Breaking News

ಕಿತ್ತೂರಿನಲ್ಲಿ ಬ್ರಷ್ಟತೆ ಎಂಬುದು ತಾಂಡವಾಡುತ್ತಿದೆ- ಡಿ.ಬಿ.ಇನಾಮದಾರ!

Spread the love

ಕಿತ್ತೂರಿನಲ್ಲಿ ಬ್ರಷ್ಟತೆ ಎಂಬುದು ತಾಂಡವಾಡುತ್ತಿದೆ- ಡಿ.ಬಿ.ಇನಾಮದಾರ!

ಚನ್ನಮ್ಮನ ಕಿತ್ತೂರು : ಕಿತ್ತೂರಿನಲ್ಲಿ ಬ್ರಷ್ಟತೆ ಎಂಬುದು ತಾಂಡವಾಡುತ್ತಿದೆ, ಇದಕ್ಕೆ ಕೆಲವು ದಿನಗಳ ಹಿಂದೆ ನಡೆದ ಲೋಕಾಯುಕ್ತರ ದಾಳಿಯೇ ಉದಾಹರಣೆಯಾಗಿದ್ದು ಕ್ಷೇತ್ರದಲ್ಲಿ ಸಾಮಾನ್ಯ  ಜನರು ಪರಿದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಮಾಜಿ ಸಚಿವ ಡಿ.ಬಿ.ಇನಾಮದಾರ ಹೇಳಿದರು.
     ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಮಮಾರ್ಗದಿಂದ ಗುಜರಾತ ರಾಜ್ಯದಲ್ಲಿ  ಜಯಗಳಿಸಿ ವಿಶ್ವವನ್ನೆ ಗೆದ್ದಂತೆ ಭಾವಿಸಿರುವ ಬಿಜೆಪಿ ಸರ್ಕಾರ ಅನೇಕ ರಾಜ್ಯದಲ್ಲಿ ಹಿಂಬಾಗಿಲಿನಿಂದ ಅಧಿಕಾರದ ಚುಕ್ಕಾಣೆ ಹಿಡಿದು ಸಂವಿಧಾನ ದುರುಪಯೋಗ ಪಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
    ಯಾವುದೇ ಪಕ್ಷ ಅಧಿಕಾರದಲ್ಲಿದ್ದರೆ ಜನರ ಸೇವೆ ಮಾಡಬೇಕು, ಸಾಮಾನ್ಯ ಜನರ ದೈನಂದಿನ ಜೀವನದ ಅನುಕೂಲ ಹಾಗೂ ಅವರಿಗೆ ಬೇಕಾಗುವ ಮೂಲಭೂತ ಸೌಕರ್ಯ ನೀಡುವ ಕಾರ್ಯ ಸರ್ಕಾರ ಮಾಡಬೇಕು ಎಂದು ಹೇಳಿದರು.
     ಕಿತ್ತೂರು ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಹಾಗೂ ಆಡಳಿತ ಸೌಧದ ಕಟ್ಟಡಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮಂಜುರಾತಿ‌ ನೀಡಿತ್ತು. ಆದರೇ ಇವುಗಳನ್ನು ಅನುಷ್ಠಾನಗೊಳಿಸಲು ಬಿಜೆಪಿ ಸರ್ಕಾರಕ್ಕೆ 5 ವರ್ಷಗಳ ಸಮಯಾವಕಾಶ ಬೇಕಾಯಿತು ಎಂದು ವ್ಯಂಗ್ಯವಾಡಿದ ಅವರು, ಸಾಮನ್ಯ ಜನರಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಜೆಪಿ ಸರ್ಕಾರ ಏಕೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಕೆಂಪೆಗೌಡರ ಪುತ್ತಳಿ ಉದ್ಘಾಟನೆಗೆ ಬಂದಾಗ ಅಲ್ಲಿ ಜನರ ಕೊರತೆ ಕಂಡು ಬಂದಿದ್ದು ಜನರ ಮನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನವಿದೆ, ಇದು 2023 ರ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಮಾರ್ಮಿಕ ನುಡಿಗಳನ್ನಾಡಿದರು.ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಂಡಿವೆ, ಅದರ ಜೊತೆಗೂಡಿ ಹಲವಾರ ಜನಪರ ಯೋಜನೆಗಳಿಗೆ ಬಿಜೆಪಿ ಸರ್ಕಾರ ಕತ್ತರಿ ಹಾಕಿದೆ, ಅಲ್ಲದೆ ಜಲಜೀವನ ಮಿಷಿನ್ ಯೋಜನೆಯನ್ನು ಜಾರಿಗೊಳಿಸಲು ಪ್ರತಿ ಗ್ರಾಮಗಳಲ್ಲಿಯೂ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆಗಳನ್ನು ಸರ್ಕಾರ  ಹದಗೆಡೆಸಿದೆ ಎಂದು ಆರೋಪಿಸಿದರು.
ರೈತರಿಗೆ ಸಿಗಬೇಕಾದ ನ್ಯಾಯಯುತವಾದ ಕಬ್ಬಿನ ಬೆಲೆ ನೀಡಲು ಸರ್ಕಾರ ವಿಫಲವಾಗಿದೆ ಅಲ್ಲದೆ ಕಬ್ಬಿನ ತೂಕದಲ್ಲಿ ರೈತರಿಗೆ ಮೋಸವಾಗುತ್ತಿದೆ, ಇದನ್ನು ಗಮನಿಸಿದರೆ ಸರ್ಕಾರ ಜನಸಾಮಾನ್ಯರಿಗೆ ಬೆಂಬಲ ನೀಡದೆ ಉದ್ದಿಮೆಗಳ ಪರವಾಗಿ ನಿಂತಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.
ನ್ಯಾಯವಾದಿ ಪಿ.ಎಚ್.ನೀರಲಕೇರಿ ಮಾತನಾಡಿ, ಗುಜರಾತಿನಲ್ಲಿ ಚುನಾವಣಾ ಆಯೋಗದ ಕಟ್ಟಳೆಗಳನ್ನು ಕಡೆಗಣಿಸಿ ಪ್ರಧಾನಿ ಮೋದಿಯವರು ಪಾದಯಾತ್ರೆ ಮಾಡಿದ್ದು ಸರಿಯಲ್ಲ, ಬಿಜೆಪಿ ಸರ್ಕಾರ ಎಲ್ಲಡೆಯೂ ವಾಮಮಾರ್ಗ ಅನುಸರಿಸುವ ಮೂಲಕ ಅಧಿಕಾರಕ್ಕೆ ಏರುತ್ತಲಿದೆ, ಬ್ಯಾಲೇಟ್ ಪೇಪರ ಉಪಯೋಗಿಸುವ ಮೂಲಕ ಬಿಜೆಪಿ ಸರ್ಕಾರ ಚುನಾವಣೆ ಎದುರಿಸಿದ್ದಲ್ಲಿ ಒಂದು ರಾಜ್ಯದಲ್ಲಿಯೂ ಇದು ಅಧಿಕಾರಕ್ಕೆ ಬರಲು ಸಾಧ್ಯವಾಗುವದಿಲ್ಲ ಎಂದು ಹೇಳಿದ ಅವರು, ಬಿಜೆಪಿ ದೇಶದೆಲ್ಲೆಡೆಯೂ ಅವ್ಯವಸ್ಥೆ ಸೃಷ್ಠಿಸುತ್ತಿದೆ, ಎಲ್ಲಡೆ ಮೋದಿ ಅಲೆ ಇದೆ ಎಂದು ತಿರುಗಾಡುತ್ತಿರುವ ಬಿಜೆಪಿಗೆ ಕರ್ನಾಟಕದಲ್ಲಿ ಯಾವ ಅಲೆಯೂ ಇಲ್ಲ ಎಂಬುದನ್ನು ಮತದಾರರು ಸಾಬೀತು ಪಡಿಸಲು ಸಜ್ಜಾಗಿದ್ದಾರೆ ಎಂದು ಹೇಳಿದರು.
ಬೊಮ್ಮಾಯಿ ನೇತೃತ್ವದ ಸರ್ಕಾರ ಸಕ್ಕರೆಯ ಲಾಭಿಗೆ ಮಣಿದ ಸರ್ಕಾರವಾಗಿದೆ, ಎರಡುವರೆ ತಿಂಗಳು ತಡವಾಗಿ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಿದೆ, ಇದರಿಂದ ಬೆಳೆದು ನಿಂತ ಕಬ್ಬು ಒಣಗಿ ಹೋಗಿದ್ದು ಇದು ರೈತನ ಆರ್ಥಿಕ. ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಿದೆ ಇದಕ್ಕೆ ಸಂಬಂಧಪಟ್ಟ ಸಚಿವರು ಹಾಗೂ ಸರ್ಕಾರ ಕಣ್ಣಿದ್ದು ಕುರುಡುತನ ಪ್ರದರ್ಶಿಸುತ್ತಿದೆ ಎಂದು ಚಾಟಿ ಬೀಸಿದ ಅವರು, ಈ ಭಾರಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 132 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ಹೊಳಿ, ಕಲ್ಲಪ್ಪ ಕುಗಟಿ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

Spread the love

About Yuva Bharatha

Check Also

ಗೋಕಾಕ ಬಿಜೆಪಿಯಿಂದ ಜಗದೀಶ ಶೆಟ್ಟರ ಮತ್ತು ರಮೇಶ ಜಾರಕಿಹೊಳಿ ಅವರಿಗೆ ದಿ.20ರಂದು ಅಭಿನಂಧನಾ ಸಮಾರಂಭ.!

Spread the loveಗೋಕಾಕ ಬಿಜೆಪಿಯಿಂದ ಜಗದೀಶ ಶೆಟ್ಟರ ಮತ್ತು ರಮೇಶ ಜಾರಕಿಹೊಳಿ ಅವರಿಗೆ ದಿ.20ರಂದು ಅಭಿನಂಧನಾ ಸಮಾರಂಭ.! ಗೋಕಾಕ: ಬಿಜೆಪಿ …

Leave a Reply

Your email address will not be published. Required fields are marked *

seventeen + sixteen =