದ ಪುಟದಲ್ಲಿ ಸೇರುವಂತಾಗಿದೆ”- ಸಮಾಜ ಸೇವಕ ಹಬೀಬ ಶಿಲೇದಾರ

ಕಡೋಲಿ ಗುರುಬಸವಲಿಂಗ ಸ್ವಾಮೀಜಿ, ಶೇಗುಣಸಿ ಮಹಾಂತಪ್ಪಗಳು, ಅರಳಿಕಟ್ಟಿ ಪೂಜ್ಯರು, ಮಲ್ಲಿಕಾರ್ಜುನ ದೇವರು, ವಿವಿಧ ಸಂಘಟನೆಗಳು, ಶಾಲೆ ಕಾಲೇಜು ಸಿಬ್ಬಂದಿಗಳು, ಗಣ್ಯಮಾನ್ಯರು ಉಪಸ್ಥಿತರಿದ್ದರು. ಕಾರಂಜಿ ಮಠದ ಶ್ರೀಗಳು ನಿರೂಪಣೆ, ಡಾ. ಎಸ್ ಬಿ ದಳವಾಯಿ ಸ್ವಾಗತ, ಗಂಗಣ್ಣ ಕರೀಕಟ್ಟಿ ವಂದನೆ.


Spread the love

About Yuva Bharatha

Check Also

ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್-ಮಾಜಿ ಶಾಸಕ ಸಂಜಯ ಪಾಟೀಲ.!

Spread the loveನಾನು ಭಾಷಣದಲ್ಲಿ ಹೆಬ್ಬಾಳಕರ ಹೆಸರನ್ನೆ ತಗೊಂಡಿಲ್ಲ. -ಮಾಜಿ ಶಾಸಕ ಸಂಜಯ ಪಾಟೀಲ.! ಯುವಭಾರತ ಸುದ್ದಿ ಬೆಳಗಾವಿ: ನಾನು …

Leave a Reply

Your email address will not be published. Required fields are marked *

one × three =